

ಮೇಷ: ಸುಲಭ ವಿಷಯವನ್ನು ಗೋಜಲು ಮಾಡಿಕೊಳ್ಳಬೇಡಿ. ಸಂಧಾನದಿಂದ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ. ಶುಭಸಂಖ್ಯೆ: 3
ವೃಷಭ: ಆತ್ಮೀಯರೊಂದಿಗೆ ಸಮಾಲೋಚನೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಬೈಗುಳ. ಸಮಾಧಾನ ಚಿತ್ತದಿಂದಿರಿ. ಶುಭಸಂಖ್ಯೆ: 9
ಮಿಥುನ: ತಾಳ್ಮೆಯಿರಲಿ. ಕುಟುಂಬದ ಜತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ. ಪತ್ನಿಯೊಂದಿಗೆ ವಿಹಾರ.ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 8
ಕಟಕ: ಆಲಸ್ಯತನದಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಅನ್ನೋ ಪರಿಸ್ಥಿತಿ. ಗೃಹನಿರ್ಮಾಣ ಕೆಲಸಕ್ಕೆ ಚಿಂತನೆ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 1
ಸಿಂಹ: ಹಿತಶತ್ರುಗಳಿಂದ ಅಸಮಾಧಾನ. ತಂದೆ-ತಾಯಿಯ ಸಲಹೆಯನ್ನು ಸ್ವೀಕರಿಸಿ. ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 3
ಕನ್ಯಾ: ಹಲವು ದಿನಗಳಿಂದ ಇದ್ದ ವಿವಾದ ಇತ್ಯರ್ಥವಾಗಲಿದೆ. ಕುಟುಂಬದವರ ಭೆೇಟಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಶುಭಸಂಖ್ಯೆ: 6
ತುಲಾ: ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6
ವೃಶ್ಚಿಕ: ಗ್ರಾಮದಿಂದ ಬಂಧುಗಳ ಆಗಮನ. ಕುಟುಂಬದೊಂದಿಗೆ ಸಂತಸದ ಕ್ಷಣಗಳು. ಪತ್ನಿ ಜತೆ ವಿರಸ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5
ಧನಸ್ಸು: ಇಂದು ಸಿಕ್ಕಿದ ಜಯದಲ್ಲಿ ಮೈ ಮರೆಯಬೇಡಿ. ಶತ್ರುಗಳನ್ನು ಹಗುರವಾಗಿ ಭಾವಿಸಬೇಡಿ. ಕುಟುಂಬದ ವಿವಾದ ಸುಖಾಂತ್ಯ. ಶುಭಸಂಖ್ಯೆ: 4
ಮಕರ: ನಿಮ್ಮ ನೂತನ ಯೋಜನೆಗಳಿಗೆ ಕುಟುಂಬದ ಬೆಂಬಲ ಪಡೆಯಿರಿ. ಪತ್ನಿ-ಮಕ್ಕಳೊಂದಿಗೆ ಸಂತಸದಿಂದ ಇರಲು ಪ್ರಯತ್ನಿಸಿ. ಶುಭಸಂಖ್ಯೆ: 3
ಕುಂಭ: ಹಲವು ಪ್ರತಿರೋಧಗಳು ಬರಬಹುದು. ಗಣಪತಿಯನ್ನು ಪೂಜಿಸಿ. ಆರೋಗ್ಯದ ಕಡೆ ನಿಗಾ ಇರಲಿ. ಧನವ್ಯಯ. ಶುಭಸಂಖ್ಯೆ: 7
ಮೀನ : ಕನಸು ನನಸಾಗುವ ಸುದಿನ. ವಿವಾಹದ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವಿರಿ. ದಿನಾಂತ್ಯದಲ್ಲಿ ಶುಭವಾರ್ತೆ ಶುಭ ಸಂಖ್ಯೆ 8.