

ಮೇಷ: ಆಸ್ತಿ ವಿವಾದ ಸಂಬಂಧ ನಿಮ್ಮ ಆತುರದ ನಿರ್ಧಾರ ಕುಟುಂಬದ ನೆಮ್ಮದಿಯನ್ನು ಕೆಡಿಸೀತು. ಯೋಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 5
ವೃಷಭ: ತಂದೆಯ ಸಲಹೆಯನ್ನು ನಿರ್ಲಕ್ಷ್ಯ ಮಾಡದೇ ಪಾಲಿಸಿ. ಸಾಲಗಾರರಿಂದ ಕಿರುಕುಳ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 9
ಮಿಥುನ: ಸಾರ್ವಜನಿಕ ರಂಗದಲ್ಲಿ ಪ್ರಶಂಸೆ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ ದೊರೆತು ಸಂಭ್ರಮ. ಗಾಯಕರಿಗೆ ಶುಭ ದಿನ. ಶುಭಸಂಖ್ಯೆ: 6
ಕಟಕ: ಉನ್ನತ ಶಿಕ್ಷಣದ ಯತ್ನದಲಿದ್ದವರಿಗೆ ಶುಭ ಸುದ್ದಿ. ವ್ಯಾಪಾರಸ್ಥರಿಗೆ ನಷ್ಟ. ಸರ್ಕಾರಿ ರಂಗದಲ್ಲಿ ಕಾರ್ಯ ಸಿದ್ದಿ. ಭೂವಿವಾದ ಅಂತ್ಯ. ಶುಭಸಂಖ್ಯೆ: 1
ಸಿಂಹ: ಕುಟುಂಬದವರ ಕಡೆ ಗಮನ ಕೊಡಿ. ಕಾರ್ಯದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು. ವೈದ್ಯರ ಸಲಹೆಯನ್ನು ಪಾಲಿಸಿ. ಶುಭಸಂಖ್ಯೆ: 6
ಕನ್ಯಾ: ವ್ಯಾಪಾರಸ್ಥರಿಗೆ ಶುಭದಿನ. ರೈತರ ಪ್ರಯತ್ನಕ್ಕೆ ವಿಶೇಷ ಫಲ. ಸಂಗಾತಿಯ ಸಲಹೆಯನ್ನು ಪಾಲಿಸಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6
ತುಲಾ: ನಿಮ್ಮ ತೀರ್ವನಕ್ಕೆ ಬದ್ಧರಾಗಿರಿ. ಗೊಂದಲಕ್ಕೆ ಅವಕಾಶ ಬೇಡ. ಮಕ್ಕಳ ಭವಿಷ್ಯದ ಚಿಂತೆ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 8
ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಮನಸ್ತಾಪ. ಕಚೇರಿ ಯಲ್ಲಿ ಹಿರಿಯ ಅಧಿಕಾರಿಗಳಿಂದ ಛೀಮಾರಿ. ಸ್ನೇಹಿತನಿಂದ ಸಾಂತ್ವನ. ಶುಭಸಂಖ್ಯೆ: 6
ಧನುಸ್ಸು: ಮನೆಯಲ್ಲಿ ಧಾರ್ವಿುಕ ಕಾರ್ಯ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಪ್ರಸಂಸೆ. ವ್ಯಾಪಾರದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 3
ಮಕರ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಪ್ರಮುಖ ವಿಷಯದ ಬಗ್ಗೆ ನಿರ್ಧಾರ. ಮಕ್ಕಳ ಉನ್ನತ ವಿದ್ಯಾಭ್ಯಾಸದ ಕನಸು ನನಸು. ಶುಭಸಂಖ್ಯೆ: 2
ಕುಂಭ: ಕೂಡಿಟ್ಟ ಹಣದ ನಷ್ಟ. ತಂದೆಯೊಂದಿಗೆ ವೈಮನಸ್ಯ. ಬಂಧು ವರ್ಗದಲ್ಲಿ ವಿಶೇಷ ಗೌರವ. ವ್ಯಾಪಾರದಲ್ಲಿ ಅಧಿಕ ನಷ್ಟ. ಶುಭಸಂಖ್ಯೆ: 4
ಮೀನ: ಆತ್ಮಾಭಿಮಾನಕ್ಕೆ ಧಕ್ಕೆ. ಕೃಷಿಕರಿಗೆ ನಷ್ಟ. ಹಳೇ ಸ್ನೇಹಿತನ ಭೇಟಿ. ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7