ಈ ರಾಶಿಯವರಿಗಿಂದು ದೂರದ ವ್ಯವಹಾರಗಳಿಂದ ಧನಾರ್ಜನೆ: ನಿತ್ಯಭವಿಷ್ಯ

astrology
Published on

ಮೇಷ: ಮಾತೃ ಸಮಾನರಿಂದ ಸಂತೋಷ. ನೂತನ ಮಿತ್ರರ ಸಹಕಾರ. ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆ. ಶುಭಸಂಖ್ಯೆ: 8

ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ನಿರೀಕ್ಷೆಗೂ ಮೀರಿದ ಧನಾಗಮ. ಶುಭಸಂಖ್ಯೆ: 1

ಮಿಥುನ: ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ದೀರ್ಘ ಸಂಚಾರ ಸಂಭವ. ದೂರದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹೆಚ್ಚಿದ ವರಮಾನ. ಶುಭಸಂಖ್ಯೆ: 5

ಕಟಕ: ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿಲ್ಲವೆಂದು ಚಿಂತಿಸದಿರಿ. ಹಣಕಾಸಿನ ವಿಚಾರದಲ್ಲಿ ಆಯವ್ಯಯ ಸಮಾನವಾಗಿ ತೋರಿತು. ಶುಭಸಂಖ್ಯೆ: 9

ಸಿಂಹ: ಸ್ಥಾನ ಗೌರವಾದಿ ಸಂಪಾದಿಸಿದ ತೃಪ್ತಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಆಸ್ತಿ, ಗೃಹ, ವಾಹನ ಸಂಬಂಧಿ ಖರ್ಚು ಸಂಭವ. ಶುಭಸಂಖ್ಯೆ: 8

ಕನ್ಯಾ: ಪ್ರಯಾಣದಿಂದ ದೇಹಾಯಾಸ ಕಂಡೀತು. ಧಾರ್ವಿುಕ ಕಾರ್ಯಗಳಿಗಾಗಿ ಧನವ್ಯಯ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 6

ತುಲಾ: ಉದ್ಯೋಗದಲ್ಲಿ ತಲ್ಲೀನತೆ. ಕಾರ್ಯ ಸಾಧನೆ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ದೂರದ ವ್ಯವಹಾರಗಳಿಂದ ಧನಾರ್ಜನೆ. ಶುಭಸಂಖ್ಯೆ: 9

ವೃಶ್ಚಿಕ: ಆರೋಗ್ಯದ ಬಗ್ಗೆ ಉದಾಸೀನ ಸಲ್ಲದು. ನೂತನ ಮಿತ್ರರ ಭೇಟಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಶುಭಸಂಖ್ಯೆ: 1

ಧನುಸ್ಸು: ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಾಂಸಾರಿಕ ಸುಖ ಮಧ್ಯಮ. ವಿದ್ಯಾರ್ಥಿಗಳು ಪರರ ಸಹಾಯದಿಂದ ಗುರಿ ಸಾಧಿಸಿರಿ. ಶುಭಸಂಖ್ಯೆ:3

ಮಕರ: ಆರೋಗ್ಯ ಸುಧಾರಣೆ. ದೂರದ ವ್ಯವಹಾರಗಳಿಂದ ಉತ್ತಮ ಧನಾರ್ಜನೆ. ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 8

ಕುಂಭ: ಸಫಲತೆ. ಉತ್ತಮ ಸ್ಥಾನ ಗೌರವಾದಿ ಲಭ್ಯ. ಅಧಿಕ ಧನಾರ್ಜನೆ. ನೂತನ ಮಿತ್ರರ ಭೇಟಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಶುಭಸಂಖ್ಯೆ: 5

ಮೀನ: ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ. ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ದಾಖಲೆಯೊಂದಿಗೆ ವ್ಯವಹರಿಸಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net