ಈ ರಾಶಿಯವರು ನಿಮ್ಮ ಜತೆಗೆ ಬಿಳಿಯ ಬಣ್ಣದ ಕರವಸ್ತ್ರವನ್ನು ಇಟ್ಟುಕೊಂಡಿರಿ

Nitya-Bhavishya-vvani-1-2-1
Published on

ಮೇಷ: ಆರೋಗ್ಯದ ಬಗ್ಗೆ ಎಚ್ಚರ ಇರಬೇಕು. ಆದರೆ ಜಿಮ್ಲ್ಲಿ ಅತಿಯಾದ ವ್ಯಾಯಾಮದಿಂದ ಆಯಾಸವಾದೀತು. ಶುಭಸಂಖ್ಯೆ: 5

ವೃಷಭ: ನೀವು ಕಲಾವಿದರಾಗಿದ್ದರೆ ವಿದೇಶಪ್ರಯಾಣ ಯೋಗದ ಅವಕಾಶ ಒದಗಿಬರಲಿದೆ. ಚಿಂತಿಸಿಯೇ ತೀರ್ಮಾನಿಸಿ. ಶುಭಸಂಖ್ಯೆ: 9

ಮಿಥುನ: ನಾನಾ ಬಗೆಯ ಜನ ನಿಮ್ಮನ್ನು ಭೇಟಿ ಮಾಡುತ್ತಿರುತ್ತಾರೆ. ಆದರೆ ಖಂಡಿತ ಸಿಟ್ಟು ಮಾಡಿಕೊಳ್ಳದೆ ಶಾಂತವಾಗಿರಿ. ಶುಭಸಂಖ್ಯೆ: 8

ಕಟಕ: ನಿಮ್ಮ ದೃಢ ಸಂಕಲ್ಪಗಳಿಗೆ ಹೊಸ ಶೋಭೆ ದೊರೆಯಲಿದೆ. ಅವು ಕಾರ್ಯರೂಪಕ್ಕೆ ಬಂದರೆ ಲಾಭವೂ ಸಿಗಲಿದೆ. ಶುಭಸಂಖ್ಯೆ: 2

ಸಿಂಹ: ನಿಮ್ಮ ಜತೆಗೆ ಬಿಳಿಯ ಬಣ್ಣದ ಕರವಸ್ತ್ರವನ್ನು ಇಟ್ಟುಕೊಂಡಿರಿ. ಮನದ ಸಂಕಲ್ಪಗಳಿಗೆ ಅವ್ಯಕ್ತ ಬೆಂಬಲ ಲಭ್ಯ. ಶುಭಸಂಖ್ಯೆ: 7

ಕನ್ಯಾ: ನಿಮ್ಮ ಕಾರ್ಯವಿಧಾನಗಳಿಗೆ ಹಿರಿಯರ, ಸಹೋದ್ಯೋಗಿಗಳ ಪ್ರಶಂಸೆ ಲಭ್ಯ. ಇದು ಪ್ರಗತಿಗೆ ದಾರಿಯಾಗಲಿದೆ. ಶುಭಸಂಖ್ಯೆ: 4

ತುಲಾ: ಲಾಭಕ್ಕೆ ದಾರಿ ಮಾಡಿಕೊಡುವಂಥ ಮಹಾತ್ವಾಕಾಂಕ್ಷೆಯುಳ್ಳ ಹೊಸ ಸಹಪಾಲುದಾರರು ಜತೆಯಾಗುವರು. ಶುಭಸಂಖ್ಯೆ: 1

ವೃಶ್ಚಿಕ: ತಂದೆ-ತಾಯಿಯನ್ನು ಬಹಳ ಆದರದಿಂದ ನೋಡಿಕೊಳ್ಳಿ. ಅವರ ನೆಮ್ಮದಿಯಿಂದ ನಿಮಗೂ ಸಂತಸವಿದೆ. ಶುಭಸಂಖ್ಯೆ: 3

ಧನಸ್ಸು: ಮನೆಯ ಬದಲಾವಣೆಗೆ ಸಾಧ್ಯತೆ ಇದೆ. ವಾಸದ ಸ್ಥಳ ಬದಲಾಯಿಸದಿದ್ದಲ್ಲಿ ದೇವಿ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 6

ಮಕರ: ವಿದ್ಯಾರ್ಥಿಗಳಿಗೆ ಸಿದ್ಧಿಯ ದಿನ ಇದಾಗಿದೆ. ನ್ಯಾಯವಾದಿಗಳು ಕಾಲಭೈರವ ಅಷ್ಟಕದ ಪಠಿಸುವುದು ಉತ್ತಮ. ಶುಭಸಂಖ್ಯೆ: 4

ಕುಂಭ:  ನಿಮ್ಮ ಕನಸುಗಳಲ್ಲಿ ಕೆಲವು ಬೇಗನೆ ಸಾಕಾರ ಹೊಂದಲಿವೆ. ಶ್ರದ್ಧಾಭಕ್ತಿಗಳಿಂದ ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 9

ಮೀನ: ಅಧಿಕಾರದಲ್ಲಿ ಇರುವವರ ಒಡನಾಟ ಇದ್ದರೂ, ಗ್ರಹದೋಷದ ಕಾರಣಕ್ಕಾಗಿ ನಿರ್ದಿಷ್ಟ ಮಿತಿ ಮೀರಬೇಡಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net