

ಮೇಷ: ಸಾಧನೆಗೆ ತಕ್ಕ ಪೋ›ತ್ಸಾಹ. ನೋಂದಣಿ ಮುದ್ರಾಂಕದ ಕೆಲಸಗಾರರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಆಸ್ತಿ ಖರೀದಿಗೊಂದಲ. ಶುಭಸಂಖ್ಯೆ:5
ವೃಷಭ: ಸಿಹಿ ತಿಂಡಿ ಮಳಿಗೆಯ ಮಾಲೀಕರಿಗೆ ಅಧಿಕ ಲಾಭ. ಉನ್ನತ ಪರೀಕ್ಷೆಯಲ್ಲಿ ತೇರ್ಗಡೆ. ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ:7
ಮಿಥುನ: ಗಾಯಕರಿಗೆ ಉತ್ತಮ ಅವಕಾಶ . ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ನಷ್ಟ. ತೆಂಗು ಮತ್ತು ಅಡಕೆ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:9
ಕಟಕ: ಧಾರ್ವಿುಕ ವೃತ್ತಿಪರರಿಗೆ ಧನ ನಷ್ಟ. ವಾಹನ ದುರಸ್ತಿಗೆ ಹಣವ್ಯಯವಾಗಲಿದೆ. ರೇಷ್ಮೆ ಬೆಳೆಗಾರರಿಗೆ ಮಾರಾಟದಲ್ಲಿ ಅಧಿಕ ಲಾಭ.ಶುಭಸಂಖ್ಯೆ:1
ಸಿಂಹ: ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ವಿಚ್ಛೇದನ ಪ್ರಕರಣ ಇತ್ಯರ್ಥವಾಗಲಿದೆ. ವಕೀಲ ವೃತ್ತಿಯವರಿಗೆ ಹೆಚ್ಚಿದ ಒತ್ತಡ.ಶುಭಸಂಖ್ಯೆ:9.
ಕನ್ಯಾ: ಸೌಂದರ್ಯ ವರ್ಧಕಗಳ ಮಾರಾಟದಲ್ಲಿ ನಷ್ಟ. ಆಧ್ಯಾತ್ಮಿಕ ಸಾಧನೆಯಿಂದ ತೃಪ್ತಿ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ:7
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ವೈದ್ಯರಿಗೆ ಉತ್ತಮ ಹೆಸರು ಸಿಗಲಿದೆ. ಕಾಂಡಿಮೆಂಟ್ಸ್ ನಲ್ಲಿ ನಿರೀಕ್ಷೆಗೆ ಮೀರಿ ಅಭಿವೃದ್ಧಿ. ಶುಭಸಂಖ್ಯೆ:3
ವೃಶ್ಚಿಕ: ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ವೆಚ್ಚ. ಆಸ್ತಿ ವಿವಾದ ಅಂತ್ಯ. ಆತ್ಮೀಯರ ವಿಯೋಗ. ಗೂಡಂಗಡಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:7
ಧನುಸ್ಸು: ಯಕ್ಷಗಾನ, ನಾಟಕ ಕಲಾವಿದರಿಗೆ ಸಂಪಾದನೆ ವೃದ್ಧಿ. ಪ್ರತಿಭೆಗೆ ಸೂಕ್ತ ಮನ್ನಣೆ. ಹೊಸ ಯೋಜನೆ ಕಾರ್ಯಗತವಾಗಲಿದೆ. ಶುಭಸಂಖ್ಯೆ:7
ಮಕರ: ಚಿಕ್ಕ ಶಸ್ತ್ರಚಿಕಿತ್ಸೆಯ ಸಾಧ್ಯತೆ. ಸ್ವಗ್ರಾಮಕ್ಕೆ ಪ್ರಯಾಣ. ಆತ್ಮೀಯ ಸ್ನೇಹಿತನ ಭೇಟಿ. ವಿದೇಶದಿಂದ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ:9
ಕುಂಭ: ಕಾರ್ಯಕ್ರಮ ಆಯೋಜಕರಿಗೆ ಧನಲಾಭ. ಶುಭ ಕಾರ್ಯದಲ್ಲಿ ಗೊಂದಲ. ಮನೆ ನವೀಕರಣಕ್ಕೆ ಖರ್ಚು. ದಿನಾಂತ್ಯದಲ್ಲಿ ಅಶುಭ. ಶುಭಸಂಖ್ಯೆ:4
ಮೀನ: ನಿಮ್ಮವರೇ ತಿರುಗಿ ಬೀಳಬಹುದು. ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ. ಪುಸ್ತಕ ವ್ಯಾಪಾರಿಗಳಿಗೆ ನಷ್ಟ. ಆತ್ಮೀಯರ ಭೇಟಿ. ಶುಭಸಂಖ್ಯೆ: 7