

ಮೇಷ: ಕಚೇರಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಹಣದ ಅಡಚಣೆ ಆಗಬಹುದು. ಶುಭಸಂಖ್ಯೆ: 1
ವೃಷಭ: ವ್ಯಾಪಾರಸ್ಥರಿಗೆ ಸಾಧಾರಣ ಲಾಭ. ವೃಥಾ ತಿರುಗಾಟದ ಸಾಧ್ಯತೆ. ಆತ್ಮೀಯ ಸ್ನೇಹಿತನ ಮನೆಗೆ ಭೇಟಿ ನೀಡುವಿರಿ. ಶುಭಸಂಖ್ಯೆ: 7
ಮಿಥುನ: ಸರ್ಕಾರಿ ಕೆಲಸಗಳಲ್ಲಿ ವಿಘ್ನ ಉಂಟಾಗಿ ಬೇಸರ. ಅನವಶ್ಯಕ ಖರ್ಚು ಉಂಟಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 7
ಕಟಕ: ವ್ಯಾಪಾರಿಗಳು, ಉದ್ಯೋಗಸ್ಥರಿಗೆ ಅಲ್ಪ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಮಾಧಾನ. ದಿನಾಂತ್ಯದಲ್ಲಿ ಶುಭವಾರ್ತೆ ಬಂದು ಸಂತಸ. ಶುಭಸಂಖ್ಯೆ: 6
ಸಿಂಹ: ಶುಭಕಾರ್ಯ ಯತ್ನ ಸಫಲವಾಗದು. ಅಧಿಕ ತಿರುಗಾಟ. ತಾಯಿ ಮಾತನ್ನು ನಿರ್ಲಕ್ಷಿಸಬೇಡಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಸಂಪಾದಿಸುವಿರಿ. ಕೃಷಿಕರಿಗೆ ಪ್ರಗತಿ. ದಿನದ ಮಧ್ಯಭಾಗದಲ್ಲಿ ಚಿಂತೆ ಕಾಡಬಹುದು. ಶುಭಸಂಖ್ಯೆ: 4
ತುಲಾ: ಮಿತ್ರರಿಂದ ವಂಚನೆಯಾದೀತು. ಕುಟುಂಬದಲ್ಲಿ ಸಮಾಧಾನ. ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ನಿರ್ಧಾರ. ಶುಭಸಂಖ್ಯೆ: 3
ವೃಶ್ಚಿಕ: ಪತ್ನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡುವಿರಿ. ಕುಟುಂಬದಲ್ಲಿ ಸೌಖ್ಯ. ವ್ಯಾಪಾರಸ್ಥರಿಗೆ ಅಧಿಕ ಲಾಭದ ಸಾಧ್ಯತೆ. ಶುಭಸಂಖ್ಯೆ: 2
ಧನಸ್ಸು: ಕಾರ್ಯಸಾಧನೆಗಾಗಿ ತಿರುಗಾಟ ಅನಿವಾರ್ಯ. ಅನವಶ್ಯಕ ಖರ್ಚು. ಮಾತಿನಿಂದ ಶತ್ರುಗಳು ಸೃಷ್ಟಿಯಾಗುವರು. ಶುಭಸಂಖ್ಯೆ: 8
ಮಕರ: ದುಷ್ಟ ಜನರ ಸಹವಾಸ. ಮನಸ್ಸಿಗೆ ಚಿಂತೆ. ಕಚೇರಿಯಲ್ಲಿ ಗೌರವಕ್ಕೆ ಧಕ್ಕೆ ಬರುವ ಸನ್ನಿವೇಶ ಸೃಷ್ಟಿ. ಪತ್ನಿಗೆ ಅನಾರೋಗ್ಯ. ಶುಭಸಂಖ್ಯೆ: 6
ಕುಂಭ: ಅನಗತ್ಯವಾಗಿ ಧನವ್ಯಯ. ಕೃಷಿಯಲ್ಲಿ ಅಲ್ಪ ಲಾಭ. ಹಿತೈಷಿಗಳಿಂದ ಕಿರುಕುಳ. ಕೋರ್ಟು ವ್ಯವಹಾರಗಳಲ್ಲಿ ಅಡಚಣೆ. ಶುಭಸಂಖ್ಯೆ: 8
ಮೀನ : ವ್ಯಾಪಾರ, ಉದ್ಯೋಗದಲ್ಲಿ ಪ್ರಗತಿ. ಸಾರ್ವಜನಿಕ ಜೀವನದಲ್ಲಿ ಮನ್ನಣೆ . ನಿರೀಕ್ಷಿತ ಧನಲಾಭ. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 9