

ಮೇಷ: ಅನ್ಯರ ಅವಲಂಬನೆ ಸಲ್ಲದು. ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಶುಭಸಂಖ್ಯೆ: 7
ವೃಷಭ: ಆರೋಗ್ಯದಲ್ಲಿ ಏರುಪೇರು ಆಗಗಬಹುದು, ಎಚ್ಚರದಿಂದಿರಿ. ಪರರಿಗೆ ಸಹಾನುಭೂತಿ ತೋರುವಿರಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 1
ಮಿಥುನ: ಮಿತ್ರರ ಭೇಟಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ. ಹಿತ ಶತ್ರುಬಾಧೆ. ಪರಸ್ತ್ರೀಯಿಂದ ತೊಂದರೆ, ಅಪವಾದ. ಶುಭಸಂಖ್ಯೆ: 3
ಕಟಕ: ಕಾರ್ಯಕ್ಷೇತ್ರದಲ್ಲಿ ಒತ್ತಡ ಆದೀತು. ಶ್ರಮಕ್ಕೆ ತಕ್ಕ ಫಲ. ದೂರ ಪ್ರಯಾಣ. ದಾಂಪತ್ಯದಲ್ಲಿ ವಿರಸ. ಅಧಿಕ ಖರ್ಚು ನಿಯಂತ್ರಿಸಿ. ಶುಭಸಂಖ್ಯೆ: 8
ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ. ಧಾರ್ವಿುಕ ವಿಚಾರದಲ್ಲಿ ಆಸಕ್ತಿ. ಕೃಷಿಕರಿಗೆ ಲಾಭದಾಯಕ ದಿನ. ಮಾತಾಪಿತರಲ್ಲಿ ವಾತ್ಸಲ್ಯ. ಶುಭಸಂಖ್ಯೆ: 8
ಕನ್ಯಾ: ಅತಿಯಾದ ಆತ್ಮವಿಶ್ವಾಸದಿಂದ ನಷ್ಟ. ದುಡುಕು ಸ್ವಭಾವ ಒಳ್ಳೆಯದಲ್ಲ. ಆಕಸ್ಮಿಕ ಧನಲಾಭವಾಗಲಿದೆ. ಮನಃಶಾಂತಿ ಸಿಗುವುದು. ಶುಭಸಂಖ್ಯೆ: 9
ತುಲಾ: ಉದ್ಯೋಗದಲ್ಲಿ ತೊಂದರೆ. ತಾಳ್ಮೆ ಅತ್ಯಗತ್ಯ. ನಯವಂಚಕರ ಮಾತಿಗೆ ಮರುಳಾಗದಿರಿ. ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ. ಶುಭಸಂಖ್ಯೆ: 5
ವೃಶ್ಚಿಕ: ಸಹೋದ್ಯೋಗಿಗಳೊಡನೆ ವೈಮನಸ್ಸು. ವಿಪರೀತ ಖರ್ಚು. ದೂರ ಪ್ರಯಾಣ ಮಾಡಬೇಕಾಗುವುದು. ನಂಬಿಕೆ ದ್ರೋಹ. ಶುಭಸಂಖ್ಯೆ: 7
ಧನುಸ್ಸು: ಕಾರ್ಯೂನುಕೂಲ. ಅಧಿಕ ತಿರುಗಾಟ. ಆರೋಗ್ಯದಲ್ಲಿ ಏರುಪೇರು ಆದೀತು. ಚಂಚಲ ಮನಸ್ಸು. ಸುಳ್ಳು ಹೇಳುವುದು ತರವಲ್ಲ. ಶುಭಸಂಖ್ಯೆ: 2
ಮಕರ: ಅನಿರೀಕ್ಷಿತ ದ್ರವ್ಯಲಾಭ. ಋಣವಿಮೋಚನೆ. ವಾಹನ ಯೋಗ. ಅಕಾಲ ಭೋಜನ. ವೃಥಾ ತಿರುಗಾಟ. ಮಿತ್ರರ ಭೇಟಿ. ಶುಭಸಂಖ್ಯೆ: 9
ಕುಂಭ: ಮಾತಿನಲ್ಲಿ ಹಿಡಿತವಿದ್ದರೆ ಕ್ಷೇಮ. ಸ್ಥಳ ಬದಲಾವಣೆ ಸಾಧ್ಯತೆ. ಪರರ ಮಾತಿಗೆ ಕಿವಿ ಕೊಡಬೇಡಿ. ಕೆಲಸದಲ್ಲಿ ಏಕಾಗ್ರತೆ ಸಾಧಿಸುವಿರಿ. ಶುಭಸಂಖ್ಯೆ: 4
ಮೀನ: ಜನರಿಂದ ತೊಂದರೆ. ವಿದ್ಯಾರ್ಥಿಗಳಲ್ಲಿ ಗೊಂದಲ. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ರಕ್ತ ಸಂಬಂಧೀ ಕಾಯಿಲೆ. ಶುಭಸಂಖ್ಯೆ: 7