ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆಯಾಗಿ ಸಂತಸ

Nitya-Bhavisya-FILEminimizer-2
Published on

ಮೇಷ: ಕುಟುಂಬಸ್ಥರೊಂದಿಗೆ ಉತ್ತಮ ಒಡನಾಟ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆಯಾಗಿ ಸಂತಸ. ತಾಯಿಯಿಂದ ಸಹಾಯ. ಶುಭಸಂಖ್ಯೆ: 5

ವೃಷಭ: ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯದ ನಿರೀಕ್ಷೆ ಬೇಡ. ಮಾನಸಿಕ ಗೊಂದಲಗಳಿಂದ ಹೊರಬನ್ನಿ. ಶುಭಸಂಖ್ಯೆ: 9

ಮಿಥುನ: ಆರ್ಥಿಕ ನಷ್ಟ ಬೇಸರ ತರಿಸುವುದು. ಧಾರ್ವಿುಕ ಕಾರ್ಯಗಳಿಗೆ ಖರ್ಚು. ದುಶ್ಚಟಗಳಿದ್ದರೆ ಭಾರಿ ತೊಂದರೆಯಾದೀತು, ಹುಷಾರು. ಶುಭಸಂಖ್ಯೆ:1

ಕಟಕ: ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭವಾಗುವುದು. ವಸ್ತ್ರಾಭರಣ ಖರೀದಿಯ ಮನಸ್ಸು ಮಾಡುವಿರಿ. ಮಾನಸಿಕ ಅಸ್ಥಿರತೆ. ಶುಭಸಂಖ್ಯೆ: 4

ಸಿಂಹ: ಮಕ್ಕಳಿಂದ ಖರ್ಚು, ನಷ್ಟ. ಉದ್ಯೋಗದಲ್ಲಿ ವಿಘ್ನ ಎದುರಾಗಬಹುದು. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ಕುಲದೇವರ ಸ್ಮರಣೆ ಇರಲಿ. ಶುಭಸಂಖ್ಯೆ: 7

ಕನ್ಯಾ: ಪ್ರಯಾಣದಲ್ಲಿ ಅನುಕೂಲ ಮತ್ತು ಆರ್ಥಿಕ ಲಾಭ. ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:3

ತುಲಾ: ಉದ್ಯೋಗದಲ್ಲಿ ಅಡೆತಡೆ. ದುಃಖ, ವ್ಯಾಕುಲತೆ ಕಾಡಲಿದೆ. ಪ್ರಯಾಣದಲ್ಲಿ ನಿರಾಸೆ. ಮನೆದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ. ಶುಭಸಂಖ್ಯೆ:9

ವೃಶ್ಚಿಕ: ವೈವಾಹಿಕ ಜೀವನದ ಚಿಂತೆ ಜಾಸ್ತಿಯಾಗಲಿದೆ. ಒಪ್ಪಂದದ ವ್ಯವಹಾರದಲ್ಲಿ ಸಮಸ್ಯೆ. ಸಕಾಲಕ್ಕೆ ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ:1

ಧನುಸ್ಸು: ಸಾಲಬಾಧೆ, ಶತ್ರು ಕಾಟ ಹೆಚ್ಚಾಗಬಹುದು. ಕಿರಿಯರಿಂದ ನಿಂದನೆ ಕೇಳಬೇಕಾದೀತು. ಕಾಲವೇ ಉತ್ತರಿಸುವುದು, ಸುಮ್ಮನಿರಿ. ಶುಭಸಂಖ್ಯೆ: 6

ಮಕರ: ಕಲಾಕ್ಷೇತ್ರದವರಿಗೆ ಚಟುವಟಿಕೆಗಳಲ್ಲಿ ಹಿನ್ನಡೆ. ಉದ್ಯೋಗದ ಚಿಂತೆಗೆ ಪರಿಹಾರ ಸಿಗದೆ ನಿರಾಸೆ. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ಶುಭಸಂಖ್ಯೆ:9

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ದುಪ್ಪಟ್ಟು ಆಸಕ್ತಿ. ಧಾರ್ವಿುಕ ಕ್ಷೇತ್ರಗಳಿಗೆ ಹೋಗುವಿರಿ. ಸ್ವಯಂ ಉದ್ಯೋಗಸ್ಥರಿಗೆ ಶುಭದಿನ. ಶುಭಸಂಖ್ಯೆ:1

ಮೀನ: ಅಲಂಕಾರಿಕ ವಸ್ತು ಖರೀದಿಗೆ ಯೋಚನೆ. ಅಧಿಕಾರಿ ವರ್ಗದವರಿಂದ ವಿನಾಕಾರಣ ಕಿರುಕುಳ. ಉದ್ಯೋಗದ ಹುಡುಕಾಟ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net