

ಮೇಷ: ಐಟಿ ಉದ್ಯೋಗಿಗಳಿಗೆ ಕೆಲಸ ನಷ್ಟದ ಭೀತಿ. ಲೆಕ್ಕಪರಿಶೋಧಕರಿಗೆ ಶುಭ. ವಿದ್ಯುತ್ ಮಂಡಳಿ ಅಧಿಕಾರಿಗಳಿಗೆ ಪದವಿ ಸಿಗಲಿದೆ. ಶುಭಸಂಖ್ಯೆ: 6
ವೃಷಭ: ಸಾಂಪ್ರದಾಯಿಕ ವೈದ್ಯರಿಗೆ ಸನ್ಮಾನ ಪುರಸ್ಕಾರ. ಧಾರ್ವಿುಕ ವೃತ್ತಿಪರರಿಗೆ ಅಧಿಕ ಧನ ಲಾಭ. ದೂರದ ಊರಿಗೆ ಪ್ರಯಾಣ. ಶುಭಸಂಖ್ಯೆ: 9
ಮಿಥುನ: ಆಲಸ್ಯ ಮನೋಭಾವದಿಂದ ಅವಕಾಶ ವಂಚಿತ ರಾಗುವಿರಿ. ಕೌಟುಂಬಿಕ ಕಲಹ ಆರಕ್ಷಕ ಠಾಣೆ ಮೆಟ್ಟಿಲೇರೀತು. ಕೃಷಿಯಲ್ಲಿ ನಷ್ಟ. ಶುಭಸಂಖ್ಯೆ:9
ಕಟಕ: ಪೀಠೋಪಕರಣ ವ್ಯಾಪಾರದಲ್ಲಿ , ಜೇನು ಮಾರಾಟದಲ್ಲಿ ಲಾಭ. ಹೋಟೆಲ್ ಮತ್ತು ವಸತಿಗೃಹ ಮಾಲೀಕರಿಗೆ ದ್ವಿಗುಣ ಲಾಭ. ಶುಭಸಂಖ್ಯೆ: 8
ಸಿಂಹ: ಕ್ರೀಡಾಪಟುಗಳಿಗೆ ದೈಹಿಕ ಅಸಮರ್ಥತೆ ಕಾಡಲಿದೆ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. ದಿನಾಂತ್ಯದಲ್ಲಿ ಅಶುಭ. ಶುಭಸಂಖ್ಯೆ: 4
ಕನ್ಯಾ: ಮೊಮ್ಮಗಳ ಮದುವೆಗೆ ಸ್ನೇಹಿತನಿಂದ ಆರ್ಥಿಕ ಸಹಾಯ. ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ. ಪ್ರಭಾವಿಗಳ ಸಂಪರ್ಕ. ಶುಭಸಂಖ್ಯೆ: 2
ತುಲಾ: ಆರ್ಥಿಕ ಸ್ಥಿರತೆ ಕಾಡಲಿದೆ. ಆಹಾರ ವ್ಯತ್ಯಾಸ ದಿಂದಾಗಿ ಅನಾರೋಗ್ಯ ಕಾಡೀತು. ಪಿತ್ರಾರ್ಜಿತ ಆಸ್ತಿ ವಿಭಾಗವಾಗುವ ಸಾಧ್ಯತೆಯಿದೆ.ಶುಭಸಂಖ್ಯೆ: 6
ವೃಶ್ಚಿಕ: ವಿದೇಶದಲ್ಲಿರುವ ಹೆಣ್ಣು ಮಕ್ಕಳಿಂದ ಅನುಕೂಲ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ. ಸ್ವಂತ ಕೆಲಸದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 4
ಧನುಸ್ಸು: ವಾಣಿಜ್ಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಬಟ್ಟೆ ಗಿರಣಿ ಮಾಲೀಕರಿಗೆ ಅಧಿಕ ಲಾಭ. ಪತ್ರಕರ್ತರು, ಸಾಹಿತಿಗಳಿಗೆ ಸನ್ಮಾನ. ಶುಭಸಂಖ್ಯೆ:1
ಮಕರ: ಹೊಸ ಹೂಡಿಕೆದಾರರು ಆಗಮಿಸುವರು. ಆರಕ್ಷಕರಿಗೆ ಪ್ರಮೋಷನ್ ಸಿಗಲಿದೆ. ಸಣ್ಣ ಉದ್ಯಮ ಆರಂಭಿಸಲು ಸುಸಮಯ.ಶುಭಸಂಖ್ಯೆ: 9
ಕುಂಭ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಗೊಂದಲ. ಕುಟುಂಬ ಸಮೇತ ಕುಲದೇವತಾ ದರ್ಶನ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 3
ಮೀನ: ಔಷಧಿ ವ್ಯಾಪಾರದಲ್ಲಿ ಹಣ ಮಾಡುವುದು ಸಲ್ಲದು. ಕಲಾವಿದರಿಗೆ ಅನಿರೀಕ್ಷಿತ ಧನ ಲಾಭ. ವಿದೇಶದಿಂದ ಮಕ್ಕಳ ಆಗಮನ. ಶುಭಸಂಖ್ಯೆ:8