

ಮೇಷ: ಪಾಲುದಾರಿಕೆಯ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ. ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸಿಕೊಳ್ಳಿ. ನಟರಿಗೆ ಯಶಸ್ಸು. ಶುಭಸಂಖ್ಯೆ:1
ವೃಷಭ: ಉದ್ಯೋಗಾಕಾಂಕ್ಷಿಗಳಿಗೆ ಅಶುಭ ಫಲ. ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ. ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 8
ಮಿಥುನ: ಆಧ್ಯಾತ್ಮಿಕ ವಿಷಯಗಳಲ್ಲಿ ಒಲವು. ಕಟ್ಟಡ ನಿರ್ವಣದ ಸಾಮಗ್ರಿಗಳ ವ್ಯಾಪಾರದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳಿಗೆ ಅನಾಸಕ್ತಿ. ಶುಭಸಂಖ್ಯೆ: 6
ಕಟಕ: ಕುಟುಂಬಸ್ಥರಿಂದ ಮನೆ ಕಟ್ಟಲು ಸಹಾಯ ಸಿಗಲಿದೆ. ಆದಾಯದಲ್ಲಿ ಹೆಚ್ಚಳ. ನಿಮ್ಮಹೊಸ ಯೋಜನೆಯಿಂದ ನಿರೀಕ್ಷಿತ ಲಾಭ. ಶುಭಸಂಖ್ಯೆ: 9
ಸಿಂಹ: ಆಹಾರಧಾನ್ಯಗಳ ವ್ಯಾಪಾರದಲ್ಲಿ ಲಾಭ. ತಾಂತ್ರಿಕ ತರಬೇತಿ ಪಡೆಯುವವರಿಗೆ ಉದ್ಯೋಗ ಪ್ರಾಪ್ತಿ. ಸ್ತ್ರೀಯರಿಗೆ ಅಶುಭ ಫಲ. ಶುಭಸಂಖ್ಯೆ:3
ಕನ್ಯಾ: ಸಹೋದರರೊಂದಿಗೆ ಮನಸ್ತಾಪವಾದೀತು. ವ್ಯಾಪಾರದಲ್ಲಿ ನಿರಾಸಕ್ತಿ. ಉಪನ್ಯಾಸಕರು ಮತ್ತು ಅಧ್ಯಾಪಕರಿಗೆ ಅನುಕೂಲ. ಶುಭಸಂಖ್ಯೆ: 2
ತುಲಾ: ಮಕ್ಕಳ ಆರೋಗ್ಯದಲ್ಲಿ ತೊಂದರೆ. ಬುದ್ಧಿವಂತಿಕೆಯ ನಿರ್ಧಾರಗಳಿಂದ ಶುಭ. ಕೋಪದಿಂದ ಕೆಲಸ ಕಳೆದುಕೊಳ್ಳುವ ಸಾಧ್ಯತೆ. ಶುಭಸಂಖ್ಯೆ:7
ವೃಶ್ಚಿಕ: ಹೃದಯ ಸಂಬಂಧಿ ರೋಗ ಉಲ್ಬಣವಾಗುವುದು. ವಿಚ್ಛೇದಿತ ಸ್ತ್ರೀಯರಿಗೆ ಮರುವಿವಾಹ ಯೋಗ. ತಾಯಿಗೆ ಅನಾರೋಗ್ಯ. ಶುಭಸಂಖ್ಯೆ:5
ಧನಸ್ಸು: ರಾಜಕಾರಣಿಗಳಿಗೆ ತೊಂದರೆ. ಹಿರಿಯ ಅಧಿಕಾರಿಗಳಿಗೆ ಸಹವರ್ತಿಗಳಿಂದ ತೊಂದರೆ. ಸಾರಿಗೆ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 3
ಮಕರ: ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಒತ್ತಡ. ಹೃದ್ರೋಗ ತಜ್ಞರಿಗೆ ಅನುಕೂಲ. ಹೋಂ ಮೇಡ್ ಪದಾರ್ಥ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 2
ಕುಂಭ: ಪತ್ರಿಕಾ ಪ್ರತಿನಿಧಿಗಳಿಗೆ ಪ್ರಗತಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವಿರಿ. ಮನಸ್ಸಿನಲ್ಲಿ ಆರ್ಥಿಕ ಹೊಂದಾಣಿಕೆಯ ಚಿಂತೆ. ಶುಭಸಂಖ್ಯೆ: 8
ಮೀನ: ಶಿಕ್ಷಕರಿಗೆ ವರ್ಗಾವಣೆ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ಮೋಸ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಕೂಡಿ ಬರಲಿದೆ. ಶುಭಸಂಖ್ಯೆ: 9