

ಮೇಷ: ವಾದ ವಿವಾದಗಳಿಂದ ದೂರವಿರಿ, ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿ, ಅಧಿಕ ತಿರುಗಾಟ ಮಾಡಬೇಕಾಗಬಹುದು. ಶುಭಸಂಖ್ಯೆ: 6
ವೃಷಭ: ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ, ಮನಸ್ಸಿಗೆ ನೆಮ್ಮದಿ ಇಲ್ಲ, ಕುಟುಂಬದ ಸಮಸ್ಯೆಯಿಂದ ಹೇಳಲಾರದಂತಹ ಸಂಕಟ. ಶುಭಸಂಖ್ಯೆ: 3
ಮಿಥುನ: ಮಕ್ಕಳಿಗಾಗಿ ಅಧಿಕ ಖರ್ಚು, ಸ್ತ್ರೀಯರಿಗೆ ಶುಭ. ಋಣಭಾದೆ, ಶತ್ರು ಭಾದೆ. ದೈವಿಕ ಚಿಂತನೆ. ನೀಚ ಜನರಿಂದ ದೂರವಿರಿ. ಶುಭಸಂಖ್ಯೆ: 9
ಕಟಕ: ದ್ರವ್ಯಲಾಭ. ಪ್ರಿಯ ಜನರ ಭೇಟಿ, ಭೂಮಿ ಲಾಭ, ದಾಯಾದಿ ಕಲಹ, ದಾನ ಧರ್ಮದಲ್ಲಿ ಆಸಕ್ತಿ ತೋರಿಸುವಿರಿ. ಶುಭಸಂಖ್ಯೆ: 1
ಸಿಂಹ: ದೂರ ಪ್ರಯಾಣ ಮಾಡಬೇಕಾದೀತು. ಮನಸ್ಸಿಗೆ ಭೀತಿ ಕಾಡಬಹುದು. ಸ್ನೇಹಿತರಿಂದ ಸಹಾಯ. ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 4
ಕನ್ಯಾ: ವಾಹನ ರಿಪೇರಿ. ಸಂಗಾತಿಯಿಂದ ನೋವು. ಯೋಚಿಸದೇ ಮಾತನಾಡಬೇಡಿ, ಅನರ್ಥವಾದೀತು, ಕುಟುಂಬದಲ್ಲಿ ಆತಂಕ. ಶುಭಸಂಖ್ಯೆ: 7
ತುಲಾ: ಮಕ್ಕಳ ಬಗ್ಗೆ ಚಿಂತೆ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ. ಮನಸ್ಸಿಗೆ ಕ್ಲೇಶದ ಅನುಭವ. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8
ವೃಶ್ಚಿಕ: ಅಲ್ಪ ಧನಾಗಮ. ತಂದೆ ತಾಯಿಯರಲ್ಲಿ ದ್ವೇಷ, ವೈಮನಸ್ಯ. ನಿಂದನೆ ಸಲ್ಲದು. ವಿರೋಧಿಗಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ:3
ಧನುಸ್ಸು: ಯತ್ನ ಕಾರ್ಯಗಳಲ್ಲಿ ಜಯ. ಮಾತಿನ ಚಕಮಕಿ. ಗುಪ್ತವಿದ್ಯೆಯಲ್ಲಿ ಆಸಕ್ತಿ. ಭೂಮಿಯಿಂದ ಲಾಭ, ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 2
ಮಕರ: ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ. ಬಂಧು ಮಿತ್ರರ ಸಮಾಗಮ. ಶುಭಸಂಖ್ಯೆ: 6
ಕುಂಭ: ಅಕಾಲ ಭೋಜನ, ಸಾಲಭಾದೆ. ಪರರಿಗೆ ವಂಚನೆ, ಬಾಕಿ ವಸೂಲಿ. ಅತಿಯಾದ ಕೋಪ ಒಳ್ಳೆಯದಲ್ಲ. ಶುಭಸಂಖ್ಯೆ:1
ಮೀನ: ನೌಕರಿಯಲ್ಲಿ ಕಿರಿಕಿರಿ, ಸಣ್ಣ ಮಾತಿನಿಂದ ಕಲಹ. ತಂದೆತಾಯಿಗಳ ಆಶೀರ್ವಾದ ಪಡೆಯಿರಿ. ಅತಿಯಾದ ನೋವು. ಶುಭಸಂಖ್ಯೆ: 9