ಈ ರಾಶಿಯವರಿಗಿಂದು ನಿರೀಕ್ಷಿಸಿದ ಧನಲಾಭ, ದಿನಾಂತ್ಯದಲ್ಲಿ ಶುಭಸುದ್ದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ. ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ಗೊಂದಲ ಬೇಡ. ಶುಭಸಂಖ್ಯೆ: 9

ವೃಷಭ: ಬಂಧು-ಮಿತ್ರರೊಂದಿಗೆ ಸಂತೋಷಕೂಟ. ಆತ್ಮೀಯರ ಸಲಹೆ ತಿರಸ್ಕರಿಸಬೇಡಿ. ಮೇಲಧಿಕಾರಿ ಗಳಿಂದ ವಿಶೇಷ ಮಾರ್ಗದರ್ಶನ. ಶುಭಸಂಖ್ಯೆ: 5

ಮಿಥುನ: ನಿಮ್ಮ ನಿರ್ಧಾರ ಮಾನಸಿಕ ಹಿಂಸೆಗೆ ಕಾರಣ ವಾಗಬಹುದು. ಮಹಿಳೆಯರಿಗೆ ಆರ್ಥಿಕ ಲಾಭ. ಲಕ್ಷ್ಮಿ ನರಸಿಂಹನನ್ನು ಆರಾಧಿಸಿ. ಶುಭಸಂಖ್ಯೆ: 7

ಕಟಕ: ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ. ಅನಗತ್ಯ ವಾಗ್ವಾದಗಳಿಗೆ ಅವಕಾಶ ಕೊಡಬೇಡಿ. ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 6

ಸಿಂಹ: ಒತ್ತಡಗಳನ್ನು ಜಾಗ್ರತೆಯಿಂದ ನಿಭಾಯಿಸಿ. ಆರೋಗ್ಯ ಸಮಸ್ಯೆ ಕಾಡಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 9

ಕನ್ಯಾ: ರಾಜಕಾರಣಿಗಳಿಗೆ ವಿಶೇಷ ಮನ್ನಣೆ. ಕಲಾವಿದರು ಬಂದ ಅವಕಾಶವನ್ನು ತಿರಸ್ಕರಿಸಬೇಡಿ. ವ್ಯಾಪಾರಸ್ಥರಿಗೆ ನಷ್ಟ. ಶುಭಸಂಖ್ಯೆ:1

ತುಲಾ: ಗೃಹ ನಿರ್ವಣಕ್ಕೆ ಚಾಲನೆ. ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಒಪ್ಪಂದ. ತಂದೆ ತಾಯಿಯ ಮಾತನ್ನು ತಿರಸ್ಕರಿಸಬೇಡಿ. ಶುಭಸಂಖ್ಯೆ: 4

ವೃಶ್ಚಿಕ: ಸಹೋದರರೊಂದಿಗೆ ವಾಗ್ವಾದ. ಹಳೆಯ ಸ್ನೇಹಿತನ ಭೆೇಟಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 7

ಧನುಸ್ಸು: ನಿಮ್ಮ ನಿರ್ಧಾರವೇನಿಮಗೆ ಮುಳುವಾಗಬಹುದು. ಯೋಚಿಸಿ ಮಾತನಾಡಿ. ಮಕ್ಕಳಿಂದ ಶುಭ ಸುದ್ದಿ. ಅನಾರೋಗ್ಯ. ಶುಭಸಂಖ್ಯೆ: 4

ಮಕರ: ಕೆಲಸ ಕಾರ್ಯಗಳಲ್ಲಿ ವಿಘ್ನ ಎದುರಾದೀತು. ಮನೆಯವರೊಂದಿಗೆ ಚರ್ಚಿಸಿ ತೀರ್ಮಾನಿಸಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 5

ಕುಂಭ: ವ್ಯಾಪಾರಸ್ಥರಿಗೆ ಧನ ನಷ್ಟ. ವಿದ್ಯಾರ್ಥಿಗಳಿಗೆ ವಿಶೇಷ ಯಶಸ್ಸು. ನಿರೀಕ್ಷಿಸಿದ ಧನಲಾಭ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 7

ಮೀನ: ಕಚೇರಿಯಲ್ಲಿ ವಿಶೇಷ ಜವಾಬ್ದಾರಿ. ಅನಿರೀಕ್ಷಿತ ಅತಿಥಿಯ ಆಗಮನ. ಧರ್ಮಕಾರ್ಯ ಆಸಕ್ತಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net