

ಮೇಷ: ಹಣಕಾಸಿನ ಏರಿಳಿತದಿಂದ ಹೊರಬರುತ್ತೀರಿ. ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಶುಭಸಂಖ್ಯೆ: 5
ವೃಷಭ: ಸಾಲದ ಪ್ರಯತ್ನ ಕೂಡಿ ಬರದು. ಉದ್ಯೋಗಿಗಳಿಗೆ ಸ್ಥಾನ ಚಲನೆ ಸೂಚನೆ. ವೃತ್ತಿ,ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಶುಭಸಂಖ್ಯೆ: 7
ಮಿಥುನ: ಆಧ್ಯಾತ್ಮಿಕ ಸೇವಾ ಕಾರ್ಯದಲ್ಲಿ ಭಾಗವಹಿಸುವಿರಿ. ಸಹೋದರರೊಂದಿಗೆ ಭಿನ್ನಾಭಿಪ್ರಾಯ. ಮನೆಯ ಹೊರಗೆ ಸಾಲದ ಒತ್ತಡ. ಶುಭಸಂಖ್ಯೆ: 9
ಕಟಕ: ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡಲಿವೆ. ಶುಭಸಂಖ್ಯೆ: 3
ಸಿಂಹ: ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ಆರ್ಥಿಕ ವಾತಾವರಣ ಉತ್ತಮ. ನಿಮ್ಮ ದಕ್ಷತೆಗೆ ಪುರಸ್ಕಾರ. ಶುಭಸಂಖ್ಯೆ: 2
ಕನ್ಯಾ: ಆದಾಯಕ್ಕಿಂತ ಖರ್ಚು ಅಧಿಕ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಸಮಸ್ಯೆಗಳು ಎದುರಾಗುತ್ತವೆ. ನೌಕರರಿಗೆ ವಿಶ್ರಾಂತಿ ಇಲ್ಲ. ಶುಭಸಂಖ್ಯೆ: 8
ತುಲಾ: ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಇರುತ್ತವೆ. ವ್ಯವಹಾರಗಳೂ ನಿಧಾನ. ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ಶುಭಸಂಖ್ಯೆ: 8
ವೃಶ್ಚಿಕ: ಪ್ರಮುಖ ಕಾರ್ಯಗಳು ನಿರಾಯಾಸವಾಗಿ ಪೂರ್ಣವಾಗುವುದು. ಗೃಹ ನಿರ್ಮಾಣ ಕಾರ್ಯಕ್ಕೆ ಚುರುಕು. ವ್ಯಾಪಾರದಲ್ಲಿ ಪ್ರಗತಿ. ಶುಭಸಂಖ್ಯೆ: 7
ಧನುಸ್ಸು: ಅಗತ್ಯಕ್ಕೆ ಹಣ ಇರುವುದಿಲ್ಲ. ವೃತ್ತಿಪರ ವ್ಯವಹಾರದಲ್ಲಿ ಶ್ರಮಕ್ಕೆ ಅಲ್ಪ ಪ್ರತಿಫಲ. ಕುಟುಂಬ ಸದಸ್ಯರ ಮಾತಿನಿಂದ ನೋವು. ಶುಭಸಂಖ್ಯೆ: 3
ಮಕರ: ವಾಹನ ಖರೀದಿಗೆ ಇದು ಸಕಾಲ. ಹಳೆಯ ಸ್ನೇಹಿತ ರೊಂದಿಗೆ ಸೇವಾ ಕಾರ್ಯದಲ್ಲಿ ಭಾಗವಹಿಸುವಿರಿ. ವ್ಯವಹಾರದಲ್ಲಿ ಯಶ. ಶುಭಸಂಖ್ಯೆ: 1
ಕುಂಭ: ಉದ್ಯೋಗದಲ್ಲಿ ಶ್ರಮ ಹೆಚ್ಚು. ಕುಟುಂಬ ಸದಸ್ಯ ರೊಂದಿಗೆ ಭಿನ್ನಾಭಿಪ್ರಾಯ. ಪ್ರಮುಖ ವ್ಯವಹಾರದಲ್ಲಿ ಆತುರದ ನಿರ್ಧಾರ ಬೇಡ. ಶುಭಸಂಖ್ಯೆ: 7
ಮೀನ: ಕೌಟುಂಬಿಕ ಭಿನ್ನಾಭಿಪ್ರಾಯಕ್ಕೆ ಪರಿಹಾರ. ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ಹೊಸ ವಸ್ತುಗಳ ಖರೀದಿ ಯೋಗವಿದೆ. ಶುಭಸಂಖ್ಯೆ: 9