

ಮೇಷ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಅಧಿಕ ಪ್ರಮಾಣದಲ್ಲಿ ನಷ್ಟ. ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಕೋರ್ಟ್ ಕೇಸುಗಳಲ್ಲಿ ಗೊಂದಲ. ಶುಭಸಂಖ್ಯೆ: 5
ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವವು. ಸಹೋದರಿಯಿಂದ ಆರ್ಥಿಕ ಸಹಾಯ. ಉನ್ನತ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ಶುಭಸಂಖ್ಯೆ: 9
ಮಿಥುನ: ಉದ್ಯೋಗ ಸ್ಥಳದಲ್ಲಿ ಬದಲಾವಣೆ. ನಿಮ್ಮ ಮಾತಿನಿಂದ ಕುಟುಂಬಸ್ಥರಿಗೆ ನೋವು. ಗುಪ್ತ ಮಾರ್ಗದಲ್ಲಿ ಧನಾಗಮನ ಸಾಧ್ಯತೆ. ಶುಭಸಂಖ್ಯೆ:3
ಕಟಕ: ಕಚೇರಿ ಕೆಲಸದ ನಿಮಿತ್ತ ವಿದೇಶ ಪ್ರಯಾಣ. ಅನಗತ್ಯ ವಿವಾದ ಎಳೆದುಕೊಳ್ಳಲಿದ್ದೀರಿ. ಧೈರ್ಯ, ದಕ್ಷತೆಯಿಂದ ಒಳ್ಳೆಯ ಹೆಸರು. ಶುಭಸಂಖ್ಯೆ: 4
ಸಿಂಹ: ಆದಾಯ ಮತ್ತು ನಷ್ಟ ಸಮ ಪ್ರಮಾಣದಲ್ಲಿ ಇರಲಿದೆ. ಆರ್ಥಿಕ ಒತ್ತಡಗಳಿಂದ ವ್ಯಾಪಾರದಲ್ಲಿ ಏರುಪೇರು ಉಂಟಾಗಬಹುದು. ಶುಭಸಂಖ್ಯೆ:8
ಕನ್ಯಾ: ಉದ್ಯೋಗ ಒತ್ತಡದಿಂದ ವಿಮುಕ್ತಿ. ನಷ್ಟದ ಪ್ರಮಾಣ ನಿಯಂತ್ರಣಕ್ಕೆ ಬರಲಿದೆ. ಅಧಿಕಾರಿಗಳಿಂದ ನಿಮಗೆ ಸಂಕಷ್ಟ ಬರಬಹುದು. ಶುಭಸಂಖ್ಯೆ:7
ತುಲಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಉದ್ಯೋಗ ಲಾಭ. ಹಣ್ಣಿನ ಅಂಗಡಿಯವರಿಗೆ ಲಾಭದಲ್ಲಿ ಕುಂಠಿತ. ಆತ್ಮೀಯರ ವಿಯೋಗ ಸಾಧ್ಯತೆ. ಶುಭಸಂಖ್ಯೆ: 2
ವೃಶ್ಚಿಕ: ರಾಜಕೀಯದವರಿಂದ ಅನುಕೂಲ. ಉದ್ಯೋಗ ಪ್ರಾರಂಭಿಸಲು ಶುಭದಿನ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಂತೋಷ. ಶುಭಸಂಖ್ಯೆ: 7
ಧನುಸ್ಸು: ಗಣ್ಯರ ಭೇಟಿ. ಔಷಧಿ ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಸಮಸ್ಯೆ ಕಾಡುವ ಸಾಧ್ಯತೆ. ಶುಭಸಂಖ್ಯೆ:7
ಮಕರ: ಸಂಗಾತಿಯೊಂದಿಗೆ ಕಲಹ. ಪಾಲುದಾರಿಕೆಯಲ್ಲಿ ಪ್ರಗತಿ. ಮಹಿಳೆಯರಿಗೆ ಮಾನಸಿಕ ಒತ್ತಡ. ಉದರ ಸಂಬಂಧಿ ಕಾಯಿಲೆ. ಶುಭಸಂಖ್ಯೆ: 5
ಕುಂಭ: ಆಹಾರದಿಂದ ಸಮಸ್ಯೆ. ಸರ್ಕಾರದಿಂದ ಉತ್ತಮ ಪದವಿ ದೊರೆಯಲಿದೆ. ವಿವಾಹ ಪ್ರಯತ್ನದಲ್ಲಿ ಪದೇಪದೇ ವೈಫಲ್ಯ ಕಾಡಲಿದೆ. ಶುಭಸಂಖ್ಯೆ:8
ಮೀನ: ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ಮಕ್ಕಳೊಂದಿಗೆ ವಾಗ್ವಾದ ಮತ್ತು ಬೇಸರ. ಗೃಹ ನಿರ್ವಣದಲ್ಲಿ ಅಡೆತಡೆ ಉಂಟಾದೀತು. ಶುಭಸಂಖ್ಯೆ: 2