ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ನಿರುದ್ಯೋಗ ಸಮಸ್ಯೆಗೆ ಪರಿಹಾರ, ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ

Nitya Bhavisya Vijayavani
Published on

ಮೇಷ: ಕಲಾವಿದರಿಗೆ ವಿಶೇಷ ಮನ್ನಣೆ. ಸಗಟು ವ್ಯಾಪಾರದಲ್ಲಿ ತೃಪ್ತಿಕರ ಬದಲಾವಣೆ. ವೈಮಾನಿಕ ಕ್ಷೇತ್ರದ ಕೆಲಸಗಾರರಿಗೆ ಶುಭದಿನ. ಶುಭಸಂಖ್ಯೆ: 9

ವೃಷಭ: ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ. ಉನ್ನತ ವಿದ್ಯಾಭ್ಯಾಸದ ಫಲಿತಾಂಶ ನಿಮ್ಮ ಕಡೆಗಿರುತ್ತದೆ. ನಿವೇಶನ ಖರೀದಿ. ಶುಭಸಂಖ್ಯೆ: 6

ಮಿಥುನ: ಅಡುಗೆ ತಯಾರಕರಿಗೆ ಅಧಿಕ ಹಣ. ನೊಂದಣಿ ಕ್ಷೇತ್ರದ ಅಧಿಕಾರಿಗಳಿಗೆ ವರ್ಗಾವಣೆ. ದಿನದ ಅಂತ್ಯದಲ್ಲಿ ಸ್ನೇಹಿತರ ಭೇಟಿ. ಶುಭಸಂಖ್ಯೆ: 6

ಕಟಕ: ಅಚ್ಚರಿಯ ಸಂಗತಿಯನ್ನು ಕೇಳುವಿರಿ. ಶಿಕ್ಷಣ ಸಂಸ್ಥೆಯ ಮಾಲೀಕರಿಗೆ ಒತ್ತಡ. ವಿದ್ಯುತ್ ಸಂಬಂಧ ಕೆಲಸಗಳಲ್ಲಿ ಎಚ್ಚರವಿರಲಿ. ಶುಭಸಂಖ್ಯೆ: 2

ಸಿಂಹ: ಸಾಮಾಜಿಕ ಕೆಲಸಗಳಲ್ಲಿ ಭಾಗವಹಿಸಿ ಕುಟುಂಬದ ಕಡೆ ಗಮನ ಹರಿಸಿ. ಸಕಾಲದಲ್ಲಿ ಆರಂಭಿಸಿದ ಕೆಲಸಗಳು ಅಂತ್ಯವಾಗಲಿದೆ. ಶುಭಸಂಖ್ಯೆ:1

ಕನ್ಯಾ: ಪ್ರವಚನಕಾರರಿಗೆ ಧನ ಲಾಭವಿದೆ. ಪತ್ರಕರ್ತರಿಗೆ ಸ್ಥಳ ಬದಲಾವಣೆ. ಕೇಂದ್ರ ಸರ್ಕಾರಿ ಮಹಿಳಾ ಉದ್ಯಮಿಗಳಿಗೆ ಶುಭದಿನ. ಶುಭಸಂಖ್ಯೆ: 3

ತುಲಾ: ಸಮಾನ ಮನಸ್ಕರೊಂದಿಗೆ ಸ್ನೇಹ ಬೆಳೆಸುವಿರಿ. ಹೊಸಕೆಲಸದಲ್ಲಿ ನಿರಾಸೆ. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ:1

ವೃಶ್ಚಿಕ: ವಿದ್ಯುತ್ ಗುತ್ತಿಗೆದಾರರಿಗೆ ಉತ್ತಮ ಧನ ಲಾಭ. ಕಲಾವಿದರಿಗೆ ಹೊಸ ಅವಕಾಶ ಸಿಗಲಿದೆ. ರೈತರಿಗೆ ಸಾಲ ತೀರಿಸುವ ಯೋಗ. ಶುಭಸಂಖ್ಯೆ:8

ಧನುಸ್ಸು: ಕಾರು ಖರೀದಿಗೆ ಸುಸಮಯ. ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಹಿತಶತ್ರುಗಳ ಬಗ್ಗೆ ಜಾಗರೂಕತೆ ಇರಲಿ. ಶುಭಸಂಖ್ಯೆ:5

ಮಕರ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಪರ್ಧೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ತಯಾರಿ ಇರಲಿ. ವಿದೇಶದಲ್ಲಿರುವ ಮಕ್ಕಳಿಂದ ಶುಭಸುದ್ದಿ. ಶುಭಸಂಖ್ಯೆ: 6

ಕುಂಭ:  ತರಕಾರಿ ಬೇಸಾಯದವರಿಗೆ ಲಾಭ. ನಿರುದ್ಯೋಗ ಸಮಸ್ಯೆಗೆ ಪರಿಹಾರ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ. ಶುಭಸಂಖ್ಯೆ:2

ಮೀನ: ನಾಯಕತ್ವದಲ್ಲಿ ಬದಲಾವಣೆ ಆಗಲಿದೆ. ದವಸ ಧಾನ್ಯಗಳ ಮಾರಾಟದಲ್ಲಿ ಲಾಭ. ತಾಂತ್ರಿಕ ಕ್ಷೇತ್ರದ ಪರಿಣಿತರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net