

ಮೇಷ: ಆಹಾರ ಸೇವನೆಯಲ್ಲಿ ಕಾಳಜಿ ವಹಿಸಿ. ಮಂಡಿ ವ್ಯಾಪಾರಸ್ಥರಿಗೆ ಲಾಭ. ಸ್ವಂತ ಉದ್ಯಮಿಗಳ ಪರಿಶ್ರಮಕ್ಕೆ ಫಲ ದೊರೆಯುತ್ತದೆ. ಶುಭಸಂಖ್ಯೆ:5
ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ. ಬಂಧುಗಳೊಂದಿಗೆ ವೈಮನಸ್ಸು. ಶುಭ ಫಲಿತಾಂಶ ನೋಡಬಹುದು. ನಿವೇಶನ ಖರೀದಿಗೆ ಅಡೆತಡೆ. ಶುಭಸಂಖ್ಯೆ: 9
ಮಿಥುನ: ಕುಟುಂಬದಲ್ಲಿ ಸಂತಸದ ದಿನ. ಸರ್ಕಾರಿ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಔಷಧಿ ಖರೀದಿಗೆ ಅಧಿಕ ಹಣ ಖರ್ಚಾಗುತ್ತದೆ. ಶುಭಸಂಖ್ಯೆ: 1
ಕಟಕ: ಬೆಲೆಬಾಳುವ ವಸ್ತು ಕಳೆದುಕೊಳ್ಳುವಿರಿ. ಪ್ರಯಾಣ, ಜಲ ಸಂಬಂಧಿ ವಿಚಾರದಲ್ಲಿ ಎಚ್ಚರಿಕೆ. ಕೃಷಿ ಚಟುವಟಿಕೆಯಲ್ಲಿ ತೊಂದರೆ. ಶುಭಸಂಖ್ಯೆ: 2
ಸಿಂಹ: ವಸ್ತ್ರವಿನ್ಯಾಸಕರಿಗೆ ಬೇಡಿಕೆ. ಸಾಮಾಜಿಕವಾಗಿ ಗೌರವ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರ. ಪದವಿ ಪ್ರಾಪ್ತಿಯಲ್ಲಿ ಶತ್ರುಗಳ ಕಾಟ.ಶುಭಸಂಖ್ಯೆ: 7
ಕನ್ಯಾ: ಸೇವಿಸುವ ಆಹಾರದಲ್ಲಿ ಎಚ್ಚರಿಕೆ ಅಗತ್ಯ. ಸಾಮಾಜಿಕ ಕೆಲಸದಿಂದ ಸಮಾಧಾನ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ತೊಂದರೆ. ಶುಭಸಂಖ್ಯೆ:3
ತುಲಾ: ಕಬ್ಬಿಣದ ವ್ಯಾಪಾರದಲ್ಲಿ ನಷ್ಟದ ಸಾಧ್ಯತೆ. ಮಗಳ ಮದುವೆಯ ಚಿಂತೆ ಕಾಡಲಿದೆ. ಕೌಟುಂಬಿಕ ಕಲಹ ಉಂಟಾಗಬಹುದು. ಶುಭಸಂಖ್ಯೆ:8
ವೃಶ್ಚಿಕ: ಕಾಲಿನ ಸಮಸ್ಯೆ. ಶಿಕ್ಷಕ ವೃತ್ತಿಯಲ್ಲಿ ಏರುಪೇರು ಆದೀತು. ವಾಣಿಜ್ಯ, ಇಂಜಿನಿಯರಿಂಗ್ ವಿದ್ಯಾರ್ಥಿ ಗಳಿಗೆ ಓದಿನಲ್ಲಿ ಗಮನವಿರಲಿ. ಶುಭಸಂಖ್ಯೆ:6
ಧನುಸ್ಸು: ಭೂ ವ್ಯವಹಾರದಲ್ಲಿ ವಿವಾದ. ಕೆಲಸಗಳಲ್ಲಿ ಅಡೆತಡೆ. ಸಂಸಾರದಲ್ಲಿ ವಿರಸ. ಗೃಹ ನಿರ್ವಣದಲ್ಲಿ ಸ್ನೇಹಿತರಿಂದ ಸಹಕಾರ. ಶುಭಸಂಖ್ಯೆ:3
ಮಕರ: ದೂರದೂರಿನಿಂದ ನೆಂಟರ ಆಗಮನ. ನಂಬಿಕೆಗಳು ಮೌಲ್ಯ ಕಳೆದುಕೊಳ್ಳಲಿವೆ. ವೃತ್ತಿಯಲ್ಲಿ ಶ್ರಮ. ಸಿನಿಮಾ ಕ್ಷೇತ್ರದವರಿಗೆ ವಿಘ್ನ. ಶುಭಸಂಖ್ಯೆ:6
ಕುಂಭ: ಪ್ರವೇಶ ಪರೀಕ್ಷೆಯಲ್ಲಿ ವಿಫಲವಾಗುವ ಸಾಧ್ಯತೆ. ಆಸ್ತಿ ವಿವಾದ ನ್ಯಾಯಾಲಯದ ಮೆಟ್ಟಿಲೇರಲಿದೆ. ಕೆಲಸಗಳಲ್ಲಿ ಅನುಕೂಲ.ಶುಭಸಂಖ್ಯೆ:9
ಮೀನ: ವಿದೇಶ ಪ್ರವಾಸ ಮಾಡಬೇಕಾದೀತು. ಒಪ್ಪಂದಕ್ಕೆ ಸಹಿಹಾಕುವ ಸಾಧ್ಯತೆ. ಸಾಕು ಪ್ರಾಣಿಗಳಿಂದ ಕಿರಿಕಿರಿ. ಕೌಟುಂಬಿಕ ಯೋಚನೆ. ಶುಭಸಂಖ್ಯೆ:5