

ಮೇಷ: ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯ. ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಲು ಗೋಮಾತೆಗೆ ನೈವೇದ್ಯಸಲ್ಲಿಸಿ. ಶುಭಸಂಖ್ಯೆ: 4
ವೃಷಭ: ಹೊಸ ಕೆಲಸದಲ್ಲಿ ಒತ್ತಡ ಎನಿಸಿದರೂ ಖುಷಿಯಿದೆ. ದುಡುಕಿನ ತೀರ್ಮಾನ ಬೇಡ. ವೈದ್ಯರ ಸಲಹೆಯನ್ನು ಮರೆಯದೆ ಪಾಲಿಸಿ. ಶುಭಸಂಖ್ಯೆ:5
ಮಿಥುನ: ದೂರಪ್ರಯಾಣ ಮಾಡುವಿರಿ. ಕೆಲಸಕ್ಕೆ ಅಡ್ಡಿ ಎದುರಾದರೂ ಅದನ್ನು ಮೆಟ್ಟಿ ಜಯ ಸಾಧಿಸುವಿರಿ. ವಕೀಲರಿಗೆ ವೃತ್ತಿಯಲ್ಲಿ ಶುಭ. ಶುಭಸಂಖ್ಯೆ:3
ಕಟಕ: ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಕಲಾವಿದರಿಗೆ ಅನಿರೀಕ್ಷಿತ ಧನಾಗಮನ. ಶುಭ ಸೂಚನೆಗಳು. ಸರ್ಕಾರಿ ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ: 8
ಸಿಂಹ: ವಿವಾಹಾಕಾಂಕ್ಷಿಗಳಿಗೆ ನಿರಾಸೆಯಾದರೂ ಚಿಂತೆ ಬೇಡ. ಆಸ್ತಿ ಖರೀದಿಯಲ್ಲಿ ಹುಷಾರು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 4
ಕನ್ಯಾ: ಔಷಧ ವ್ಯಾಪಾರಸ್ಥರಿಗೆ ಉತ್ತಮ ದಿನ. ಆಧ್ಯಾತ್ಮಿಕ ಒಲವು ಹೆಚ್ಚಲಿದೆ. ಭೂಮಿ ಸಿಗಲಿದೆ. ಕಬ್ಬಿಣ ವ್ಯಾಪಾರದಲ್ಲಿ ಸಾಧಾರಣ ಲಾಭ. ಶುಭಸಂಖ್ಯೆ: 6
ತುಲಾ: ವ್ಯಾಪಾರದಲ್ಲಿ ನಷ್ಟವಿಲ್ಲ. ತಿರುಗಾಟ ಮಾಡಿ ಸುಸ್ತಾದ ಶರೀರಕ್ಕೆ ವಿಶ್ರಾಂತಿಯ ಅಗತ್ಯವಿದೆ. ಕೃಷಿಕರಿಗೆ ಪ್ರಯತ್ನದಿಂದ ಕಾರ್ಯಸಿದ್ಧಿ. ಶುಭಸಂಖ್ಯೆ: 4
ವೃಶ್ಚಿಕ: ಮಕ್ಕಳ ಆರೋಗ್ಯ ಉತ್ತಮ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತವಾಗಿ ಸಂತಸಕರ ತಿರುವು. ಕುಟುಂಬದಲ್ಲಿ ಸಾಮರಸ್ಯ. ಶುಭಸಂಖ್ಯೆ: 8
ಧನುಸ್ಸು: ತೀರ್ವನಗಳಲ್ಲಿ ದಿಟ್ಟತನವಿರಲಿ, ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ಗಣನೀಯ ಲಾಭ. ರೇಷ್ಮೆ ಸೀರೆ, ಜವಳಿ ವ್ಯಾಪಾರಸ್ಥರಿಗೆ ಶುಭದಿನ. ಶುಭಸಂಖ್ಯೆ: 6
ಮಕರ: ಮಕ್ಕಳ ಆರೋಗ್ಯದ ಬಗ್ಗೆ ಅನಗತ್ಯ ಚಿಂತೆ ಮಾಡಬೇಡಿ. ವೈದ್ಯರ ಸಲಹೆ ಪಾಲಿಸಿದರೆ ಸಾಕು, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ. ಶುಭಸಂಖ್ಯೆ: 7
ಕುಂಭ: ಕೃಷಿಕರಿಗೆ ಶುಭದಾಯಕ ಬೆಳವಣಿಗೆ. ಗುರುಹಿರಿಯ ರಿಂದ ಆಶೀರ್ವಾದ. ವಿದೇಶದಲ್ಲಿ ಉದ್ಯೋಗಾವಕಾಶ. ಕ್ರೀಡಾಳುಗಳಿಗೆ ಶುಭ. ಶುಭಸಂಖ್ಯೆ: 7
ಮೀನ: ಸಂಗಾತಿಯ ಅಸಮಾಧಾನದ ಕಾರಣ ಅರಿತು ಸಮಾಧಾನಿಸಿ. ಚರ್ಮದ ಸಮಸ್ಯೆಗೆ ಪರಿಹಾರ. ವಾದ್ಯ ಕಲಾವಿದರಿಗೆ ಶುಭದಿನ. ಶುಭಸಂಖ್ಯೆ: 3