ಈ ರಾಶಿಯವರಿಗೆ ಇಂದು ಕಡಿಮೆ ಪರಿಶ್ರಮದಲ್ಲಿ ಹೆಚ್ಚಿನ ಲಾಭ: ನಿತ್ಯ ಭವಿಷ್ಯ

Nithya Bhavishya
Published on

ಮೇಷ: ಒಪ್ಪಂದದ ವ್ಯವಹಾರದಲ್ಲಿ ಅಧಿಕ ಲಾಭ. ಯಂತ್ರೋಪಕರಣಗಳ ವ್ಯಾಪಾರಿಗಳಿಗೆ ಧನ ನಷ್ಟ. ಹೃದಯಬೇನೆ ಸಾಧ್ಯತೆ. ಶುಭಸಂಖ್ಯೆ:1

ವೃಷಭ: ಆತ್ಮೀಯರ ಮಾರ್ಗದರ್ಶನದಿಂದ ಗೊಂದಲದಿಂದ ಮುಕ್ತಿ. ಶ್ರಮವಿಲ್ಲದೆ ಕಾರ್ಯಸಿದ್ದಿ. ಮಕ್ಕಳ ಅಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 8

ಮಿಥುನ: ಕಾರ್ಯಗಳಲ್ಲಿ ಯಶಸ್ಸು. ಮನಸ್ಸಿಗೆ ಸಮಾಧಾನ. ಹೋಟೆಲ್ ಉದ್ಯಮದವರಿಗೆ ಲಾಭ. ನಿಮ್ಮ ಆಕರ್ಷಕ ಮಾತಿನಿಂದ ಗೌರವ. ಶುಭಸಂಖ್ಯೆ: 4

ಕಟಕ: ಲೆಕ್ಕಾಚಾರದ ವ್ಯತ್ಯಾಸದಿಂದ ಧನ ನಷ್ಟ. ಕಾರ್ಯಕ್ಷೇತ್ರದಲ್ಲಿ ಒತ್ತಡ. ಅಮೂಲ್ಯ ವಸ್ತುವಿನ ನಷ್ಟ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ:3

ಸಿಂಹ: ಗೊಂದಲದಿಂದ ಅಶಾಂತಿ. ಸಹೋದ್ಯೋಗಿಗಳ ಕಿರಿಕಿರಿ. ವ್ಯಾಪಾರಸ್ಥರಿಗೆ ಹಿನ್ನಡೆ, ಹಿರಿಯರ ಸಹಕಾರದಿಂದ ಪ್ರಗತಿ. ಶುಭಸಂಖ್ಯೆ: 2

ಕನ್ಯಾ: ಭೂ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣುವಿರಿ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ನೂತನ ವಾಹನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 2

ತುಲಾ: ಹಿರಿಯರಿಂದ ಸಹಕಾರ. ಮನಸ್ಸಿಗೆ ಸಂತೋಷವಾಗುವ ಸಂದೇಶ ಬರಲಿದೆ. ಸಂಗಾತಿ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 4

ವೃಶ್ಚಿಕ: ವಾಹನ ಚಲಾಯಿಸುವಾಗ ಎಚ್ಚರ. ಕುಟುಂಬದ ವಿಚಾರದಲ್ಲಿ ಮನೆಯಲ್ಲಿ ವಾದ ವಿವಾದ. ಕಡಿಮೆ ಪರಿಶ್ರಮದಲ್ಲಿ ಹೆಚ್ಚಿನ ಲಾಭ. ಶುಭಸಂಖ್ಯೆ: 5

ಧನುಸ್ಸು: ನಿರೀಕ್ಷೆಯಂತೆ ಕಾರ್ಯಸಿದ್ಧಿ. ನೆಮ್ಮದಿ. ಕಚೇರಿಯಲ್ಲಿ ಒಮ್ಮತದ ಅಭಿಪ್ರಾಯದಿಂದ ಕಾರ್ಯಸಾಧನೆ. ಮಿತ್ರನ ಭೆೇಟಿ. ಶುಭಸಂಖ್ಯೆ: 6

ಮಕರ: ಆಕಾಂಕ್ಷೆಗಳು ಈಡೇರುವ ಕಾಲ ಕೂಡಿಬಂದಿದೆ. ಸಾರ್ವಜನಿಕ ರಂಗದಲ್ಲಿ ತಾಳ್ಮೆಯಿರಲಿ. ಹಿತೈಷಿಗಳ ಸಲಹೆ ಪಾಲಿಸಿ. ಶುಭಸಂಖ್ಯೆ: 7

ಕುಂಭ: ಅಪರಿಚಿತರಿಂದ ತೊಂದರೆ ಆದೀತು. ಕೆಲಸದಲ್ಲಿ ಅಡೆತಡೆ ಬಂದರೂ ಆತ್ಮವಿಶ್ವಾಸದಿಂದ ಕಾರ್ಯ ಸಿದ್ಧಿ ಕುಟುಂಬದಲ್ಲಿ ಒತ್ತಡ. ಶುಭಸಂಖ್ಯೆ: 9

ಮೀನ: ಮನೋಬಲದಿಂದ ಸಾಧನೆ ಮಾಡಿದರೆ ಸಿದ್ಧಿ. ಧಾರ್ವಿುಕ ಕಾರ್ಯದಲ್ಲಿ ತೊಡಗಿಕೊಳ್ಳಿ. ಸಂಗಾತಿ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net