ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ

Nithya Bhavishya
Published on

ಮೇಷ: ಮೇಲಧಿಕಾರಿಗಳಿಂದ ಕಿರುಕುಳ. ಸಹೋದ್ಯೋಗಿಗಳ ಜತೆಗೆ ವಾದ-ವಾಗ್ವಾದ. ವ್ಯಾಪಾರಸ್ಥರಿಗೆ ನಷ್ಟ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 9

ವೃಷಭ: ವ್ಯಾಪಾರಕ್ಕೆ ಚಾಲನೆ. ಹೊಸ ಭೂಮಿ ಖರೀದಿಗೆ ನಿರ್ಧಾರ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಕಿರಿಕಿರಿ. ಸಮಾಲೋಚಿಸಿ ನಿರ್ಧರಿಸಿ. ಶುಭಸಂಖ್ಯೆ: 7

ಮಿಥುನ: ಕೆಲಸ ಕಳೆದುಕೊಳ್ಳುವ ಭೀತಿ. ಇಷ್ಟ ದೇವರನ್ನು ಪೂಜಿಸಿ. ಆರ್ಥಿಕ ಸಮಸ್ಯೆಗಳು ಕಾಡಬಹುದು. ವೈದ್ಯರ ಸಲಹೆಯನ್ನು ಪಾಲಿಸಿ. ಶುಭಸಂಖ್ಯೆ: 2

ಕಟಕ: ನೀವು ನಂಬಿದವರಿಂದಲೇ ಮೋಸ ಅನುಭವಿಸಬೇಕಾಗುವುದು. ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ. ಸಮಾಧಾನವಿರಲಿ. ಶುಭಸಂಖ್ಯೆ: 5

ಸಿಂಹ: ಹಿತ ಶತ್ರುಗಳ ಕಾಟ. ಸಹೋದ್ಯೋಗಿಗಳಿಂದ ಮಾನಸಿಕ ಕಿರಿಕಿರಿಯಾದೀತು. ವ್ಯಾಪಾರದಲ್ಲಿ ಅಧಿಕ ನಷ್ಟ. ಗಣೇಶನನ್ನು ಪೂಜಿಸಿ. ಶುಭಸಂಖ್ಯೆ: 3

ಕನ್ಯಾ: ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ ಸಿಗಲಿದೆ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ವಿದೇಶದಿಂದ ಮಗನ ಆಗಮನದ ಸುದ್ದಿ. ಶುಭಸಂಖ್ಯೆ: 6

ತುಲಾ: ಮನೆಯಲ್ಲಿ ಸಡಗರ. ವಿವಾಹದ ನಿರೀಕ್ಷೆಯಲ್ಲಿರು ವವರಿಗೆ ಶುಭ ಸುದ್ದಿ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಶುಭಸಂಖ್ಯೆ: 2

ವೃಶ್ಚಿಕ: ಸಹೋದರರಿಂದ ಸಹಾಯ. ಮಗಳ ಮದುವೆಗೆ ಚಾಲನೆ. ವಹಿಸಿದ ಕೆಲಸದ ದಕ್ಷ ರ್ನಿರ್ವಹಣೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 7

ಧನುಸ್ಸು: ಯೋಚಿಸಿ ಮಾತನಾಡುವುದು ಇಂದು ಮಾತ್ರವಲ್ಲ, ಸದಾ ಒಳ್ಳೆಯದು. ಹಣ ಉಳಿಕೆಗೆ ಅವಕಾಶ. ಸೈಟ್ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 2

ಮಕರ: ನಿಮ್ಮ ನೈಪುಣ್ಯತೆಗೆ ಪುರಸ್ಕಾರ. ಕೃಷಿಕರಿಗೆ ಲಾಭ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸ್ನೇಹಿತನ ಸಲಹೆ ಪಡೆೆಯಿರಿ. ಶುಭಸಂಖ್ಯೆ:1

ಕುಂಭ:  ಮನೆ ನವೀಕರಣಕ್ಕೆ ನಷ್ಟ. ಸೀರೆ ವ್ಯಾಪಾರದಲ್ಲಿ ಮೋಸ ಹೋಗುತ್ತೀರಿ. ನಂಬಿದವರಿಂದ ದ್ರೋಹ. ಸಹೋದರಿಯ ಮನೆಗೆ ಭೇಟಿ. ಶುಭಸಂಖ್ಯೆ: 2

ಮೀನ: ಕೆಲಸಗಾರರಿಂದ ಪ್ರತಿರೋಧ ಎದುರಿಸುವಿರಿ. ಮನಸ್ಸಿಗೆ ಅವ್ಯಕ್ತ ಭಯ. ಪರಮೇಶ್ವರನನ್ನು ಸ್ತುತಿಸಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net