

ಮೇಷ: ಹೊಸ ಹುದ್ದೆಯ ಪದವಿ ಸಿಗುವುದು. ಮಾಧ್ಯಮಮಿತ್ರರಿಗೆ ಕೀರ್ತಿ ದೊರೆಯುತ್ತದೆ. ಹಾಸ್ಯ ಸಂಭಾಷಣೆಕಾರರಿಗೆ ವಿಶೇಷ ದಿನ. ಶುಭಸಂಖ್ಯೆ:1
ವೃಷಭ: ಖರ್ಚಿಗೆ ತಕ್ಕಂತೆ ಆದಾಯ ಬರುವುದು. ಸಾಲ ಮರುಪಾವತಿ ಮಾಡುವಿರಿ. ಉದ್ಯೋಗದಲ್ಲಿ ಹೊಸ ಸಮಸ್ಯೆ ಕಾಣಿಸಿಕೊಳ್ಳಲಿದೆ. ಶುಭಸಂಖ್ಯೆ:8
ಮಿಥುನ: ವ್ಯಾಪಾರದಲ್ಲಿ ಅಲ್ಪ ಲಾಭ, ಕೋರ್ಟ್ ವ್ಯವಹಾರಗಳಲ್ಲಿ ಜಯ. ಸ್ಥಿರಾಸ್ತಿ ಮಾರಾಟ. ದ್ವಿಚಕ್ರವಾಹನದಿಂದ ತೊಂದರೆ. ಶುಭಸಂಖ್ಯೆ: 6
ಕಟಕ: ಟ್ರಾವೆಲ್ಸ್ ಏಜೆನ್ಸಿಯವರಿಗೆ ಚಾಲಕರಿಂದ ಕಿರಿಕಿರಿ. ಮಕ್ಕಳ ನಡವಳಿಕೆಯಿಂದ ಆತಂಕವಾಗುವುದು. ಸ್ವಂತ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 9
ಸಿಂಹ: ಆಸ್ಪತ್ರೆಗೆ ದಾಖಲಾಗುವ ಸಂದರ್ಭ. ಶತ್ರುಗಳಿಂದ ಪದವಿ ಕೈತಪ್ಪಲಿದೆ. ಸಂತಾನ ಪ್ರಾಪ್ತಿಯ ಸೂಚನೆ. ಚಿಕ್ಕ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ಕನ್ಯಾ: ನಿಮ್ಮ ಕಾರ್ಯ ಸಾಧನೆಯಿಂದ ಸಂಸ್ಥೆಗೆ ಲಾಭ, ಲೇವಾದೇವಿ ವ್ಯವಹಾರದಲ್ಲಿ ಮೋಸ . ನಿಮ್ಮ ಪ್ರತಿಭೆಗೆ ಜನರಿಂದ ಪ್ರಶಂಸೆ. ಶುಭಸಂಖ್ಯೆ: 2
ತುಲಾ:ಗೃಹ ನಿರ್ಮಾಣ ಪೂರ್ತಿಗೊಂಡಿದ್ದರಿಂದ ಸಮಾಧಾನ. ಸಾಹಸ ಕಲಾವಿದರಿಗೆ ಯಶ. ಗೃಹ ಕೈಗಾರಿಕೆ ಸ್ಥಾಪನೆಗೆ ಧನ ಸಹಾಯ. ಶುಭಸಂಖ್ಯೆ:8
ವೃಶ್ಚಿಕ: ಸಗಟು ವ್ಯವಹಾರಗಳಲ್ಲಿ ಚೇತರಿಕೆ ಕಾಣುವಿರಿ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸವಾಲುಗಳಿಂದ ಕೆಲಸಕ್ಕೆ ಪ್ರೇರಣೆ. ಶುಭಸಂಖ್ಯೆ:1
ಧನುಸ್ಸು: ಶತ್ರುಗಳಿಂದ ನಿಮ್ಮ ಪ್ರಗತಿಗೆ ತೊಂದರೆಯಾಗುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಬಂಧುಗಳಿಂದ ಮಾರ್ಗದರ್ಶನ. ಶುಭಸಂಖ್ಯೆ:6
ಮಕರ: ಮಕ್ಕಳ ಪ್ರಗತಿಯಿಂದ ಸಂತಸವಾಗಲಿದೆ. ಕೆಲಸದ ಒತ್ತಡದಿಂದಾಗಿ ಅನಾರೋಗ್ಯ ಸಮಸ್ಯೆ ಕಾಡೀತು. ತೀರ್ಥಕ್ಷೇತ್ರ ದರ್ಶನ. ಶುಭಸಂಖ್ಯೆ:2
ಕುಂಭ: ಕಲಾವಿದರಿಗೆ ಪರಿಶ್ರಮಕ್ಕೆ ತಕ್ಕುದಾದ ಫಲ ಸಿಗಲಿದೆ. ನಾಟ್ಯ ಕಲಾವಿದರು ಮತ್ತು ಚಿತ್ರಕಾರರಿಗೆ ಸಮಾಜದಲ್ಲಿ ಉತ್ತಮ ಹೆಸರು. ಶುಭಸಂಖ್ಯೆ: 9
ಮೀನ: ಉನ್ನತ ಶಿಕ್ಷಣಕ್ಕಾಗಿ ಪ್ರಯಾಣ, ಕುಟುಂಬದ ಸದಸ್ಯರೊಂದಿಗೆ ಔತಣ ಕೂಟ. ಹೃದಯಸಂಬಂಧಿ ತೊಂದರೆ. ವೈದ್ಯರ ಭೇಟಿ. ಶುಭಸಂಖ್ಯೆ: 5