ಈ ರಾಶಿಯವರು ಸಾರ್ವಜನಿಕ ಕ್ಷೇತ್ರದಲ್ಲಿ ವ್ಯವಹರಿಸುವಾಗ ತಾಳ್ಮೆ ಇರಲಿ: ನಿತ್ಯ ಭವಿಷ್ಯ

Nithya Bhavishya
Published on

ಮೇಷ: ಆಸ್ತಿ ವಿಷಯದಲ್ಲಿ ಸಹೋದರಿಯರಿಂದ ಸಲಹೆ. ಕುಟುಂಬದಲ್ಲಿ ಧಾರ್ವಿುಕ ಸಮಾರಂಭದ ಸಡಗರ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 6

ವೃಷಭ: ನಂಬಿ ಕೆಟ್ಟವರಿಲ್ಲವೋ ಎಂಬುದು ಸುಳ್ಳೆನಿಸೀತು. ಮಾತಿನ ಬಗ್ಗೆ ನಿಗಾ ಇರಲಿ. ಕುಟುಂಬ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗಲಿದೆ. ಶುಭಸಂಖ್ಯೆ: 9

ಮಿಥುನ: ಮಕ್ಕಳಿಂದ ಆರ್ಥಿಕ ವಿಚಾರದಲ್ಲಿ ಮನಸ್ತಾಪ ಬರಬಹುದು. ಸಂಯಮವಿರಲಿ.ಕಚೇರಿಯಲ್ಲಿ ಅನವಶ್ಯಕ ವಾಗ್ವಾದಬೇಡ. ಶುಭಸಂಖ್ಯೆ: 5

ಕಟಕ: ಆತ್ಮೀಯರೊಂದಿಗೆ ಕಾಲ ಕಳೆಯುವಿರಿ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸಿ. ದಿನಾಂತ್ಯಕ್ಕೆ ಆಯಾಸ. ಶುಭಸಂಖ್ಯೆ: 1

ಸಿಂಹ: ನೂತನ ವಾಹನ ಖರೀದಿಯ ಬಗ್ಗೆ ಯೋಚನೆ. ಸಂಗಾತಿಯೊಂದಿಗೆ ಖುಷಿಯ ಕ್ಷಣಗಳು. ದಿನಾಂತ್ಯದಲ್ಲಿ ಅಶುಭ ವಾರ್ತೆ. ಶುಭಸಂಖ್ಯೆ: 4

ಕನ್ಯಾ: ಸಹೋದರರೊಂದಿಗೆ ಘರ್ಷಣೆ. ಸಾರ್ವಜನಿಕ ಕ್ಷೇತ್ರದಲ್ಲಿ ವ್ಯವಹರಿಸುವಾಗ ತಾಳ್ಮೆಯಿರಲಿ. ಆರೋಗ್ಯ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 7

ತುಲಾ: ಬಂಧು ವರ್ಗದವರೊಂದಿಗೆ ಸಮಾಧಾನದಿಂದ ವರ್ತಿಸಿ. ಕಲಾವಿದರಿಗೆ ವಿಶೇಷ ದಿನ. ಸಂಜೆ ಕುಟುಂಬದೊಂದಿಗೆ ಸಡಗರ. ಶುಭಸಂಖ್ಯೆ: 8

ವೃಶ್ಚಿಕ: ಬಹುದಿನಗಳ ಸಮಸ್ಯೆಗೆ ಪರಿಹಾರ, ನಿರಾಳ. ಧಾರ್ವಿುಕ ವಿಚಾರಗಳಿಂದ ಮನಸ್ಸಿಗೆ ಅಶಾಂತಿ. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 6

ಧನುಸ್ಸು: ಯಾವ ಕೆಲಸಗಳಲ್ಲಿಯೂ ಅಭಿವೃದ್ಧಿ ಇಲ್ಲ. ಹಿತೈಷಿಗಳ ಸಲಹೆ ಪಡೆದುಕೊಳ್ಳಿ. ದುರ್ಗೆಯನ್ನು ನಿತ್ಯವೂ ಆರಾಧಿಸಿ. ಶುಭಸಂಖ್ಯೆ: 4

ಮಕರ: ಮಾನಸಿಕ ಅಶಾಂತಿ. ವೈದ್ಯರ ಸಲಹೆಯನ್ನು ಪಾಲಿಸಿ. ನಿಮ್ಮ ಮಾತು ಶತ್ರುವಾಗಬಹುದು ಎಚ್ಚರ. ಕೃಷಿಕರಿಗೆ ವಿಶೇಷ ದಿನ. ಶುಭಸಂಖ್ಯೆ: 2

ಕುಂಭ: ಕುಟುಂಬದವರ ಬಗ್ಗೆ ಮೃದುವಾಗಿರಿ. ಹಿತಶತ್ರುಗಳ ಬಗ್ಗೆ ಅನುಕಂಪ ಬೇಡ. ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಶುಭಸಂಖ್ಯೆ: 7

ಮೀನ: ಅನಿರೀಕ್ಷಿತ ಧನಲಾಭ. ಮೇಲಧಿಕಾರಿಗಳಿಂದ ಪ್ರಶಂಸೆ. ಜವಾಬ್ದಾರಿ ಸಮರ್ಥವಾಗಿ ನಿರ್ವಹಣೆ. ಆಯಾಸ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net