

ಮೇಷ: ಕುಟುಂಬದೊಂದಿಗೆ ಸಮಸ್ಯೆ ಹಂಚಿಕೊಳ್ಳಿ. ಮಗಳ ವಿವಾಹದ ಪ್ರಯತ್ನದಲ್ಲಿ ಸಕಾರಾತ್ಮಕ ಫಲಿತಾಂಶ. ಮಗನಿಂದ ಶುಭ ಸುದ್ದಿ. ಶುಭಸಂಖ್ಯೆ: 9
ವೃಷಭ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸೌಹಾರ್ದಯುತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ. ಬಂಧುವರ್ಗದಲ್ಲಿ ವಿರಸ. ಶುಭಸಂಖ್ಯೆ: 6
ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಅತಿಥಿ ಸತ್ಕಾರದಿಂದ ಸಮಾಧಾನ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 6
ಕಟಕ: ಬಹುದಿನಗಳಿಂದ ನಿರೀಕ್ಷೆಯಲ್ಲಿ ಇದ್ದ ಕೃಷಿ ಭೂಮಿ ಖರೀದಿಗೆ ಚಾಲನೆ. ತಾಯಿಯ ಮಾರ್ಗದರ್ಶನ ಪಾಲಿಸಿ. ಬಂಧುಗಳ ಭೇಟಿ. ಶುಭಸಂಖ್ಯೆ: 1
ಸಿಂಹ: ಆತ್ಮೀಯರ ಮನೆಗೆ ಭೇಟಿ. ಸಹೋದರರೊಂದಿಗೆ ತಾಳ್ಮೆಯಿಂದ ವರ್ತಿಸಿ ಕಚೇರಿಯಲ್ಲಿ. ಜವಾಬ್ದಾರಿ ಕೆಲಸದ ಹೊಣೆ. ಶುಭಸಂಖ್ಯೆ: 8
ಕನ್ಯಾ: ಮಹತ್ವದ ನಿರ್ಣಯದಲ್ಲಿ ಸಂಗಾತಿಯ ಸಹಾಯ. ಮಾತಿನಿಂದ ಶತ್ರುಗಳು ಸೃಷ್ಟಿ ಆಗುವ ಸಾಧ್ಯತೆ , ಎಚ್ಚರದಿಂದ ಮಾತನಾಡಿ. ಶುಭಸಂಖ್ಯೆ: 7
ತುಲಾ: ಇಂದಿನ ಎಲ್ಲಾ ಕಾರ್ಯಗಳಲ್ಲಿ ವಿಘ್ನ. ನಿಮ್ಮ ಕಲೆಯ ಅನಾವರಣಕ್ಕೆ ಅವಕಾಶ. ದಿನಾಂತ್ಯದಲ್ಲಿ ಗುರು ಹಿರಿಯರ ಭೆೇಟಿ. ಶುಭಸಂಖ್ಯೆ: 6
ವೃಶ್ಚಿಕ: ಯಾವುದೇ ಕೆಲಸದಲ್ಲಿ ನಿರೀಕ್ಷಿತ ವೇಗವಿಲ್ಲ. ಸೋಮಾರಿತನ ಬಿಟ್ಟರೆ ಉತ್ತಮ ಭವಿಷ್ಯ. ಬಂಧುಗಳಿಂದ ಸಾಂತ್ವನ. ಶುಭಸಂಖ್ಯೆ: 4
ಧನುಸ್ಸು: ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉದ್ದಿಮೆದಾರರಿಗೆ ನಷ್ಟವಾದೀತು. ಹುಷಾರು. ದಿನಾಂತ್ಯದಲ್ಲಿ ಸಂತಸದ ಸಮಾಚಾರ. ಶುಭಸಂಖ್ಯೆ: 9
ಮಕರ: ಕುಟುಂಬದಲ್ಲಿ ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ಮಾತು. ಕಚೇರಿಯಲ್ಲಿ ಕಿರಿಕಿರಿ. ಅದರಿಂದ ದೃತಿಗೆಡಬೇಡಿ. ಈಶ್ವರನನ್ನು ಆರಾಧಿಸಿ. ಶುಭಸಂಖ್ಯೆ: 2
ಕುಂಭ: ಮನಸ್ಸಿನ ಚಂಚಲತೆ ಅವನತಿಗೆ ಕಾರಣ ಆಗಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ನಟನಾ ವೃತ್ತಿಯವರಿಗೆ ಅವಕಾಶ. ಶುಭಸಂಖ್ಯೆ: 1
ಮೀನ: ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿ, ಸಮಾಧಾನ ಸಿಗುತ್ತದೆ. ಖರೀದಿಯಲ್ಲಿ ವಿಶೇಷ ವಸ್ತು ಪ್ರಾಪ್ತಿ. ಮಕ್ಕಳ ಪ್ರಗತಿಗೆ ಹೆಮ್ಮೆ. ಶುಭಸಂಖ್ಯೆ: 7