ಈ ರಾಶಿಯವರಿಗೆ ಇಂದು ಮಾನಸಿಕ ನೆಮ್ಮದಿ, ಬಾಕಿ ಹಣ ವಸೂಲಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಣ್ಣಪುಟ್ಟ ವಿಷಯಗಳಿಂದ ಕಲಹ, ಮಕ್ಕಳಿಂದ ಶುಭಸುದ್ದಿ ಕೇಳುವಿರಿ. ಉತ್ತಮ ಬುದ್ಧಿಶಕ್ತಿ. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 9

ವೃಷಭ: ಭೂಮಿ ಕೊಳ್ಳುವಿಕೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮನಕ್ಲೇಷ, ಸ್ತ್ರೀ ಲಾಭ. ತಾಯಿಯ ಕಡೆಯಿಂದ ನೆರವು. ಶುಭಸಂಖ್ಯೆ: 5

ಮಿಥುನ: ಆತ್ಮೀಯರ ಆಗಮನದಿಂದ ಮನಶ್ಶಾಂತಿ. ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ. ಬಾಕಿ ಹಣ ವಸೂಲಿಯಾಗಲಿದೆ. ಶುಭಸಂಖ್ಯೆ: 7

ಕಟಕ: ಅಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ. ಸ್ಥಳ ಬದಲಾವಣೆ. ಅಪಕೀರ್ತಿ. ವಾಹನ ಸಂಚಾರದಿಂದ ತೊಂದರೆ. ಶುಭಸಂಖ್ಯೆ: 9

ಸಿಂಹ: ಅನ್ಯ ಜನರಲ್ಲಿ ವಿಶ್ವಾಸ. ಶತ್ರು ಬಾಧೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರು ಪೇರು. ಉದ್ಯೋಗದಲ್ಲಿ ಪ್ರಗತಿ. ಮಾನಸಿಕ ಸಮಾಧಾನ. ಶುಭಸಂಖ್ಯೆ: 3

ಕನ್ಯಾ: ಗೃಹದಲ್ಲಿ ಹಾನಿ. ಸಲ್ಲದ ಅಪವಾದ. ಉದ್ಯೋಗದಲ್ಲಿ ಕಿರಿ-ಕಿರಿ. ಅನಾರೋಗ್ಯ. ವಾಹನ ಅಪಘಾತವಾದೀತು, ಎಚ್ಚರದಿಂದಿರಿ. ಶುಭಸಂಖ್ಯೆ: 6

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅಧಿಕ ಧನವ್ಯಯ. ದ್ರವ್ಯ ನಷ್ಟ. ಪತಿ-ಪತ್ನಿಯರಲ್ಲಿ ವಿರಸ. ಪಾಪಬುದ್ಧಿ. ಶುಭಸಂಖ್ಯೆ: 3

ವೃಶ್ಚಿಕ: ಸಾಲಗಾರರಿಂದ ತೊಂದರೆ. ಮಾನಸಿಕ ಒತ್ತಡ. ಕೋಪ ಜಾಸ್ತಿ. ಅಶಾಂತಿ. ಕಾರ್ಯ ವಿಕಲ್ಪ. ಅತಿಯಾದ ನೋವು. ಶುಭಸಂಖ್ಯೆ: 7

ಧನುಸ್ಸು: ಗುರು ಹಿರಿಯರಲ್ಲಿ ಭಕ್ತಿ. ಉನ್ನತ ಸ್ಥಾನಮಾನ ಲಭಿಸಿ ಸಂತಸ. ಮನಸ್ಸಿನಲ್ಲಿದ್ದ ಭಯ ನಿವಾರಣೆಯಾಗಿ ನೆಮ್ಮದಿ. ಶುಭಸಂಖ್ಯೆ: 8

ಮಕರ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ ಕಾಡಲಿದೆ. ವಿದ್ಯಾಭಿವೃದ್ಧಿಯಾಗುವುದು. ಅಕಾಲ ಭೋಜನ ಮಾಡಬೇಕಾಗಬಹುದು. ಶುಭಸಂಖ್ಯೆ:1

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ. ಆಲಸ್ಯ ಮನೋಭಾವ. ತಿರುಗಾಟ. ಭೂಲಾಭ. ದಾಯಾದಿಗಳಲ್ಲಿ ಕಲಹ. ಶುಭಸಂಖ್ಯೆ: 6

ಮೀನ: ಕೆಲಸ ಕಾರ್ಯಗಳಲ್ಲಿ ಜಯ. ವಿದ್ಯಾರ್ಥಿಗಳಲ್ಲಿ ಹಿನ್ನಡೆ. ನೀಚ ಜನರ ಸಹವಾಸ. ಸಾಮಾನ್ಯ ಸೌಖ್ಯಕ್ಕೆ ದಕ್ಕೆ. ಸ್ಥಳ ಬದಲಾವಣೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net