

ಮೇಷ: ಪ್ರಶಂಸೆಗೆ ಪಾತ್ರರಾಗುವಿರಿ. ಆತ್ಮೀಯರ ವಿರೋಧದ ನೋವು. ಪರಿಹಾರವಾಗಿ ಗೋಮಾತೆಗೆ ನೈವೇದ್ಯಸಲ್ಲಿಸಿ. ಶುಭಸಂಖ್ಯೆ: 8
ವೃಷಭ: ಸಾಲಗಾರರಿಂದ ತೊಂದರೆ. ಅನಾರೋಗ್ಯ ಬಾಧಿಸಬಹುದು. ದುಡುಕಿನ ತೀರ್ಮಾನ ಒಳ್ಳೆಯದಲ್ಲ, ಸಹನೆ ಇರಲಿ. ಶುಭಸಂಖ್ಯೆ:1
ಮಿಥುನ: ಉದ್ಯೋಗಸ್ಥ ಮಹಿಳೆಯರಿಗೆ ಕಿರಿಕಿರಿಯಾಗಬಹುದು. ಕೆಲಸಗಳಲ್ಲಿ ಅಡ್ಡಿ ಇದ್ದರೂ ಜಯ ನಿಮ್ಮ ಕಡೆಗೇ ಇದೆ. ವಕೀಲರಿಗೆ ಲಾಭ. ಶುಭಸಂಖ್ಯೆ: 5
ಕಟಕ: ಪದವಿ ಪ್ರಾಪ್ತಿಯಲ್ಲಿ ಅಡೆತಡೆ. ಅನಿರೀಕ್ಷಿತ ಧನಾಗಮನ. ವ್ಯಾಪಾರದಲ್ಲಿ ಮಂದಗತಿ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಶುಭಸಂಖ್ಯೆ: 7
ಸಿಂಹ: ಅಪರಿಚಿತರಿಂದ ಸಹಾಯ. ಆಸ್ತಿ ಖರೀದಿಯಲ್ಲಿ ಮೋಸವಾದೀತು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ:3
ಕನ್ಯಾ: ವ್ಯಾಪಾರಸ್ಥರಿಗೆ ಶುಭಕರ ದಿನ. ಅಧ್ಯಾತ್ಮ ಚಿಂತನೆಯತ್ತ ಒಲವು. ಭೂ ಲಾಭದ ಸಾಧ್ಯತೆ. ಕಬ್ಬಿಣದ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 8
ತುಲಾ: ವ್ಯಾಪಾರದಲ್ಲಿ ಮಂದಗತಿ. ಅಧಿಕ ದೇಹಾಯಾಸ. ಪ್ರಯತ್ನದಿಂದ ಕಾರ್ಯಸಿದ್ಧಿ. ವ್ಯವಹಾರದಲ್ಲಿ ಅಪರಿಚಿತರಿಂದ ಮೋಸ. ಶುಭಸಂಖ್ಯೆ: 2
ವೃಶ್ಚಿಕ: ತಂದೆ ತಾಯಿಗಳ ಆರೋಗ್ಯ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಧನ ಲಾಭ. ಕುಟುಂಬದಲ್ಲಿ ಸಾಮರಸ್ಯ. ಸಂತಸದ ಕ್ಷಣಗಳು. ಶುಭಸಂಖ್ಯೆ: 4
ಧನುಸ್ಸು: ಆಸ್ತಿ ವಿಚಾರದ ತೀರ್ವನದಲ್ಲಿ ದಿಟ್ಟತನವಿರಲಿ. ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ಲಾಭ. ಮಹಿಳಾ ಉಡುಪುಗಳ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 7
ಮಕರ: ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ. ಬಂಧುಗಳಿಂದ ತೊಂದರೆ. ವ್ಯಾಪಾರದಲ್ಲಿ ಇಳಿಮುಖ. ಪದವಿ ಪ್ರಾಪ್ತಿಯಲ್ಲಿ ಅಡೆತಡೆಗಳು. ಶುಭಸಂಖ್ಯೆ: 6
ಕುಂಭ: ನಟರಿಗೆ ಶುಭ. ಗುರುಹಿರಿಯರಿಂದ ಸಹಾಯ ಪಡೆದುಕೊಳ್ಳಿ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಶುಭಸಂಖ್ಯೆ: 6
ಮೀನ: ಸಹೋದ್ಯೋಗಿಗಳೊಂದಿಗೆ ಅಸಮಾಧಾನ, ಚರ್ಮ ಸಂಬಂಧಿ ಬಾಧೆ. ಕುಟುಂಬದಲ್ಲಿ ಶಾಂತಿ. ಕಲಾವಿದರಿಗೆ ಸಂತಸದ ದಿನ. ಶುಭಸಂಖ್ಯೆ: 1