ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ

Nitya-Bhavishya-vvani-1-2
Published on

ಮೇಷ: ಪ್ರಯತ್ನಕ್ಕೆ ಪ್ರತಿಫಲ. ಬಹುದಿನಗಳಿಂದ ನಿರೀಸಿದ ಪದವಿ ಪ್ರಾಪ್ತಿ. ಗೆಳೆಯರಿಂದ ಮೋಸ. ಆತ್ಮಬಲದಿಂದ ಕೆಲಸಕ್ಕೆ ಯಶಸ್ಸು. ಶುಭಸಂಖ್ಯೆ: 3

ವೃಷಭ: ಹಣದ ವಿಪರೀತ ಖರ್ಚು. ಮಾನಸಿಕವಾಗಿ ಅಶಾಂತಿ ವಿಪರೀತ ಕಾಡಲಿದೆ. ದಿನಾಂತ್ಯದಲ್ಲಿ ಆತ್ಮೀಯರ ಭೇಟಿ ಮಾಡುವಿರಿ. ಶುಭಸಂಖ್ಯೆ: 1

ಮಿಥುನ: ನಿಮ್ಮ ಸಮಯಸ್ಫೂರ್ತಿಯಿಂದ ಸಮಸ್ಯೆಗೆ ಪರಿಹಾರ ನೀಡಿದ ಸಮಾಧಾನ. ವ್ಯಾಪಾರದಲ್ಲಿ ಅಧಿಕ ಲಾಭ. ಮನೆಯಲ್ಲಿ ಸಡಗರ. ಶುಭಸಂಖ್ಯೆ: 2

ಕಟಕ: ಮಕ್ಕಳ ಅವಿಧೇಯತೆ ನೋವುಂಟು ಮಾಡುವುದು. ಸಂಗಾತಿಯಿಂದ ಸಮಾಧಾನ. ದೃಢ ನಿರ್ಧಾರ ಕೈಗೊಳ್ಳಲು ಗೊಂದಲ. ಶುಭಸಂಖ್ಯೆ: 6

ಸಿಂಹ: ಫಲಿತಾಂಶದ ಬಗ್ಗೆ ಚಿಂತೆ ಬೇಡ, ಪ್ರಯತ್ನವನ್ನು ಜಾರಿಯಲ್ಲಿಡಿ. ಹಿತಶತ್ರುಗಳಿಂದ ತೊಂದರೆ. ಕುಟುಂಬದಲ್ಲಿ ಅಸಮಾಧಾನ. ಶುಭಸಂಖ್ಯೆ: 8

ಕನ್ಯಾ: ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ. ನಂಬಿದವರಿಂದ ಮೋಸ. ವಿದ್ಯಾರ್ಥಿಗಳಿಗೆ ಶುಭದಿನ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 3

ತುಲಾ: ಅನಗತ್ಯವಸ್ತುಗಳಿಗಾಗಿ ದುಂದುವೆಚ್ಚ. ಬರಬೇಕಾಗಿದ್ದ ಹಣ ಬಾರದೆ ನಿರಾಸೆ. ಕುಟುಂಬದ ಪರ್ಯಾಯ ವ್ಯವಸ್ಥೆಗೆ ಚಿಂತನೆ. ಶುಭಸಂಖ್ಯೆ: 7

ವೃಶ್ಚಿಕ: ಸಮಯಸಾಧಕರಿಂದ ಅಂತರವಿರಲಿ. ನಂಬಿದವರಿಂದಲೇ ಮೋಸ. ಸಂಗೀತಗಾರರಿಗೆ ವಿಶೇಷ ವೇದಿಕೆ ಲಭ್ಯ. ಸಂಜೆ ಆಯಾಸ. ಶುಭಸಂಖ್ಯೆ: 3

ಧನುಸ್ಸು: ಕಷ್ಟಪಟ್ಟರೆ ಸುಖ ಎನ್ನುವುದಕ್ಕೆ ಬದ್ಧರಾಗಿ. ನಟರಿಗೆ ಬೆಂಬಲ. ಸಾಮಾಜಿಕವಾಗಿ ಕಿರಿಕಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ. ಶುಭಸಂಖ್ಯೆ: 5

ಮಕರ: ಯಾಂತ್ರಿಕ ಜೀವನದಿಂದ ವಿಮುಖರಾಗಿ. ದೂರದೂರಿಗೆ ಪ್ರಯಾಣ. ಹಳೆಯ ಮಿತ್ರರ ಸಮಾಗಮ. ಧಾರ್ಮಿಕ ಕ್ಷೇತ್ರದ ಭೇಟಿ. ಶುಭಸಂಖ್ಯೆ: 1

ಕುಂಭ: ವೈದ್ಯರ ಸಲಹೆಯನ್ನು ಶಿಸ್ತಿನಿಂದ ಪಾಲಿಸಿ. ನಿಮಗೆ ಸಂಬಂಧವಿರದ ವಿಷಯದಿಂದ ಅಂತರವಿರಲಿ. ಮಕ್ಕಳಿಂದ ಹೆಮ್ಮೆ. ಶುಭಸಂಖ್ಯೆ: 6

ಮೀನ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ನಿರ್ಲಕ್ಷಿಸಿ. ವಿಶೇಷ ಉದ್ದಿಮೆ ಆರಂಭಕ್ಕೆ ನಿರ್ಧಾರ. ಮಗನ ಮದುವೆಗೆ ಅನುಕೂಲ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net