

ಮೇಷ: ಸ್ವಂತ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಬರಲಿದೆ. ಅನವಶ್ಯಕ ಓಡಾಟ ಮಾಡಬೇಕಾದೀತು. ಬೇಕರಿ ಉದ್ಯಮದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 5
ವೃಷಭ: ಆಸ್ತಿ ಹಂಚಿಕೆಯಲ್ಲಿ ಗೊಂದಲ. ದಾಂಪತ್ಯ ಜೀವನದಲ್ಲಿ ಭಾವನೆಗಳ ತಾಕಲಾಟ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಶುಭಸಂಖ್ಯೆ: 9
ಮಿಥುನ: ಸರ್ಕಾರಿ ಕೆಲಸದಲ್ಲಿ ತೊಂದರೆ. ಎಲ್ಲ ಬಗೆಹರಿಯಿತು ಎನ್ನುವಾಗ ಹೊಸ ಸಮಸ್ಯೆ ಬರಲಿದೆ. ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 1
ಕಟಕ: ಮನೆ ನವೀಕರಿಸುವ ಯೋಚನೆ. ವಿದ್ಯಾರ್ಥಿಗಳಿಗೆ ಆತಂಕದಲ್ಲಿಯೂ ಜಯ. ಸಂಗೀತಗಾರರಿಗೆ ಮಹತ್ತರ ಅವಕಾಶಗಳು ಲಭ್ಯ. ಶುಭಸಂಖ್ಯೆ: 9
ಸಿಂಹ: ಸಹೋದರರೊಂದಿಗೆ ಕಲಹ ಉಂಟಾಗಬಹುದು. ಕೃಷಿ ಕೆಲಸಗಳಲ್ಲಿ ಮಂದಗತಿ. ಸೇವಾ ವಲಯದ ವರಿಗೆ ಬಡ್ತಿ ದೊರೆಯಲಿದೆ. ಶುಭಸಂಖ್ಯೆ: 2
ಕನ್ಯಾ: ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಶುಭ. ಮಧ್ಯವರ್ತಿಗಳ ವ್ಯವಹಾರದಲ್ಲಿ ಲಾಭ. ಹವ್ಯಾಸಿ ಕಲಾವಿದರಿಗೆ ವಿಶೇಷ ಅವಕಾಶ. ಶುಭಸಂಖ್ಯೆ: 6
ತುಲಾ: ಉಸಿರಾಟದಲ್ಲಿ ತೊಂದರೆ. ಗೃಹ ಮಾರಾಟಸ್ಥರಿಗೆ ಆದಾಯ. ವಿದ್ಯುತ್ ಸ್ಥಾವರದ ಕಾರ್ವಿುಕರು ಎಚ್ಚರದಿಂದಿರುವುದು ಸೂಕ್ತ. ಶುಭಸಂಖ್ಯೆ:2
ವೃಶ್ಚಿಕ: ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಗಂಟಲಿನ ಸಮಸ್ಯೆ ಕಾಡಲಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಗಳಿಗೆ ಪ್ರಗತಿಯಾಗುವುದು. ಶುಭಸಂಖ್ಯೆ: 3
ಧನುಸ್ಸು: ಸೋದರಿಯಿಂದ ಅಸಹಕಾರ. ವಿದ್ಯಾರ್ಥಿಗಳಿಗೆ ಶ್ರದ್ಧೆಯ ಕೊರತೆಯಾಗಲಿದೆ. ಅರಣ್ಯ ಉತ್ಪನ್ನಗಳ ವ್ಯಾಪಾರಸ್ಥರಿಗೆ ಶುಭ. ಶುಭಸಂಖ್ಯೆ:7
ಮಕರ: ಆಭರಣ ವ್ಯಾಪಾರಸ್ಥರಿಗೆ ಕೆಲಸಗಾರರಿಂದ ಮೋಸ. ಆರಕ್ಷಕ ವರ್ಗದವರಿಗೆ ನಿರಾಸೆ . ಸಣ್ಣ ಕೈಗಾರಿಕೆ ಸ್ಥಾಪನೆಗೆ ಸುಸಮಯ. ಶುಭಸಂಖ್ಯೆ: 9
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಸ್ವಯಂ ಉದ್ಯೋಗಸ್ಥರಿಗೆ ಶುಭದಿನ. ಶುಭಸಂಖ್ಯೆ: 3
ಮೀನ: ನಿದ್ರಾಹೀನತೆಯಿಂದ ಅನಾರೋಗ್ಯ. ಕುಶಲಕರ್ವಿು ಗಳಿಗೆ ಬೇಡಿಕೆ. ಕೇಂದ್ರ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ: 8