ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಮರೆತು ಹೋದ ಹಣ ದೊರಕುವುದು

Nitya Bhavisya Vijayavani
Published on

ಮೇಷ: ಮಕ್ಕಳಿಂದ ತೊಂದರೆಯಾಗುವುದು. ಮನೆ ನಿರ್ಮಾಣ ಅರ್ಧಕ್ಕೆ ಸ್ಥಗಿತವಾಗಿ ಬೇಸರ. ಸ್ವಂತ ವಾಹನ ಮಾರಾಟ ಸಂಭವ. ಶುಭಸಂಖ್ಯೆ: 5

ವೃಷಭ: ಪ್ರತಿಭಾನ್ವಿತ ಮಹಿಳೆಯರಿಗೆ ಯಶಸ್ಸು. ವಿದ್ಯಾರ್ಥಿಗಳಿಗೆ ಸ್ನೇಹಿತರಿಂದ ತೊಂದರೆ. ಮಕ್ಕಳಿಂದ ಶುಭ ಸುದ್ದಿ ಬಂದು ಸಂತಸ. ಶುಭಸಂಖ್ಯೆ: 9

ಮಿಥುನ: ಉತ್ತಮ ಧನ ಸಂಪಾದನೆ. ಅನಿರೀಕ್ಷಿತವಾಗಿ ಅದೃಷ್ಟ ಬರುವುದು. ಗುಪ್ತನಿಧಿ ಲಭಿಸುವುದು. ಮರೆತು ಹೋದ ಹಣ ದೊರಕುವುದು. ಶುಭಸಂಖ್ಯೆ: 7

ಕಟಕ: ನಿಮ್ಮಒಳ್ಳೆಯತನದ ದುರುಪಯೋಗವಾದೀತು. ಕಚೇರಿಯಲ್ಲಿ ಅಪವಾದದಿಂದ ಪಾರು. ಧಾರ್ವಿುಕ ಕೆಲಸದಿಂದ ಧನಾರ್ಜನೆ. ಶುಭಸಂಖ್ಯೆ: 8

ಸಿಂಹ: ಹಿತ ಶತ್ರುಗಳ ಕಾಟ. ಆರ್ಥಿಕ ಸ್ಥಿತಿ ಉತ್ತಮ ವಾಗಿರುವುದು. ಅಪರಿಚಿತ ವ್ಯಕ್ತಿಗಳಿಂದ ಸಹಾಯ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 2

ಕನ್ಯಾ: ಹಣಕ್ಕೆ ತೊಂದರೆ ಆಗಬಹುದು. ಭೂ ವ್ಯವಹಾರದಲ್ಲಿ ದೊಡ್ಡ ನಷ್ಟವಾದೀತು. ಸಂತಾನ ಆಕಾಂಕ್ಷಿಗಳು ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ: 3

ತುಲಾ: ಕೆಲಸದ ಒತ್ತಡ. ಉದ್ಯೋಗಸ್ಥ ಮಹಿಳೆಯರಿಗೆ ಹಿಂಬಡ್ತಿ. ಖರೀದಿಗೆ ಹೆಚ್ಚು ಹಣ ವೆಚ್ಚವಾಗುವುದು. ವಿದೇಶ ಪ್ರಯಾಣ ರದ್ದು. ಶುಭಸಂಖ್ಯೆ:7

ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ. ಔಷಧಿ ಮಾರಾಟಗಾರರಿಗೆ ಒತ್ತಡ. ದಿನಸಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭ ಬರುವುದು. ಶುಭಸಂಖ್ಯೆ:1

ಧನಸ್ಸು: ಧಾರ್ವಿುಕ ಕ್ಷೇತ್ರದ ವೃತ್ತಿ ನಿರತರಿಗೆ ಅನಿರೀಕ್ಷಿತ ಧನ ಲಾಭ. ಆಹಾರ ಪದಾರ್ಥಗಳ ವ್ಯಾಪಾರದಲ್ಲಿ ನಿರೀಕ್ಷೆಗಿಂತ ಅಧಿಕ ಲಾಭ. ಶುಭಸಂಖ್ಯೆ: 3

ಮಕರ: ಚುರುಕತನದಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಸರ್ಕಾರದಿಂದ ಅನುದಾನ ಸಿಗಲಿದೆ. ಮಗಳಿಗೆ ವಿವಾಹ ಯೋಗ. ಶುಭಸಂಖ್ಯೆ: 9

ಕುಂಭ: ಅಡಕೆ ಮಂಡಿಯಲ್ಲಿ ಹಣ ಸಹಾಯ ಸಿಗಲಿದೆ. ರತ್ನ ವ್ಯಾಪಾರದಲ್ಲಿ ಲಾಭ. ಹೋಟೆಲ್ ವ್ಯವಹಾರದಲ್ಲಿ ಕೆಲಸಗಾರರ ಸಮಸ್ಯೆ. ಶುಭಸಂಖ್ಯೆ: 4

ಮೀನ: ವ್ಯಾಪಾರದಲ್ಲಿ ಲಾಭವಿದೆ. ಸರ್ಕಾರಿ ಕೆಲಸಗಳಲ್ಲಿ ಜಯ. ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ. ಮಿತ್ರರೊಂದಿಗೆ ಪ್ರಯಾಣ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net