ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಹೋಟೆಲ್ ವ್ಯವಹಾರದಲ್ಲಿ ಲಾಭ

Nithya Bhavishya
Published on

ಮೇಷ: ಸಾಮಾಜಿಕವಾಗಿ ಗೌರವ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಆತ್ಮಗೌರವಕ್ಕಾಗಿ ಸಾಲ ತೀರಿಸುವಿರಿ. ಶುಭಸಂಖ್ಯೆ: 8

ವೃಷಭ: ಬಂಧುಗಳೊಂದಿಗೆ ಪ್ರಯಾಣ. ಜೇನು ಕೃಷಿಕರಿಗೆ ಶುಭದಿನ. ಸ್ಥಿರಾಸ್ತಿ ಖರೀದಿಗೆ ನಿರ್ಧಾರ. ಸರ್ಕಾರಿ ನೌಕರಿಯಲ್ಲಿ ಬದಲಾವಣೆ.ಶುಭಸಂಖ್ಯೆ: 2

ಮಿಥುನ: ಆರೋಗ್ಯದತ್ತ ಗಮನವಿರಲಿ. ಪ್ರೇಮದಲ್ಲಿ ಜಯ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಯಶಸ್ಸು. ಶುಭಸಂಖ್ಯೆ:1

ಕಟಕ: ಗಿರಣಿ ಮಾಲೀಕರಿಗೆ ಕೆಲಸಗಾರರಿಂದ ಲಾಭ. ಸ್ಥಿರಾಸ್ತಿ ಖರೀದಿಗೆ ಸುಸಮಯ. ಸಹೋದರಿಯ ಜೀವನದಲ್ಲಿ ಬದಲಾವಣೆ. ಶುಭಸಂಖ್ಯೆ: 5

ಸಿಂಹ: ಉದ್ಯೋಗ ಸ್ಥಳದಲ್ಲಿ ಸಮಾಧಾನಕರ ವಾತಾವರಣ ಇರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಬಂದು ಸಮಾಧಾನ ಶುಭಸಂಖ್ಯೆ: 7

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಹೋಟೆಲ್ ವ್ಯವಹಾರದಲ್ಲಿ ಲಾಭ. ಮಹಿಳಾ ಉದ್ಯಮಿಗಳಿಗೆ ಹೂಡಿಕೆದಾರರ ನೆರವು. ಶುಭಸಂಖ್ಯೆ: 8

ತುಲಾ: ಶತ್ರು ನಿಗ್ರಹ ಮಾಡುವಿರಿ. ಆತ್ಮಗೌರವಕ್ಕೆ ಕುಂದಾಗದಂತೆ ನಡೆದುಕೊಳ್ಳಿ. ಮಹಿಳೆಯರಿಗೆ ಔದ್ಯೋಗಿಕವಾಗಿ ಅವಕಾಶ ಪ್ರಾಪ್ತಿ. ಶುಭಸಂಖ್ಯೆ: 9

ವೃಶ್ಚಿಕ: ದೂರಾಲೋಚನೆಗಳು ಕಾರ್ಯಗತವಾಗಲಿವೆ. ಖರೀದಿಯಲ್ಲಿ ಎಚ್ಚರಿಕೆ ಅಪೇಕ್ಷೕಯ. ಪೋಲೀಸ್ ಇಲಾಖೆಯ ಹುದ್ದೆಗೆ ಆಯ್ಕೆ.ಶುಭಸಂಖ್ಯೆ: 3

ಧನುಸ್ಸು: ಸಾಲ ತೀರಿಸುವಿರಿ. ದೇವತಾ ಕಾರ್ಯದಲ್ಲಿ ನಿರತರಾಗುವಿರಿ. ದವಸ ಧಾನ್ಯ ವ್ಯಾಪಾರದಲ್ಲಿ ಲಾಭ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 9

ಮಕರ: ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ದಿನದ ಅಂತ್ಯದಲ್ಲಿ ಆತ್ಮೀಯರ ಭೇಟಿ. ಶುಭಸಂಖ್ಯೆ:2

ಕುಂಭ:  ಮನೆಯ ಆಸ್ತಿ ವಿಚಾರಕ್ಕೆ ಸಮಾಧಾನಕರ ಅಂತ್ಯ. ಭವಿಷ್ಯದ ಚಿಂತನೆ ದೂರ. ಗೃಹ ನಿರ್ವಣಕ್ಕೆ ಚಾಲನೆ. ಚಾಲಕರಿಗೆ ಶುಭದಿನ. ಶುಭಸಂಖ್ಯೆ: 3

ಮೀನ: ಉಪನ್ಯಾಸಕರು ಮತ್ತು ಶಿಕ್ಷಕರಿಗೆ ವರ್ಗಾವಣೆ ಸಾಧ್ಯತೆ. ಕೊಟ್ಟ ಹಣ ತಿರುಗಿ ಬರಲಿದೆ. ಕೃಷಿಕರ ಫಸಲಿಗೆ ಸೂಕ್ತ ಬೆಲೆ ಸಿಗಲಿದೆ .ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net