ನಿತ್ಯ ಭವಿಷ್ಯ: ಈ ರಾಶಿಯವರಿಂದ ಇದನ್ನು ಮರೆತರೆ ಸಂಭ್ರಮಕ್ಕೆ ದಾರಿ ಇದೆ

Nitya-Bhavishya-vvani-1-2-1
Published on

ಮೇಷ:  ಕೆಲಸದ ಸ್ಥಳದಲ್ಲಿ ಒಂಟಿತನವನ್ನು ಬಿಟ್ಟು ಇತರರೊಡನೆ ಬೆರೆಯಿರಿ. ಆದರೆ ಅವರನ್ನು ವಿಪರೀತವಾಗಿ ಹಚ್ಚಿಕೊಳ್ಳದಿರಿ. ಶುಭಸಂಖ್ಯೆ: 1

ವೃಷಭ: ಚಿತ್ರರಂಗದಲ್ಲಿರುವವರು ಮುಂದಿನ ಒಳಿತಿಗೆ ಕಾರ್ಯವಿಧಾನ ರೂಪಿಸಿಕೊಳ್ಳುವ ಸಂದರ್ಭವಿದು. ಮಹಾಗಣೇಶನ ಸ್ತುತಿ ಮಾಡಿ. ಶುಭಸಂಖ್ಯೆ: 9

ಮಿಥುನ: ಮಕ್ಕಳಿಗೆ ಶುಭಕರವಾದ ದಿನವಿದು. ಈಗ ಉತ್ತಮ ಆರೈಕೆಯಿಂದ ಅವರ ಅಭ್ಯಾಸವನ್ನು ಹುರಿದುಂಬಿಸುವುದು ಯುಕ್ತ. ಶುಭಸಂಖ್ಯೆ: 2

ಕಟಕ: ನೀವೂ ಹೊಸಬರಾಗಿ ಹೊಸತನವನ್ನು ಪಡೆಯಲು ಇದು ಸುಸಮಯ. ಸಕಾರಾತ್ಮಕ ಯೋಚನೆಯಿಂದ ಸಿದ್ಧಿ. ಶುಭಸಂಖ್ಯೆ: 5

ಸಿಂಹ: ವಿದೇಶದಲ್ಲಿ ಓದುತ್ತಿರುವ ಕುಟುಂಬದ ಸದಸ್ಯರು ಅಧೈರ್ಯಪಡಬಹುದು. ಅವರನ್ನು ಜಾಣ್ಮೆಯಿಂದ ಉತ್ತೇಜಿಸಿ. ಶುಭಸಂಖ್ಯೆ: 6

ಕನ್ಯಾ: ವ್ಯಾಪಾರದಲ್ಲಿ ಬರಬಹುದಾದ ಲಾಭದಲ್ಲಿ ಏರಿಕೆಯಾಗಲಿದೆ. ಕುಟುಂಬದಲ್ಲಿ ಹರ್ಷದ ವಾತಾವರಣ ಇರಲಿದೆ. ಶುಭಸಂಖ್ಯೆ: 4

ತುಲಾ: ಊಹೆಗಳ ಆಧಾರದಲ್ಲೇ ಹೊಸ ಹೊಸ ಯೋಜನೆಗಳನ್ನು ಸಿದ್ಧಪಡಿಸಲು ಹೋಗದಿರಿ. ತಜ್ಞರ ಸಲಹೆಗಳನ್ನೂ ಸ್ವೀಕರಿಸಿ. ಶುಭಸಂಖ್ಯೆ: 7

ವೃಶ್ಚಿಕ: ಹಿಂದಿನ ವೈಫಲ್ಯಗಳ ಬಗ್ಗೆ ವ್ಯಥೆಪಡುತ್ತಿದ್ದೀರಿ. ಅದ್ನು ಮರೆತರೆ ಸಂಭ್ರಮಕ್ಕೆ ದಾರಿ ಇದೆ. ಉಲ್ಲಾಸದಿಂದಲೇ ಇರಿ. ಶುಭಸಂಖ್ಯೆ: 3

ಧನುಸ್ಸು: ಉನ್ನತ ವಿದ್ಯಾಭ್ಯಾಸವನ್ನು ಮಾಡುವವರು ಪರಶಿವನನ್ನು ಸ್ತುತಿಸಬೇಕು. ಓದಿನಲ್ಲಿ ಏಕಾಗ್ರತೆ, ಸಾಫಲ್ಯಕ್ಕೆ ದಾರಿ ಇದೆ. ಶುಭಸಂಖ್ಯೆ: 8

ಮಕರ: ಮನೆಯವರ ಜತೆ ಪ್ರವಾಸಕ್ಕೆ ಹೋಗಿಬರುವ ಯೋಜನೆ ಸಾಕಾರಗೊಳ್ಳಲಿದೆ. ಹೊಂದಾಣಿಕೆ ಮಾಡಿಕೊಂಡರೆ ಲಾಭವಿದೆ. ಶುಭಸಂಖ್ಯೆ: 2

ಕುಂಭ: ಸ್ನೇಹಿತರಿಂದ ಉತ್ತಮವಾದ ಹಲವಾರು ವಿಚಾರಗಳನ್ನು ಅರಿಯುವ ಅವಕಾಶ ಸಿಗಲಿದೆ. ಪಾಲುದಾರಿಕೆ ವ್ಯವಹಾರ ಬೇಡ. ಶುಭಸಂಖ್ಯೆ: 9

ಮೀನ: ಈ ಸನ್ನಿವೇಶದಲ್ಲಿ ನಿಮಗೆ ಕೆಲವು ಹಳೆಯ ಅನುಭವಗಳು ನೆರವಿಗೆ ಒದಗಿಬರಲಿವೆ. ಸ್ವಲ್ಪ ಕ್ರಿಯಾಶೀಲರಾಗಿದ್ದರೆ ಉತ್ತಮ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net