ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿವಾಹ ಯೋಗ

Nitya Bhavisya Vijayavani
Published on

ಮೇಷ: ಧಾರ್ವಿುಕ ವೃತ್ತಿಯಲ್ಲಿ ದ್ರವ್ಯಲಾಭ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಬಂಧುಗಳ ಭೇಟಿ, ವಿದ್ಯುತ್ ಆಘಾತವಾಗಬಹುದು ಎಚ್ಚರ. ಶುಭಸಂಖ್ಯೆ: 5

ವೃಷಭ:ಕೃಷಿಯಲ್ಲಿ ಅಲ್ಪ ಲಾಭ. ವಿನಾಕಾರಣ ದ್ವೇಷ. ದಾಯಾದಿ ಕಲಹ. ಶತ್ರು ಬಾಧೆ. ತೀರ್ಥಯಾತ್ರಾ ದರ್ಶನ. ವಿವಾಹ ಯೋಗ. ಶುಭಸಂಖ್ಯೆ: 9

ಮಿಥುನ:ವಾಹನ ಚಾಲಕರಿಗೆ ಉದ್ಯೋಗ ನಷ್ಟದ ಭೀತಿ. ಆದಾಯಕ್ಕಿಂತ ಖರ್ಚು ಜಾಸ್ತಿ. ರಾಜಕೀಯದಲ್ಲಿ ಇರುವವರಿಗೆ ಉನ್ನತ ಸ್ಥಾನ. ಶುಭಸಂಖ್ಯೆ: 1

ಕಟಕ: ಯತ್ನ ಕಾರ್ಯಗಳಲ್ಲಿ ಅನಿರೀಕ್ಷಿತ ವಿಘ್ನ. ಹೃದಯ ಸಂಬಂಧಿ ರೋಗ ಕಾಡಬಹುದು. ಆಕಸ್ಮಿಕ ಖರ್ಚು. ಸಾಲಗಾರರಿಂದ ಕಿರಿಕಿರಿ. ಶುಭಸಂಖ್ಯೆ: 2

ಸಿಂಹ:ನೀಚರಿಂದ ತೊಂದರೆಯಾದೀತು. ಸ್ತ್ರೀಯರಿಂದ ಲಾಭ. ಶುಭಕಾರ್ಯಕ್ಕೆ ತಡೆ ಉಂಟಾಗಲಿದೆ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ:2

ಕನ್ಯಾ:ಸಮಾಜದಲ್ಲಿ ಗೌರವ ದೊರೆಯಲಿದೆ. ಅಮೂಲ್ಯ ವಸ್ತುಗಳ ಖರೀದಿ. ಇಚ್ಛಿತ ಕಾರ್ಯಗಳಲ್ಲಿ ಭಾಗಿ. ಶುಭ ಸುದ್ದಿ ಕೇಳಲಿದ್ದೀರಿ. ಶುಭಸಂಖ್ಯೆ:8

ತುಲಾ:ಅಧಿಕ ಲಾಭ ಗಳಿಸುವಿರಿ. ಆರೋಗ್ಯ ವೃದ್ಧಿಯಾಗುವುದು. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಪಿತ್ರಾರ್ಜಿತ ಆಸ್ತಿಯಿಂದ ಧನ ಪ್ರಾಪ್ತಿ. ಶುಭಸಂಖ್ಯೆ:3

ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ ವಹಿಸಿ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ಸಿಗುವುದು. ಶುಭಸಂಖ್ಯೆ:7

ಧನುಸ್ಸು:ರಕ್ಷಣಾ ಕ್ಷೇತ್ರದ ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಗುರುಹಿರಿಯರ ಭೇಟಿ. ಆರಕ್ಷಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಶುಭಸಂಖ್ಯೆ:2

ಮಕರ:ಭೂ ವ್ಯವಹಾರದಿಂದ ಲಾಭ. ಯತ್ನ ಕಾರ್ಯಗಳಿಗೆ ವಿಘ್ನ. ನಂಬಿದ ಜನರಿಂದ ಮೋಸ ವಾಗುವುದು.ತೀರ್ಥಕ್ಷೇತ್ರ್ರ ದರ್ಶನ. ಶುಭಸಂಖ್ಯೆ: 2

ಕುಂಭ: ಸಜ್ಜನ ವಿರೋಧ. ಮಹಿಳೆಯರಿಗೆ ವಿನಾಕಾರಣ ಅಪವಾದ ಬರಲಿದೆ. ಹಿರಿಯ ಅಧಿಕಾರಿಗಳಲ್ಲಿ ಕಲಹ. ಎಲ್ಲಿ ಹೋದರೂ ಅಶಾಂತಿ.ಶುಭಸಂಖ್ಯೆ: 1

ಮೀನ:ದಾಂಪತ್ಯದಲ್ಲಿ ವಿರಸಕ್ಕೆ ಆಸ್ಪದ ಬೇಡ. ಸೀರೆ, ಬಟ್ಟೆ ವ್ಯಾಪಾರದಲ್ಲಿ ಲಾಭವಾಗಲಿದೆ. ವಿಚ್ಛೇದಿತರಿಗೆ ಮರುವಿವಾಹ ಯೋಗ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net