

ಮೇಷ: ಬಹಳ ಒತ್ತಡದಿಂದ ಕೂಡಿದ ದಿನ. ಕೆಲಸಗಳು ಬಹಳ ಹೆಚ್ಚು. ಯಾರೊಂದಿಗೂ ಜಗಳ ಮಾತ್ರ ಮಾಡಬೇಡಿ. ಅದೃಷ್ಟಸಂಖ್ಯೆ: 1
ವೃಷಭ: ಸಿನಿಮಾ ಇತ್ಯಾದಿ ಯಾವುದೂ ಬೇಸರ ನೀಗಿಸದು. ಬೇರೇನೋ ಬೇಕೆನಿಸುತ್ತದೆ. ಕಟ್ಟಿಹಾಕಿದ್ದಾರೆನಿಸಬಹುದು. ಅದೃಷ್ಟಸಂಖ್ಯೆ: 7
ಮಿಥುನ: ಕಾರಣ ಹೇಳಿ ನಿಮ್ಮ ಕೆಲಸ ಮಾಡಿಕೊಳ್ಳುವುದು ಸುಲಭ. ಆದರೆ ನೀವು ಕಾರಣವನ್ನೇನೂ ನೀಡದೆ ಹಠ ಮಾಡುತ್ತೀರಿ. ಅದೃಷ್ಟಸಂಖ್ಯೆ: 3
ಕಟಕ: ಬೇರೆಯವರ ಮುಖ್ಯ ಕಾಗದಪತ್ರ ನಿಮ್ಮ ಕೈ ಸೇರುತ್ತದೆ. ಅದನ್ನು ಹೇಗೆಲ್ಲ ಬಳಸಬಹುದು ಎಂದು ಯೋಚಿಸುವಿರಿ. ಅದೃಷ್ಟಸಂಖ್ಯೆ: 5
ಸಿಂಹ: ನಿಮ್ಮ ಪಾಲು ಮುಗಿದುಹೋಗಿದೆ ಎಂದು ತಿಳಿಸಲಾಗುತ್ತದೆ. ಉಳಿತಾಯದ ಮಹತ್ವವು ನಿಮಗೀಗ ಅರ್ಥವಾಗುತ್ತದೆ. ಅದೃಷ್ಟಸಂಖ್ಯೆ: 8
ಕನ್ಯಾ: ಯಾರದೋ ಒತ್ತಡ ಇನ್ನಾರದೋ ಮೇಲೆ ತೋರಿಸುವುದು ಗಮನಕ್ಕೆ ಬರುತ್ತದೆ. ಎಚ್ಚರ ವಹಿಸಿದರೆ ಉತ್ತಮ. ಅದೃಷ್ಟಸಂಖ್ಯೆ: 4
ತುಲಾ: ಯಾವುದೋ ಮುಖ್ಯ ಕೆಲಸದಿಂದ ಅರಿವಿಲ್ಲದೆ ಬೇರೊಂದಕ್ಕೆ ಬದಲಾಗುವಿರಿ. ಬೇಗ ಮನದ ಚಾಂಚಲ್ಯಕ್ಕೆ ಒಳಾಗುವಿರಿ. ಅದೃಷ್ಟಸಂಖ್ಯೆ: 1
ವೃಶ್ಚಿಕ: ಯಾರಿಗೋ ಬೇಸರ ಆಗುತ್ತದೆ ಎಂದು ಕೂತಲ್ಲಿ ಕಾಲ ಮೀರಲಿದೆ. ಕಠಿಣ ನಿರ್ಧಾರ ಕೈಗೊಳ್ಳಬೇಕಾದ ದಿನ. ಅದೃಷ್ಟಸಂಖ್ಯೆ: 2
ಧನುಸ್ಸು: ಏನು ಮಾಡಲೂ ಮನಸ್ಸು ಬರದಂಥ ಆಲಸ್ಯ ಉಂಟಾಗುತ್ತದೆ. ಇಂದೇ ಮಾಡಬೇಕಾದ ಮುಖ್ಯ ಕಾರ್ಯಗಳಿವೆ. ಅದೃಷ್ಟಸಂಖ್ಯೆ: 6
ಮಕರ: ರುಚಿರುಚಿಯಾದ ಊಟ ಸವಿಯುವ ಯೋಗ. ಆದರೆ ನಿಮ್ಮ ಮನಸ್ಸು ಸರಿ ಇಲ್ಲದ್ದರಿಂದ ಆಹಾರ ಕೂಡ ರುಚಿಸದು. ಅದೃಷ್ಟಸಂಖ್ಯೆ: 7
ಕುಂಭ: ನಿಮ್ಮ ಮೇಲೆ ದರ್ಪ ತೋರುವವರಿಗೆ ಇಂದು ನಿಮ್ಮ ನಿಗ್ರಹ ಕಷ್ಟ. ಅವರ ಮಾತಿಗೆ ಗಮನ ಕೊಡಬೇಕಿಲ್ಲ. ಅದೃಷ್ಟಸಂಖ್ಯೆ: 2
ಮೀನ: ಇತರರಿಂದ ನಿಮ್ಮ ಅಧಿಕಾರ ದುರ್ಬಳಕೆ ಆದೀತು. ಪರರಿಗೆ ನಿಮ್ಮ ಜವಾಬ್ದಾರಿ ಕೊಡುವ ಮುನ್ನ ಯೋಚಿಸಿ. ಅದೃಷ್ಟಸಂಖ್ಯೆ: 5