

ಮೇಷ: ನಿಮ್ಮ ಲೆಕ್ಕಾಚಾರ ಸ್ವಲ್ಪ ಎಡವಟ್ಟಾಯಿತು ಎನಿಸುತ್ತದೆ. ಆದರೆ ಪುನಃ ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ. ಅದೃಷ್ಟ ಸಂಖ್ಯೆ: 1
ವೃಷಭ: ದೊಡ್ಡ ಕೆಲಸವನ್ನು ನೀವೇ ಮಾಡಿಕೊಡಬೇಕು ಎಂದು ಬರುತ್ತಾರೆ. ಅದನ್ನು ಒಪ್ಪಿಕೊಳ್ಳುವ ಧೈರ್ಯ ನಿಮಗೆ ಕಡಿಮೆ. ಅದೃಷ್ಟ ಸಂಖ್ಯೆ: 3
ಮಿಥುನ: ಬಹಳ ಎಚ್ಚರದಿಂದ ಓಡಾಡಿ ಕಾರಣ. ಕಾಲಿಗೆ ಗಾಯವಾಗುವ ಸಾಧ್ಯತೆ ಅಥವಾ ಕಾಲುನೋವು ಇದೆ. ಅದೃಷ್ಟ ಸಂಖ್ಯೆ: 9
ಕಟಕ: ಹಿಂದೆ ಆರಂಭಿಸಿ ನಿಲ್ಲಿಸಿದ ಕೆಲಸ ನೆನಪಾಗಿ ಅದನ್ನು ಇವತ್ತೇ ಮುಗಿಸುವ ವ್ಯರ್ಥ ಪ್ರಯತ್ನ ಮಾಡುವಿರಿ. ಅದೃಷ್ಟ ಸಂಖ್ಯೆ: 5
ಸಿಂಹ:ನಿಮ್ಮೊಡನೆ ಜಗಳ ಮಾಡುವ ವ್ಯಕ್ತಿ ಸ್ವಂತ ಬುದ್ಧಿಯಿಂದ ಜಗಳವಾಡುತ್ತಿಲ್ಲ ಎಂಬುದನ್ನು ಅರಿತರೆ ಸಾಕು. ಅದೃಷ್ಟ ಸಂಖ್ಯೆ: 6
ಕನ್ಯಾ: ಸಂಗೀತಮಯ ಅಥವಾ ಹಾಸ್ಯಭರಿತ ದಿನವಾಗಿಸುವ ನಿಮ್ಮ ಯತ್ನ ಸಫಲವಾದೀತು. ಮಾತು ಹಿಡಿತದಲ್ಲಿರಲಿ. ಅದೃಷ್ಟ ಸಂಖ್ಯೆ: 2
ತುಲಾ: ಆರಕ್ಕೇರದ ಮೂರಕ್ಕಿಳಿಯದಂತಹ ವಿಚಾರವೊಂದು ಮಾನಸಿಕವಾಗಿ ಕಾಡುತ್ತದೆ. ಚಿಂತೆ ಬಿಟ್ಟು ಕೆಲಸ ಮಾಡಿ. ಅದೃಷ್ಟ ಸಂಖ್ಯೆ: 4
ವೃಶ್ಚಿಕ: ಒಬ್ಬರೇ ಬಹಳ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ. ನಿಮ್ಮ ಧೈರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತದೆ. ಅದೃಷ್ಟ ಸಂಖ್ಯೆ: 5
ಧನುಸ್ಸು: ತಂದೆ ಅಥವಾ ಗುರುಸಮಾನರಾದವರ ಕೆಲಸವೊಂದನ್ನು ನೀವೇ ಜವಾಬ್ದಾರಿ ವಹಿಸಿ ಮಾಡಿಕೊಡಬೇಕಾಗುತ್ತದೆ. ಅದೃಷ್ಟ ಸಂಖ್ಯೆ: 1
ಮಕರ: ಎಲ್ಲೋ ಹೋಗಬೇಕು ಎಂದು ಹೊರಟವರು ಇನ್ನೆಲ್ಲಿಗೋ ಹೋಗಿ ತಲುಪುವಂತಹ ಸಾಧ್ಯತೆಗಳು ಅಧಿಕ. ಅದೃಷ್ಟ ಸಂಖ್ಯೆ: 9
ಕುಂಭ: ಉಪಯೋಗಿಸುವ ವಿಧಾನ ಗೊತ್ತಿಲ್ಲದವರು ನಿಮ್ಮ ವಸ್ತುವೊಂದನ್ನು ಬಳಸಲು ತಿಳಿಯದೆ ಹಾಳು ಮಾಡಬಹುದು. ಅದೃಷ್ಟ ಸಂಖ್ಯೆ: 5
ಮೀನ: ಎಲ್ಲ ವಿಚಾರಗಳಲ್ಲಿಯೂ ಮುಂದೆಯೇ ಇರಬೇಕು ಎಂದು ನೀವು ಮಾಡುವ ಪ್ರಯತ್ನ ಸಫಲವಾಗುತ್ತದೆ. ಅದೃಷ್ಟ ಸಂಖ್ಯೆ: 3