

ಮೇಷ: ಬಹಳ ಮೊದಲೇ ಪರಿಹಾರ ಕಾಣಬೇಕಿದ್ದ ಸಮಸ್ಯೆಯೊಂದರ ವಿಚಾರದಲ್ಲಿ ಆಪ್ತರ ಸಲಹೆ ಸೂಚನೆಗಳು ಸಿಗಲಿವೆ. ಶುಭಸಂಖ್ಯೆ: 7
ವೃಷಭ: ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಧನ್ವಂತರಿ ಸ್ತೋತ್ರವನ್ನು ಪಠಿಸಿ. ಆತಂಕ ನಿವಾರಣೆಯಾಗಲಿದೆ. ಶುಭಸಂಖ್ಯೆ: 4
ಮಿಥುನ: ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ಉತ್ಸಾಹ ಉಂಟಾಗಲಿದೆ. ಹೆಚ್ಚಿನ ಪರಿಣತಿ ಸಾಧಿಸಲು ಸಾಧ್ಯವಾಗಲಿದೆ. ಶುಭಸಂಖ್ಯೆ: 1
ಕಟಕ: ಹಳೆಯ ತಪ್ಪಿನಿಂದ ಪಾಠ ಕಲಿತಿದ್ದೀರಿ. ಸಂದರ್ಭವನ್ನು ಅರ್ಥಮಾಡಿಕೊಂಡು ಮುಂದೆ ಹೆಜ್ಜೆ ಇಡಿ. ಕ್ಷೇಮ. ಶುಭಸಂಖ್ಯೆ: 9
ಸಿಂಹ: ಕಚೇರಿಯಲ್ಲಿನ ಕೆಲಸಕಾರ್ಯಗಳಲ್ಲಿ ವಿಳಂಬ ಉಂಟಾಗಬಹುದು. ಶ್ರೀ ಲಲಿತಾ ಸಹಸ್ರನಾಮ ಪಠಣ ಮಾಡಿ. ಶುಭಸಂಖ್ಯೆ: 6
ಕನ್ಯಾ: ಖಿನ್ನತೆಯ ಬಗ್ಗೆ ಆತ್ಮೀಯರೊಂದಿಗೆ ದೀರ್ಘವಾಗಿಯೇ ರ್ಚಚಿಸಿ. ಅದರಿಂದ ಒಳಿತಿನ ದಾರಿ ಲಭ್ಯವಾಗಲಿದೆ. ಶುಭಸಂಖ್ಯೆ: 3
ತುಲಾ: ಕೆಲಸದ ಸ್ಥಳದಲ್ಲಿ ಪ್ರಚೋದನಾತ್ಮಕ ಬೆಳವಣಿಗೆಗಳಿವೆ. ಅವುಗಳಿಗೆ ವಶವಾಗದೆ ನಿಮ್ಮನ್ನು ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 2
ವೃಶ್ಚಿಕ: ಷೇರುಗಳ ಖರೀದಿ ಅಥವಾ ಮಾರಾಟಕ್ಕೂ ಮೊದಲು ಎಲ್ಲ ರೀತಿಯಲ್ಲಿ ಆಲೋಚಿಸಿಯೇ ವ್ಯವಹಾರಕ್ಕೆ ಮುಂದಾಗಿ. ಶುಭಸಂಖ್ಯೆ: 5
ಧನಸ್ಸು: ಬೆಲೆಬಾಳುವ ಒಡವೆಗಳು ಕಳುವಾಗದಂತೆ ಎಚ್ಚರವಿರಲಿ. ತಾಯಿ ಚಾಮುಂಡಿಯನ್ನು ಸ್ತುತಿಸಿ. ರಕ್ಷೆ ದೊರಕಲಿದೆ. ಶುಭಸಂಖ್ಯೆ: 8
ಮಕರ: ತೆರಿಗೆ ಇಲಾಖೆಗೆ ಸಂಬಂಧಪಟ್ಟಿರುವ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿ. ಇಲ್ಲವಾದರೆ ತೊಂದರೆ ಇದೆ. ಶುಭಸಂಖ್ಯೆ: 7
ಕುಂಭ: ಹಗಲುಗನಸು ಕಾಣುವ ಪ್ರೇಮಿಗಳು ಮುಂದುವರಿದರೆ ಜಯ. ಹಿಂಜರಿಕೆಯಿಂದ ಏನೂ ಪ್ರಯೋಜನವಿಲ್ಲ. ಶುಭಸಂಖ್ಯೆ: 4
ಮೀನ: ಮಕ್ಕಳು ನಿಮ್ಮನ್ನು ಸಂತಸದಲ್ಲಿ ಇಡಲು ಪ್ರಯತ್ನ ಮಾಡುತ್ತಾರೆ. ಆಹಾರದ ವಿಚಾರದಲ್ಲಿ ಕಾಳಜಿ ಅಗತ್ಯ. ಶುಭಸಂಖ್ಯೆ: 1