ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಂಬಂಧಿಗಳಿಂದ ಆತಂಕದ ಕ್ಷಣ ಸೃಷ್ಟಿಯಾಗುವ ಸಾಧ್ಯತೆ ಇದೆ

NITYA BHAVISHYA
Published on

ಮೇಷ: ಅತಿಯಾಸೆಯನ್ನು ತಡೆಯಿರಿ. ಚಿನ್ನ, ಒಡವೆ, ಬೆಲೆಬಾಳುವ ಹರಳುಗಳ ಖರೀದಿಯಿಂದ ತೊಂದರೆಯಾಗಲಿದೆ. ಶುಭಸಂಖ್ಯೆ: 9

ವೃಷಭ: ಕನಸುಗಳು ವಿಜಯ ಸಾಧಿಸಲಿ ಎಂಬ ನಿಮ್ಮ ಆಶಯ ತಪ್ಪಲ್ಲ. ಆದರೆ ಜಾಣ್ಮೆಯಿಂದ ಗೆಲುವು ಸಾಧಿಸಲು ಯತ್ನಿಸಿ. ಶುಭಸಂಖ್ಯೆ: 8

ಮಿಥುನ: ಸಾಕಷ್ಟು ಎಚ್ಚರಿಕೆ ಇರಲಿ. ಕಳ್ಳತನದ ಅಪಾಯದಿಂದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳಬೇಕಾದೀತು. ಶುಭಸಂಖ್ಯೆ: 7

ಕಟಕ: ಇಂದಿನ ಕೆಲಸವನ್ನು ಈಗಲೇ ಮಾಡಿ ಮುಗಿಸಿಬಿಡಿ. ಒಳಿತಿಗೆ ಬೇಕಾದ ಮಾರ್ಗ ಸಿಗಲು ಅಧಿಕ ಅವಕಾಶಗಳಿವೆ. ಶುಭಸಂಖ್ಯೆ: 6

ಸಿಂಹ: ಮನಬಂದಂತೆ ಮಾತಾಡಲು ಯತ್ನಿಸಬೇಡಿ. ದುಷ್ಟರಾದ ಜಾಣರಿಂದಲೇ ಅಧಿಕವಾದ ತೊಂದರೆಗಳು ಎದುರಾದಾವು. ಶುಭಸಂಖ್ಯೆ: 5

ಕನ್ಯಾ: ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುತ್ತೀರಿ. ನಾಯಕತ್ವ ಹೊಂದಿದರೂ ಗೆಲ್ಲುತ್ತೀರಿ. ಶುಭಸಂಖ್ಯೆ: 4

ತುಲಾ: ಪಿತ್ರಾರ್ಜಿತ ಆಸ್ತಿಯ ಅನೇಕ ವಿವಾದಗಳನ್ನು ರಾಜಿಯ ಮೂಲಕ ಬಗೆಹರಿಸಿಕೊಳ್ಳಲು ತಕ್ಕಂತಹ ಅವಕಾಶಗಳಿವೆ. ಶುಭಸಂಖ್ಯೆ: 3

ವೃಶ್ಚಿಕ: ಆಪ್ತವಾದ ಮಾತುಕತೆಯ ಮೂಲಕ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮಿತ್ರವೃಂದದ ಸಹಕಾರವಿದೆ. ಶುಭಸಂಖ್ಯೆ: 2

ಧನಸ್ಸು: ಸಂಬಂಧಿಗಳು ತಗಾದೆ ಎಬ್ಬಿಸಿ ಆತಂಕದ ಕ್ಷಣಗಳನ್ನು ಸೃಷ್ಟಿಸಬಹುದು. ಅಂಥವರನ್ನು ಚಾತುರ್ಯದಿಂದ ಎದುರಿಸಿ. ಶುಭಸಂಖ್ಯೆ: 1

ಮಕರ: ರಾಜಕೀಯ ಸಂಬಂಧಿ ಚಟುವಟಿಕೆಗಳು ವಿನೂತನವಾದ ಸಿದ್ಧಿಯನ್ನು ನಿಮಗೆ ಯಶಸ್ವಿಯಾಗಿ ತರಲಿವೆ. ಶುಭಸಂಖ್ಯೆ: 9

ಕುಂಭ: ಸಾಹಿತ್ಯ, ಸಂಗೀತ, ಕೃಷಿ ಇವುಗಳಲ್ಲಿ ತೊಡಗಿಸಿಕೊಂಡವರಿಗೆ ಹೆಚ್ಚಿನ ಸಾಧನೆಗೆ ವಿಶೇಷ ಅವಕಾಶಗಳು ಲಭ್ಯ. ಶುಭಸಂಖ್ಯೆ: 8

ಮೀನ:  ಪಾಲುದಾರಿಕೆಯಲ್ಲಿ ಉದ್ಯಮವನ್ನು ವಿಸ್ತಾರ ಮಾಡಿಕೊಳ್ಳಬೇಕೆಂಬ ಕನಸು ನನಸಾಗುವ ಸಾಧ್ಯತೆಯಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net