

ಮೇಷ: ಕಚೇರಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಹೆಚ್ಚಿದ ಒತ್ತಡ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ದಿನದ ಅಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 5
ವೃಷಭ: ಈ ದಿನವಿಡೀ ಪ್ರಶಾಂತ ಮನಸ್ಥಿತಿ ಕಾಪಾಡಿಕೊಳ್ಳಿ. ಮಕ್ಕಳಿಂದ ಸ್ವಲ್ಪ ಮಟ್ಟಿನ ಕಿರಿಕಿರಿ ಉಂಟಾಗಬಹುದು. ಮಾನಸಿಕ ಒತ್ತಡ. ಶುಭಸಂಖ್ಯೆ: 2
ಮಿಥುನ: ಕೃಷಿಕರಿಗೆ ತೊಡಕು ಉಂಟಾಗುವ ದಿನ. ಪ್ರಯಾಣದಲ್ಲಿ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಕಾಲವಿದು. ಶುಭಸಂಖ್ಯೆ: 9
ಕಟಕ: ವ್ಯಾಪಾರಿಗಳಿಗೆ ಲಾಭ. ಹಣದ ವಿಚಾರದಲ್ಲಿ ಅಸಡ್ಡೆ ಬೇಡ. ದೇಹಾಲಸ್ಯ ಉಂಟಾಗುತ್ತದೆ. ಇಷ್ಟದೇವರನ್ನು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ: 1
ಸಿಂಹ: ಅನ್ಯರೊಂದಿಗೆ ಜಗಳ ಮಾಡಬೇಕಾದೀತು. ಸಹನೆ ಇರಲಿ. ವ್ಯಾಪಾರಿಗಳಿಗೆ ಅಧಿಕ ಲಾಭ. ಕುಟುಂಬದಲ್ಲಿ ಸಾಮರಸ್ಯ. ಶುಭಸಂಖ್ಯೆ: 5
ಕನ್ಯಾ: ಅನಗತ್ಯ ಪ್ರಯಾಣ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವೈದ್ಯರ ಸಲಹೆ ಪಡೆಯಿರಿ. ನಿರೀಕ್ಷೆಗೂ ಮೀರಿ ಧನಾರ್ಜನೆ. ಶುಭಸಂಖ್ಯೆ: 7
ತುಲಾ: ಉದ್ಯೋಗದಲ್ಲಿ ಎಚ್ಚರಿಕೆ ಇರಲಿ. ಪ್ರಯಾಣದಲ್ಲಿ ತೊಂದರೆಯಾಗುವ ಸಾಧ್ಯತೆ. ಬಂಧುಗಳಿಂದ ಸಹಾಯ ದೊರೆಯಲಿದೆ. ಶುಭಸಂಖ್ಯೆ: 3
ವೃಶ್ಚಿಕ: ಕುಟುಂಬದವರಿಗೆ ತೊಂದರೆ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಹೊಂದುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಸ್ವಲ್ಪ ಸಮಾಧಾನ. ಶುಭಸಂಖ್ಯೆ: 6
ಧನುಸ್ಸು: ಆರ್ಥಿಕ ವಿಷಯದಲ್ಲಿ ಎಚ್ಚರಿಕೆ ವಹಿಸಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಕ್ರೀಡಾಪಟುಗಳಿಗೆ ಶುಭದಿನ. ಶುಭಸಂಖ್ಯೆ: 2
ಮಕರ: ಸಣ್ಣ ಉದ್ಯಮಿಗಳಿಗೆ ಅಧಿಕ ಲಾಭ. ಹಣಕಾಸಿನ ನಷ್ಟದ ಸಾಧ್ಯತೆಯೂ ಇದೆ. ಆಹಾರಕ್ರಮದಲ್ಲಿ ವಿಶೇಷ ಕಾಳಜಿ ವಹಿಸಿ. ಶುಭಸಂಖ್ಯೆ: 9
ಕುಂಭ: ದಿನವಿಡೀ ಉತ್ಸಾಹ ಉಳಿಸಿಕೊಳ್ಳುವಿರಿ. ಕೆಲಸವನ್ನು ಎಚ್ಚರಿಕೆಯಿಂದ ಮಾಡಿ. ಆರೋಗ್ಯದಲ್ಲಿ ಸಮಸ್ಯೆ. ವೈದ್ಯರ ಸಲಹೆ ಅಗತ್ಯ. ಶುಭಸಂಖ್ಯೆ: 4
ಮೀನ: ಸಮಯ ಸಾಧಕರಿಂದ ಅಂತರವಿರಲಿ. ಕೆಲಸದ ಹೊರೆ ಅಧಿಕವಾಗಿರುತ್ತದೆ. ದೊಡ್ಡ ಚಿಂತೆಗಳು ದೂರವಾಗಿ ಮಾನಸಿಕ ನೆಮ್ಮದಿ. ಶುಭಸಂಖ್ಯೆ: 7