

ಮೇಷ: ಮಾಡುವ ಉದ್ಯೋಗದಲ್ಲಿ ನಿರಾಸಕ್ತಿ ಕಾಡಬಹುದು. ಹಣಕಾಸಿನ ತೊಂದರೆಯಾಗಿ ಬೇಸರ. ಸಂಜೆ ವೇಳೆಗೆ ಶುಭಸುದ್ದಿ ಕೇಳುವಿರಿ. ಶುಭಸಂಖ್ಯೆ: 9
ವೃಷಭ: ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ. ಮೇಲಧಿಕಾರಿಗಳಿಂದ ಕಿರಿಕಿರಿ. ವಿಶ್ರಾಂತಿಯ ಅವಶ್ಯಕತೆ ಇದೆ, ಅಲಕ್ಷ್ಯ ಬೇಡ. ಶುಭಸಂಖ್ಯೆ: 1
ಮಿಥುನ: ಕೆಲಸದಲ್ಲಿ ಯಶಸ್ಸು. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ. ಮಾನಸಿಕ ನೆಮ್ಮದಿ. ಶುಭಸಂಖ್ಯೆ: 8
ಕಟಕ: ಕುಟುಂಬದಲ್ಲಿ ಸಮಸ್ಯೆ. ವಿವಾದಗಳಿಂದ ದೂರವಿರುವುದು ಒಳ್ಳೆಯದು. ತೊಂದರೆಗಳು ದೂರವಾಗುವ ಸಮಯ. ಶುಭಸಂಖ್ಯೆ: 2
ಸಿಂಹ: ಟೈಲ್ಸ್ ಉದ್ಯಮದಲ್ಲಿ ಇರುವವರು ಎಚ್ಚರದಿಂದಿರಿ. ಹಿರಿಯರಿಂದ ಧನಸಹಾಯ ಸಿಗುತ್ತದೆ. ಕ್ರೀಡಾಪಟುಗಳಿಗೆ ಶುಭ. ಶುಭಸಂಖ್ಯೆ: 5
ಕನ್ಯಾ: ಕುಟುಂಬದಲ್ಲಿ ಗೌರವ. ಅಪರೂಪದ ಅತಿಥಿಗಳ ಆಗಮನದಿಂದ ಸಂತೋಷ. ಸಕಾರಾತ್ಮಕ ವಾತಾವರಣ ಹೆಚ್ಚುವುದು. ಶುಭಸಂಖ್ಯೆ: 9
ತುಲಾ: ಉದ್ಯೋಗ ಬದಲಾವಣೆಗೆ ಸುಸಮಯ. ವ್ಯಾಪಾರದಲ್ಲಿ ಜಾಗರೂಕರಾಗಿರಿ. ವಿವಾಹ ಯೋಗ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4
ವೃಶ್ಚಿಕ: ಅನಾರೋಗ್ಯದ ತೊಂದರೆ. ಮಾನಸಿಕ ಅಸ್ಥಿರತೆ ಕಾಡುವ ಸಾಧ್ಯತೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಅಪಯಶಸ್ಸು. ಧೈರ್ಯ ತುಂಬಿ. ಶುಭಸಂಖ್ಯೆ: 2
ಧನುಸ್ಸು: ವೈದ್ಯಕೀಯ ವೃತ್ತಿಯವರಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ. ದಿನಸಿ ವ್ಯಾಪಾರದಲ್ಲಿ ಉತ್ತಮ ಲಾಭ. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ. ಶುಭಸಂಖ್ಯೆ: 3
ಮಕರ: ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿಯಾದೀತು. ಆರ್ಥಿಕ ಕುಸಿತದಿಂದ ಬೇಸರ. ಬಂಧುಗಳೊಂದಿಗೆ ವಾಗ್ವಾದ. ಶುಭಸಂಖ್ಯೆ: 4
ಕುಂಭ: ಸಾಧು ಸಂತರ ದರ್ಶನ ಮಾಡುವಿರಿ. ರಾಜಕೀಯ ಜನರಿಗೆ ಪ್ರತಿಷ್ಠೆ. ಮನಸ್ಸು ನಿಯಂತ್ರಣದಲ್ಲಿ ಇರುವುದಿಲ್ಲ. ಎಚ್ಚರದಿಂದಿರಿ. ಶುಭಸಂಖ್ಯೆ: 7
ಮೀನ: ಪಿತ್ರಾರ್ಜಿತ ಆಸ್ತಿಯಿಂದ ಲಾಭ ಬರಲಿದೆ. ಅನಿರೀಕ್ಷಿತವಾಗಿ ಸನ್ಮಾನ ದೊರೆಯುವುದು. ಮನಸ್ಸು ದುರ್ಬಲವಾಗುವುದು. ಶುಭಸಂಖ್ಯೆ: 2