ನಿತ್ಯ ಭವಿಷ್ಯ: ಈ ರಾಶಿವರಿಗಿಂದು ಸಾಲದ ಹೊರೆ ಕಡಿಮೆಯಾಗಲಿದೆ

Nithya Bhavishya
Published on

ಮೇಷ: ಧಾರ್ಮಿಕ ಕಾರ್ಯದಲ್ಲಿ ಭಾಗಿ. ಪೆಟ್ರೋಲ್ ಬಂಕ್ ಮಾಲೀಕರಿಗೆ ಶುಭ. ಆಟೋಮೊಬೈಲ್ ವ್ಯಾಪಾರದಲ್ಲಿ ಬದಲಾವಣೆ. ಶುಭಸಂಖ್ಯೆ: 1

ವೃಷಭ:ಸರಕು ಸಾಗಣೆಯಲ್ಲಿ ಧನ ಸಂಪಾದನೆ, ಹೋಟೆಲ್ ಸ್ಥಾಪನೆಗೆ ನಿರ್ಧಾರ. ಜೋಳ,ರಾಗಿ ಬೇಸಾಯಗಾರರಿಗೆ ಉತ್ತಮ ಲಾಭ. ಶುಭಸಂಖ್ಯೆ: 9

ಮಿಥುನ: ಅಸ್ತಿ ವಿವಾದ ಬಗೆಹರಿಯಲಿದೆ. ಸಾಲದ ಹೊರೆ ಕಡಿಮೆಯಾಗಲಿದೆ. ನ್ಯಾಯಾಲಯದ ತೀರ್ಪು ವಿಳಂಬವಾಗುವ ಸಾಧ್ಯತೆ. ಶುಭಸಂಖ್ಯೆ:7

ಕಟಕ: ಮಹಿಳಾ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಹೊಸ ವಾಹನ ಖರೀದಿಸುವಿರಿ. ದೂರ ಪ್ರಯಾಣದಿಂದ ಆದಾಯ. ಶುಭಸಂಖ್ಯೆ:1

ಸಿಂಹ: ಕಲಾವಿದರಿಗೆ ವೇದಿಕೆ ಲಭ್ಯ. ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಶುಭಸಂಖ್ಯೆ:2

ಕನ್ಯಾ: ಹೊಸ ವ್ಯಾಪಾರದಲ್ಲಿ ಆದಾಯ ದ್ವಿಗುಣ. ವೃತ್ತಿಪರ ವೈದ್ಯರಿಗೆ ಶುಭದಿನ. ಹಳೆಯ ಸ್ನೇಹಿತರ ಭೇಟಿ, ಸಂಗಾತಿಯೊಂದಿಗೆ ಚಕಮಕಿ. ಶುಭಸಂಖ್ಯೆ: 7

ತುಲಾ: ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲ. ಗೃಹ ನಿರ್ಮಾಣ ಕೆಲಸಗಳು ಶೀಘ್ರುಗತಿಯಲ್ಲಿ ಮುಗಿಯಲಿವೆ. ಶತ್ರುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಶುಭಸಂಖ್ಯೆ:5

ವೃಶ್ಚಿಕ: ಕುಟುಂಬದಲ್ಲಿ ನಿಮ್ಮ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಗಲಿದೆ. ಆಸ್ತಿ ನೋಂದಣಿಗೆ ಇದ್ದ ತಡೆ ನಿವಾರಣೆ. ಧಾರ್ಮಿಕ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 6

ಧನುಸ್ಸು: ಹೊಸ ವಿದ್ಯೆ ಕಲಿಯುವಲ್ಲಿ ಮನಸ್ಸು, ಭಾವನಾತ್ಮಕ ವ್ಯವಹಾರ ಬೇಡ. ಅಪರಿಚಿತರಿಂದ ಸಹಾಯ. ಸಣ್ಣ ವ್ಯಾಪಾರದಲ್ಲಿ ಲಾಭ, ಶುಭಸಂಖ್ಯೆ: 4

ಮಕರ: ಮಹಿಳಾ ಸಹೋದ್ಯೋಗಿಗಳಿಂದ ಲಾಭ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ. ಚಿನ್ನ, ಬೆಳ್ಳಿ ಖರೀದಿಯಲ್ಲಿ ಅಪವ್ಯಯ ಆಗದಿರಲಿ. ಶುಭಸಂಖ್ಯೆ:9

ಕುಂಭ: ಭರತನಾಟ್ಯ ಕಲಾವಿದರಿಗೆ ವಿದೇಶ ಪ್ರಯಾಣ. ಪ್ರತಿಭೆಯ ಮೂಲಕ ಧನ ಸಂಪಾದನೆ. ಆಸ್ತಿ ಮಾಲೀಕರಿಗೆ ಅನಿರೀಕ್ಷಿತ ಸಂಪಾದನೆ. ಶುಭಸಂಖ್ಯೆ: 6

ಮೀನ: ಸಹೋದರರೊಂದಿಗಿದ್ದ ಮನಸ್ತಾಪ ನಿವಾರಣೆ. ನಿರ್ಧಾರ ಕೈಗೊಳ್ಳುವಾಗ ಎಚ್ಚರದಿಂದ ಇರಿ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ, ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net