ದಿನ ಭವಿಷ್ಯ: ಈ ರಾಶಿಯವರಿಗಿಂದು ಖರ್ಚು ವೆಚ್ಚಗಳು ಹೆಚ್ಚು

Nitya Bhavisya Vijayavani
Published on

ಮೇಷ:ಕಾನೂನು ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಮಹಿಳಾ ಪೊಲೀಸರಿಗೆ ಒತ್ತಡ. ನಿರ್ಧಾರಗಳಿಗೆ ಬದ್ಧರಾಗಿರಿ. ಶುಭಸಂಖ್ಯೆ: 9

ವೃಷಭ:ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯವಾಗುವುದು. ಖರ್ಚು ವೆಚ್ಚಗಳು ಹೆಚ್ಚು. ಸಾರಿಗೆ ವ್ಯವಸ್ಥೆ ನಡೆಸುತ್ತಿರುವವರಿಗೆ ಹೆಚ್ಚು ಲಾಭ. ಶುಭಸಂಖ್ಯೆ:1

ಮಿಥುನ:ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು. ಮಹಿಳೆಯರಿಗೆ ಆತ್ಮವಿಶ್ವಾಸದ ಕೊರತೆ. ಸ್ಥಗಿತಗೊಂಡ ಕಾರ್ಯಗಳ ಮುಂದುವರಿಕೆ. ಶುಭಸಂಖ್ಯೆ:5

ಕಟಕ:ಆಸ್ತಿ ನೊಂದಣಿಯಲ್ಲಿ ಗೊಂದಲ ಉಂಟಾಗಬಹುದು. ದೂರದೂರಿನಿಂದ ಬಂಧುಗಳ ಆಗಮನ. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ:8

ಸಿಂಹ:ಗ್ರಂಥ ರಚನೆಯಲ್ಲಿ ಆಸಕ್ತಿ. ಭೂಮಿ ಖರೀದಿಸುವ ಯೋಗ. ಪಾಲುದಾರಿಕೆಯಲ್ಲಿ ಮನಸ್ತಾಪ. ಅನಿರೀಕ್ಷಿತ ಆರೋಗ್ಯ ತೊಂದರೆ. ಶುಭಸಂಖ್ಯೆ:7

ಕನ್ಯಾ:ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ. ಅಧಿಕ ಪ್ರಯಾಣ ಮಾಡುವುದು ಬೇಡ, ಕೆಲಸದ ಒತ್ತಡದಿಂದ ದೇಹಾಯಾಸ. ಶುಭಸಂಖ್ಯೆ:4

ತುಲಾ:ಹಿರಿಯರಿಗೆ ಚಿಕ್ಕ ಅಪಘಾತವಾಗುವ ಸಂಭವ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಶಿಕ್ಷಕರಿಗೆ ವರ್ಗಾವಣೆಯಾಗುವ ಸಾಧ್ಯತೆ. ಶುಭಸಂಖ್ಯೆ:7

ವೃಶ್ಚಿಕ: ಆಹಾರ ಪದಾರ್ಥಗಳ ಸಗಟು ವ್ಯಾಪಾರದಲ್ಲಿ ನಷ್ಟ, ಕಚೇರಿಯಲ್ಲಿ ಉದ್ಯೋಗದ ಬಗ್ಗೆ ವೈರಾಗ್ಯ. ದಿನಾಂತ್ಯದಲ್ಲಿ ಔತಣ ಕೂಟ. ಶುಭಸಂಖ್ಯೆ:4

ಧನಸ್ಸು:ಬಂಧುಗಳೊಂದಿಗೆ ಜಗಳ ಉಂಟಾಗಬಹುದು. ಮನಸ್ಸಿನಲ್ಲಿ ಅಶಾಂತಿ. ಕಲಾವಿದರಿಗೆ ಅಪಕೀರ್ತಿ. ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ:3

ಮಕರ:ದಾಂಪತ್ಯದಲ್ಲಿ ವಿರಸ. ಶತ್ರುಗಳೊಂದಿಗೆ ಕಲಹ ಉಂಟಾದೀತು. ಭೂಮಿಯ ವ್ಯಾಜ್ಯದ ವಿಚಾರಣೆ ನ್ಯಾಯಾಲಯದಲ್ಲಿ ವಿಳಂಬ.ಶುಭಸಂಖ್ಯೆ:1

ಕುಂಭ:ಐಟಿ ಅಧಿಕಾರಿ ವರ್ಗದಿಂದ ತೊಂದರೆ. ವಿವಾಹ ಯತ್ನದಲ್ಲಿ ಕಾರ್ಯಸಿದ್ಧಿಯಾಗಲಿದೆ. ಕೌಟುಂಬಿಕ ಖರ್ಚು ಸರಿದೂಗಿಸಲು ಸಾಲ. ಶುಭಸಂಖ್ಯೆ: 7

ಮೀನ:ಶತ್ರುಗಳ ವಿರುದ್ಧ ಜಯ. ಹೃದಯ ಸಂಬಂಧಿ ರೋಗ ಉಲ್ಬಣ. ಒತ್ತಡದ ಬದುಕಿನಿಂದ ಹೊರಬನ್ನಿ. ವೈದ್ಯರಿಗೆ ವಿಪರೀತ ಕೆಲಸ. ಶುಭಸಂಖ್ಯೆ:8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net