ನಿತ್ಯ ಭವಿಷ್ಯ: ಈ ರಾಶಿಯವರಿಂದು ತಾಳ್ಮೆಯಿಂದಿದ್ದರೆ ಲಾಭವಿದೆ

NITYA BHAVISHYA
Published on

ಮೇಷ: ಪರಿವರ್ತನೆಗಾಗಿ ಆಲೋಚಿಸುತ್ತಿರುವ ನಿಮಗೆ ಬೇಕಾದ ನೆರವಿಗಾಗಿ ಸ್ನೇಹಿತರ ಸಹಕಾರವನ್ನು ಪಡೆಯುವಿರಿ. ಶುಭಸಂಖ್ಯೆ: 2

ವೃಷಭ: ಗುಪ್ತ ಶಾಸ್ತ್ರಗಳನ್ನು ವಶ ಮಾಡಿಕೊಳ್ಳಲು ಹೊರಟಿದ್ದೀರಿ. ಗ್ರಹದೋಷ ಎದುರಾದೀತು. ಅದನ್ನು ಕೈಬಿಟ್ಟರೆ ಕ್ಷೇಮವಿದೆ. ಶುಭಸಂಖ್ಯೆ: 1

ಮಿಥುನ: ಇಂಜಿನಿಯರ್​ಗಳು, ವೈದ್ಯಕೀಯ ತಜ್ಞರು, ನರ್ಸ್​ಗಳು, ಹೂ ಹಣ್ಣು ಮಾರಾಟಗಾರರಿಗೆ ಉತ್ತಮ ಲಾಭದ ದಿನವಾಗಿದೆ. ಶುಭಸಂಖ್ಯೆ: 3

ಕಟಕ: ವಿಶೇಷ ಪರಿಣತಿ ಪಡೆಯಲು ಇಚ್ಛಿಸುತ್ತಿರುವ ವಿದ್ಯಾರ್ಥಿಗಳಿಗೆ ಕನಸು ಸಾಕಾರವಾಗಲು ಹೇರಳವಾದ ಅವಕಾಶಗಳಿವೆ. ಶುಭಸಂಖ್ಯೆ: 2

ಸಿಂಹ: ಮುಂದೆ ಬರಲಿರುವ ಕಷ್ಟದ ವಿಚಾರಗಳ ಕುರಿತ ದೂರದರ್ಶಿತ್ವದಿಂದ ಮಾನಸಿಕ ಬಲವನ್ನು ಪಡೆಯುವಿರಿ. ಶುಭಸಂಖ್ಯೆ: 6

ಕನ್ಯಾ: ಸಿಟ್ಟಿನ ಭರದಲ್ಲಿ ಸುಮ್ಮನೆ ಏನನ್ನೋ ಹೇಳಿ ಎಲ್ಲರ ವಿರೋಧವನ್ನು ಕೂಡ ಕಟ್ಟಿಕೊಳ್ಳದಿರಿ. ತಾಳ್ಮೆಯಿಂದಿದ್ದರೆ ಲಾಭವಿದೆ. ಶುಭಸಂಖ್ಯೆ: 5

ತುಲಾ: ಜಾಣರಾಗಿದ್ದರೂ ಎಡವುತ್ತೀರಿ. ನಯವಾದ ಬಿಳಿಯ ಪುಡಿಗಳೆಲ್ಲ ಸಕ್ಕರೆಯೇ ಎಂಬಂಥ ತಪು್ಪ ಕಲ್ಪನೆಯನ್ನು ಬಿಡಿ. ಶುಭಸಂಖ್ಯೆ: 9

ವೃಶ್ಚಿಕ: ಎಲ್ಲರಿಗೂ ಒಳಿತನ್ನು ಉಂಟá-ಮಾಡುವ ವೆಂಕಟೇಶ್ವರನನ್ನು ಭಜಿಸಿ. ಸಂಕಟಗಳಿಂದ ಬಹು ಬೇಗನೆ ಪಾರಾಗುವಿರಿ. ಶುಭಸಂಖ್ಯೆ: 8

ಧನಸ್ಸು: ಪದೋನ್ನತಿಗಾಗಿ ಕೆಲವರಿಗೆ ಹೆಚ್ಚಿನದಾದ ಅವಕಾಶ ಸಿಗಲಿದೆ. ಪೊಲೀಸ್ ಅಧಿಕಾರಿಗಳು ಮೆಚ್ಚುಗೆಯನ್ನು ಗಳಿಸುವರು. ಶುಭಸಂಖ್ಯೆ: 7

ಮಕರ: ಕುಟುಂಬದ ಹತ್ತಿರದ ಬಂಧುಗಳಿಂದ ಒಳಿತಿನ ವಿಚಾರದಲ್ಲಿ ವಿಶೇಷ ರೀತಿಯದಾದ ಒತ್ತಾಸೆಯು ಲಭ್ಯವಾಗಲಿದೆ. ಶುಭಸಂಖ್ಯೆ: 2

ಕುಂಭ: ಪ್ರವಾಸದ ಕಾರ್ಯಕ್ರಮ ಬಂದರೆ ಹೋಗಬೇಡಿ. ಯಶಸ್ಸಿಗೆ ಬೇಕಾದ ಸಿದ್ಧತೆಯನ್ನು ಆರಂಭ ಮಾಡಿಕೊಳ್ಳುವುದು ಉತ್ತಮ. ಶುಭಸಂಖ್ಯೆ: 1

ಮೀನ: ನಿಮ್ಮ ನಿರ್ಧಾರಗಳಿಗೇ ವಿಶೇಷವಾದ ಮಹತ್ವ ನೀಡಿ. ಆದರೆ ಬೇರೆಯವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಲು ಹೋಗಬೇಡಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net