ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಲಾಭ

Nitya-Bhavisya-FILEminimizer
Published on

ಮೇಷ: ರತ್ನಾಭರಣ ಖರೀದಿ. ಬಂಧುಗಳ ಮಾತಿನಿಂದ ಅವಮಾನ. ವಾಹನ ಪ್ರಾಪ್ತಿ. ತಾಯಿಯ ಸಹಕಾರ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 9

ವೃಷಭ: ವಾಹನ ದುರಸ್ತಿಗಾಗಿ ಖರ್ಚು. ದೂರ ಪ್ರಯಾಣ. ಕುಟುಂಬದಲ್ಲಿ ಧಾರ್ವಿುಕ ಕಾರ್ಯಗಳು. ಹಣಕಾಸಿನ ತೊಂದರೆ ಆದೀತು. ಶುಭಸಂಖ್ಯೆ: 2

ಮಿಥುನ: ವಿಮಾನ ಪ್ರಯಾಣದಲ್ಲಿ ವಿಳಂಬ. ದಾಖಲೆಗಳ ಪ್ರಾಪ್ತಿ. ಸರ್ಕಾರಿ ಕಾರ್ಯ ಜಯ. ಅನಿರೀಕ್ಷಿತ ಲಾಭ. ಆರ್ಥಿಕ ಅನುಕೂಲ. ಶುಭಸಂಖ್ಯೆ: 3

ಕಟಕ: ಆರ್ಥಿಕ ಸ್ಥಿತಿ ಉತ್ತಮ. ಷೇರು ವ್ಯವಹಾರದಲ್ಲಿ ಮೋಸ. ಅಧಿಕಾರಿಗಳಿಂದ ಒತ್ತಡ. ಮಗನ ವರ್ತನೆಯಿಂದ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 7

ಸಿಂಹ: ಭೂಮಿವ್ಯವಹಾರದಲ್ಲಿ ಯಶ. ಮಗಳ ಮದುವೆಗೆ ಅಡ್ಡಿ. ಧರ್ಮಕಾರ್ಯದಲ್ಲಿ ಗೊಂದಲ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:1

ಕನ್ಯಾ: ಅನಿರೀಕ್ಷಿತ ಪ್ರಯಾಣ. ವಾಹನ ಅವಘಡ. ಸಂಗಾತಿ ಆಸ್ಪತ್ರೆಗೆ ದಾಖಲು. ಕೋರ್ಟ್​ನಲ್ಲಿ ಹಿನ್ನಡೆ. ಪಾಲುದಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 5

ತುಲಾ: ದಾಂಪತ್ಯದಲ್ಲಿ ಮನಸ್ತಾಪ. ಆರ್ಥಿಕ ಮುಗ್ಗಟ್ಟು ಸ್ವಲ್ಪ ಕಾಡಲಿದೆ. ಉದ್ಯೋಗ ಬದಲಾವಣೆಯಿಂದ ಅತಂತ್ರ ಸ್ಥಿತಿ ಉಂಟಾದೀತು. ಶುಭಸಂಖ್ಯೆ:8

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ. ಅಧಿಕಾರಿಗಳಿಂದ ನಿಮ್ಮ ಕೆಲಸದ ಕುರಿತು ಪ್ರಶಂಸೆ. ಆರೋಪದಿಂದ ಮುಕ್ತಿ. ಆರ್ಥಿಕ ಮಂದಗತಿ. ಶುಭಸಂಖ್ಯೆ: 1

ಧನುಸ್ಸು: ಪ್ರೀತಿ-ಪ್ರೇಮದಲ್ಲಿ ಸಂಶಯ. ದುರಭ್ಯಾಸದಿಂದ ತೊಂದರೆ. ಹೊಸ ಪಾಲುದಾರರ ಆಗಮನ. ಕುಲದೇವರನ್ನು ಸ್ಮರಣೆ ಮಾಡಿ. ಶುಭಸಂಖ್ಯೆ: 7

ಮಕರ: ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಗೊಂದಲ. ಅಧರ್ಮದ ಕೆಲಸ ಮಾಡಲು ಹೋಗಬೇಡಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5

ಕುಂಭ: ಸಂಗಾತಿಯಿಂದ ಅನುಕೂಲ. ಧೈರ್ಯದಿಂದ ಕಾರ್ಯ ಸಾಧನೆಗೆ ಯತ್ನ. ಉದ್ಯೋಗದಲ್ಲಿ ನಿರಾಸಕ್ತಿ. ಬದಲಾವಣೆಗೆ ಮನಸ್ಸು. ಶುಭಸಂಖ್ಯೆ:6

ಮೀನ: ಸಾಲ ತೀರಿಸಲು ಸ್ನೇಹಿತನ ಸಹಾಯ. ಆರ್ಥಿಕ ಮೋಸ, ನಷ್ಟ. ಮಾತಿನಿಂದ ತೊಂದರೆ. ಉದ್ಯೋಗ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net