ಈ ರಾಶಿಯವರಿಗಿಂದು ಹಿರಿಯರಿಂದ ಧನ ಸಹಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸಗಳು ಯಶಸ್ವಿಯಾಗಲಿವೆ. ಆಭರಣ ತಯಾರಿಸುವವರಿಗೆ ಬೇಡಿಕೆ. ಸಾಲಗಾರರ ಕಿರಿಕಿರಿ ಅನುಭವಿಸಬೇಕಾಗುವುದು. ಶುಭಸಂಖ್ಯೆ: 9

ವೃಷಭ: ವಿವಾಹಾಕಾಂಕ್ಷಿಗಳಿಗೆ ಶಕ್ಷಿುಭ ಸುದ್ದಿ ಕಾದಿದೆ. ನಟನಾ ರಂಗದಲ್ಲಿ ಅವಕಾಶಗಳು ಲಭ್ಯ. ಕುಟುಂಬದಲ್ಲಿ ಒಮ್ಮತವಿರುತ್ತದೆ. ಶುಭಸಂಖ್ಯೆ: 1

ಮಿಥುನ: ಸುಂದರ ತಾಣಗಳಿಗೆ ಭೇಟಿ ನೀಡುವಿರಿ. ಆಸ್ತಿ ವಿಷಯದಲ್ಲಿ ಲಾಭವಾಗಲಿದೆ. ಪ್ರಯಾಣದಿಂದ ದೇಹಾಲಸ್ಯ ಕಾಡಬಹುದು. ಶುಭಸಂಖ್ಯೆ: 5

ಕಟಕ: ಎಂಥದೇ ಸಂದರ್ಭ ಎದುರಾದರೂ ಧೈರ್ಯದಿಂದ ವರ್ತಿಸಿ. ಆಕಸ್ಮಿಕ ಧನ ಲಾಭ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು. ಶುಭಸಂಖ್ಯೆ: 2

ಸಿಂಹ: ಆರೋಗ್ಯದಲ್ಲಿ ಸುಧಾರಣೆ. ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಬುದ್ಧಿವಂತ ಜನರಿಂದ ಕೆಲಸ ಸುಲಭವಾಗಲಿದೆ. ಶುಭಸಂಖ್ಯೆ: 8

ಕನ್ಯಾ: ವಿದ್ಯಾರ್ಥಿಗಳಿಗೆ ಅಪಯಶಸ್ಸು. ಕುಲದೇವರನ್ನು ಭಜಿಸಿ. ಅನವಶ್ಯಕ ಭೀತಿ ಕಾಡುತ್ತದೆ. ವಾದ ವಿವಾದಗಳಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 3

ತುಲಾ: ದೇವತಾ ಆರಾಧನೆಯಲ್ಲಿ ಒಲವು. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ದಟ್ಟವಾಗಿದೆ. ಶಿಕ್ಷಣದಲ್ಲಿ ಏರಿಳಿತ ಕಾಣಬಹುದು. ಶುಭಸಂಖ್ಯೆ: 6

ವೃಶ್ಚಿಕ: ಶಿಕ್ಷಕರಿಗೆ ಶುಭಸುದ್ದಿ. ಸಾರಿಗೆ ವ್ಯವಹಾರದಲ್ಲಿ ಇರುವವರಿಗೆ ಅಧಿಕ ಆದಾಯ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಶುಭಸಂಖ್ಯೆ: 4

ಧನುಸ್ಸು: ಕೆಲಸದ ಒತ್ತಡದಿಂದ ಶ್ರಮ ಹೆಚ್ಚಾಗಲಿದೆ. ಆಪ್ತರು ದೂರವಾಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಶುಭದಾಯಕ ಸುದ್ದಿ ಕೇಳುವಿರಿ. ಶುಭಸಂಖ್ಯೆ: 9

ಮಕರ: ಪತ್ನಿಗೆ ಅನಾರೋಗ್ಯ. ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳಿ. ಹಿರಿಯರಿಂದ ಧನ ಸಹಾಯ. ಸಹೋದರರೊಂದಿಗೆ ಸಾಮರಸ್ಯ. ಶುಭಸಂಖ್ಯೆ: 1

ಕುಂಭ: ಕಂಪ್ಯೂಟರ್ ವ್ಯಾಪಾರಿಗಳಿಗೆ ದೈಹಿಕ ತೊಂದರೆ. ಇಷ್ಟ ಕಾರ್ಯಗಳಲ್ಲಿ ಯಶಸ್ಸು. ಹಿರಿಯರಿಂದ ಆಶೀರ್ವಾದ ಪಡೆಯಿರಿ. ಶುಭಸಂಖ್ಯೆ: 8

ಮೀನ: ಉದ್ಯೋಗಾಕಾಂಕ್ಷಿಗಳಿಗೆ ಯಶ. ವಸ್ತ್ರ ವಿನ್ಯಾಸಕರಿಗೆ ಹೆಚ್ಚು ಬೇಡಿಕೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿನ ಹಿನ್ನಡೆ ಉಂಟಾಗಬಹುದು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net