ನಿತ್ಯ ಭವಿಷ್ಯ: ರಾಜಕೀಯದ ದಾಳ ಉರುಳಿಸಲು ಈ ರಾಶಿಯವರಿಗಿಂದು ಕಾಲ ಕೂಡಿ ಬಂದಿದೆ

NITYA BHAVISHYA
Published on

ಮೇಷ: ಅಷ್ಟೋತ್ತರ ಶತನಾಮಗಳ ಮೂಲಕವಾಗಿ ಮಹಾಗಣಪತಿಯನ್ನು ಪೂಜಿಸಿದರೆ ಕಿರಿಕಿರಿಗಳು ದೂರವಾಗಿ ಶಾಂತಿ ಸಿಗಲಿದೆ. ಶುಭಸಂಖ್ಯೆ: 7

ವೃಷಭ: ಅಧ್ಯಯನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ವೃದ್ಧಿಯಾಗಲಿದೆ. ಬೆಟ್ಟಿಂಗ್ ಥರದ ವ್ಯಸನಗಳಿಂದ ದೂರವಿದ್ದುಬಿಡಿ. ಶುಭಸಂಖ್ಯೆ: 9

ಕಟಕ: ವೃತ್ತಿಜೀವನದಲ್ಲಿ ವಿವಿಧ ಸಮಸ್ಯೆಗಳು ತಲೆದೋರಬಹುದು. ಚಾತುರ್ಯದಿಂದಲೇ ಸಂದರ್ಭವನ್ನು ನಿರ್ವಹಿಸಿ. ಶುಭಸಂಖ್ಯೆ: 6

ಮಿಥುನ: ದೂರಪ್ರಯಾಣದ ಅವಕಾಶ ಬಂದರೂ ಹಣಕಾಸಿನ ಅಭಾವ ಎದುರಾಗಬಹುದು. ಆತುರದ ನಿರ್ಧಾರ ಬೇಡ. ಶುಭಸಂಖ್ಯೆ: 8

ಸಿಂಹ: ರಾಜಕೀಯದ ದಾಳ ಉರುಳಿಸಲು ಕಾಲ ಕೂಡಿ ಬಂದಿದೆ. ಆದರೆ ವಿರೋಧಿಗಳ ಸಾಮರ್ಥ್ಯವನ್ನು ಅಲಕ್ಷಿಸದಿರಿ. ಶುಭಸಂಖ್ಯೆ: 2

ಕನ್ಯಾ: ಕುಲದೇವತಾ ದರ್ಶನದಿಂದ ಮನಃಶಾಂತಿ ಹೊಂದುವಿರಿ. ಕೈಗೊಂಡ ಕಾರ್ಯವು ಬೇಗನೆ ನೆರವೇರಲಿದೆ. ಶುಭಸಂಖ್ಯೆ: 4

ತುಲಾ: ದೂರದ ಬಂಧುಗಳೊಡನೆ ಆತ್ಮೀಯತೆ ವೃದ್ಧಿ. ಸಂಗಾತಿಯ ಬೆಂಬಲದಿಂದ ಮಕ್ಕಳ ಬಗ್ಗೆ ಚಿಂತೆ ಉಂಟಾಗದು. ಶುಭಸಂಖ್ಯೆ: 3

ವೃಶ್ಚಿಕ: ಕುಟುಂಬದಲ್ಲಿನ ಆಂತರಿಕ ಸಮಸ್ಯೆಗಳು ಶಮನಗೊಳ್ಳಲಿವೆ. ಜಮೀನಿನ ವಿಷಯದಲ್ಲಿ ಬಿಕ್ಕಟ್ಟು ಎದುರಾಗಬಹುದು. ಶುಭಸಂಖ್ಯೆ: 5

ಧನುಸ್ಸು: ಹೊಸ ವ್ಯಕ್ತಿಗಳ ಪರಿಚಯದಿಂದ ವ್ಯಾಪಾರದಲ್ಲಿ ಉತ್ತಮವಾದ ಸಲಹೆಗಳು ಹಾಗೂ ಲಾಭ ದೊರೆತು ಸಂತಸಪಡುವಿರಿ. ಶುಭಸಂಖ್ಯೆ: 1

ಕುಂಭ: ಅಲ್ಪರ ಸಂಗದಿಂದ ನಿಮ್ಮ ಅಭಿಮಾನಕ್ಕೆ ಭಂಗವಾಗದಂತೆ ಎಚ್ಚರಿಕೆಯಿರಲಿ. ಅಂಥ ಜನರನ್ನು ದೂರವೇ ಇಡಿ. ಶುಭಸಂಖ್ಯೆ: 7

ಮಕರ: ಇಷ್ಟದೇವತೆಯ ಕೃಪೆಯಿಂದ ಸ್ಪರ್ಧಾತ್ಮಕ ಸಂದರ್ಭಗಳಲ್ಲಿ ಯಶಸ್ಸಿದೆ. ಹೊಸ ಕನಸುಗಳಿಗೆ ವಿಶೇಷ ಮನ್ನಣೆ ಲಭಿಸಲಿದೆ. ಶುಭಸಂಖ್ಯೆ: 9

ಮೀನ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಕೈಗೊಳ್ಳಲು ಅವಕಾಶವಿದೆ. ಆದರೆ ಸಾಲವೆಂಬ ಶೂಲಕ್ಕೆ ಮಾತ್ರ ಖಂಡಿತ ಗುರಿಯಾಗದಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net