

ಮೇಷ: ಲೋಹ ವ್ಯಾಪಾರ ಮಾಡುವವರಿಗೆ ವಿಶೇಷ ಆದಾಯ. ಹಣಕಾಸು ಸಂಸ್ಥೆಗಳ ಉದ್ಯೋಗಿಗಳು ನಷ್ಟ ಅನುಭವಿಸುವ ಸಾಧ್ಯತೆ. ಶುಭಸಂಖ್ಯೆ: 2
ವೃಷಭ: ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಬಂಧುಗಳ ಮನೆಗೆ ಕುಟುಂಬ ಸಮೇತರಾಗಿ ಭೇಟಿ. ಶುಭಸಂಖ್ಯೆ:1
ಮಿಥುನ: ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ. ನೆರೆಹೊರೆ ಯವರೊಂದಿಗೆ ವಿರಸ ತಲೆದೋರಬಹುದು. ಉದ್ಯಮ ಸ್ಥಳದಲ್ಲಿ ನವೀಕರಣ. ಶುಭಸಂಖ್ಯೆ:4
ಕಟಕ: ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ಸುಸ್ತು. ದೇವತಾ ಕಾರ್ಯ. ಶುಭಸಂಖ್ಯೆ: 8
ಸಿಂಹ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ವ್ಯವಹಾರದ ವೃದ್ಧಿ. ಲೆಕ್ಕಪತ್ರಗಳ ಪರಿಶೀಲನೆಗೆ ನಿರ್ಧಾರ. ಶುಭಸಂಖ್ಯೆ: 7
ಕನ್ಯಾ: ರಾಜಕೀಯ ವ್ಯಕ್ತಿಗಳಿಗೆ ಆಶಾದಾಯಕ ದಿನ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪ ಎದುರಿಸಬೇಕಾದೀತು. ಶುಭಸಂಖ್ಯೆ: 3
ತುಲಾ: ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಲಾಭ. ಪಾಲುಗಾರಿಕೆ ವ್ಯವಹಾರ ಮಾಡುವಾಗ ಜಾಗ್ರತೆ ಇರಲಿ. ಶುಭಸಂಖ್ಯೆ: 9
ವೃಶ್ಚಿಕ: ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿ. ಅತಿಯಾದ ಕಾರ್ಯದಿಂದಾಗಿ ಆಯಾಸ. ಉದ್ಯೋಗ ನಿಮಿತ್ತ ಮಕ್ಕಳ ಪ್ರಯಾಣ. ಶುಭಸಂಖ್ಯೆ:1
ಧನುಸ್ಸು: ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಆಸ್ತಿ ವಿಚಾರದಲ್ಲಿ ಒತ್ತಡದ ಪ್ರಸ್ತಾಪ ಬರಲಿವೆ. ಸಾಲದಿಂದ ಮುಕ್ತಿ, ನಿರಾಳತೆ. ಶುಭಸಂಖ್ಯೆ: 5
ಮಕರ: ಅಡೆತಡೆ ನಡುವೆಯೂ ಶುಭಕಾರ್ಯ ನೆರವೇರಿಕೆ. ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಔಷಧ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 1
ಕುಂಭ: ಸಂಗಾತಿಗೆ ನೆರೆಹೊರೆಯವರಿಂದ ಪ್ರತಿರೋಧ. ಧಾರ್ವಿುಕ ಕೆಲಸಕ್ಕೆ ವಿನಿಯೋಗ ಮಾಡಲಿದ್ದೀರಿ. ಹೊಸ ಉದ್ಯಮದಿಂದ ಲಾಭ. ಶುಭಸಂಖ್ಯೆ:8
ಮೀನ: ಸರ್ಕಾರದಿಂದಾಗಬೇಕಾದ ಕೆಲಸ ವಿಳಂಬವಾಗುವ ಸಾಧ್ಯತೆ. ನಿರಾಸೆಯ ಮಧ್ಯೆ ಆಸೆಯ ಸೆಲೆಯೊಂದು ಕಾಣಲಿದೆ. ಶುಭಸಂಖ್ಯೆ: 5