

ಮೇಷ: ಆಧ್ಯಾತ್ಮಿಕ ನೇತಾರರಿಗೆ ಶುಭದಾಯಕದಿನ. ಕಾರ್ಖಾನೆ ಮಾಲೀಕರಿಗೆ ಹೊಸ ಮೂಲದಿಂದ ಲಾಭ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6
ವೃಷಭ: ನೇಕಾರರು ದೂರ ಪ್ರಯಾಣ ಮಾಡಬೇಕಾದೀತು. ರಾಜಕೀಯ ರಂಗದವರು ಎಚ್ಚರದಿಂದಿರಿ. ನಾಟ್ಯ ಕಲಾವಿದರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ: 8
ಮಿಥುನ: ಜಲ ಉತ್ಪನ್ನ ಮಾರಾಟದಲ್ಲಿ ಗಣನೀಯ ಸಾಧನೆ ಮಾಡುವಿರಿ. ಕುಶಲಕರ್ವಿುಗಳಿಗೆ ಬೇಡಿಕೆ ಹೆಚ್ಚಲಿದೆ. ಬಟ್ಟೆ ವ್ಯಾಪಾರದಲ್ಲಿ ಪ್ರಗತಿ. ಶುಭಸಂಖ್ಯೆ: 1
ಕಟಕ: ಮಗಳ ವಿವಾಹ ಯತ್ನದಲ್ಲಿ ಯಶ. ಕಬ್ಬಿಣ, ಸಿಮೆಂಟ್ ಖರೀದಿಯಲ್ಲಿ ನಿರೀಕ್ಷಿತ ಲಾಭ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 4
ಸಿಂಹ: ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ. ಪದವಿ ಪ್ರಾಪ್ತಿಗೆ ಇದ್ದ ಅಡ್ಡಿ ನಿವಾರಣೆ. ಔಷಧ ವ್ಯಾಪಾರದಲ್ಲಿ ಹೊಸಬರ ಆಗಮನ. ಶುಭಸಂಖ್ಯೆ:1
ಕನ್ಯಾ: ಷೇರು ವ್ಯವಹಾರದಲ್ಲಿ ಆತುರದ ಹೆಜ್ಜೆ ಬೇಡ. ಕ್ರೀಡಾಪಟುಗಳಿಗೆ ದೂರ ಪ್ರಯಾಣ ಯೋಗ. ವೈದ್ಯರಿಗೆ ಬೇಡಿಕೆ ಹೆಚ್ಚಾಗಲಿದೆ. ಶುಭಸಂಖ್ಯೆ: 5
ತುಲಾ: ಕಲಾವಿದರು ಸಿಕ್ಕ ಅವಕಾಶ ಸದುಪಯೋಗಪಡಿಸಿ ಕೊಳ್ಳಿ. ಉಪನ್ಯಾಸಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಟೆಂಡರ್ ಸಿಗಲಿದೆ. ಶುಭಸಂಖ್ಯೆ: 4
ವೃಶ್ಚಿಕ: ದೈಹಿಕ ಕಸರತ್ತಿನ ಮಳಿಗೆಯವರಿಗೆ ಲಾಭ. ವಾಹನ ಖರೀದಿಗೆ ನಿರ್ಧಾರ. ಭತ್ತ, ಜೋಳ ಕೃಷಿಕರಿಗೆ ಫಸಲಿಗೆ ಸೂಕ್ತ ಬೆಲೆ ಸಿಗಲಿದೆ. ಶುಭಸಂಖ್ಯೆ:1
ಧನುಸ್ಸು: ಗ್ರಂಥಿಗೆ ಅಂಗಡಿ ಸ್ಥಾಪನೆಗೆ ನಿರ್ಧಾರ. ತೆಂಗಿನಕಾಯಿ ಮಾರಾಟದಲ್ಲಿ ಲಾಭ. ವಿಮಾನ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:5
ಮಕರ: ಸರ್ಕಾರಿ ಕ್ಷೇತ್ರದ ಗುತ್ತಿಗೆ ಸಿಗಲಿದೆ. ಗೃಹ ನಿರ್ವಣಕ್ಕೆ ಬ್ಯಾಂಕಿನಿಂದ ಸಹಾಯ ಲಭಿಸುವುದು. ರೇಷ್ಮೆ ಕೃಷಿಯಲ್ಲಿ ಲಾಭ ಬರಲಿದೆ. ಶುಭಸಂಖ್ಯೆ:2
ಕುಂಭ: ದೈಹಿಕ ಶಿಕ್ಷಕರಿಗೆ ಬಡ್ತಿ. ವಿವಾಹ ಯತ್ನ ಸಫಲ. ನ್ಯಾಯಾಲಯದ ಕಟ್ಟಳೆ ಅಂತ್ಯವಾಗಲಿದೆ. ಹೂವು ಹಣ್ಣು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1
ಮೀನ: ಉದ್ಯಮಿ ಮಹಿಳೆಯರಿಗೆ ಶುಭದಿನ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಆದಾಯ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 7