

ಮೇಷ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುವ ಸಾಧ್ಯತೆ. ಮಾನಸಿಕ ನೋವು ಕಾಡಲಿದೆ. ವೈದ್ಯರಿಗೆ ವಿಶೇಷ ದಿನ. ಶುಭಸಂಖ್ಯೆ: 5
ವೃಷಭ: ಬಂಧುಗಳಿಂದ ಅಪನಿಂದನೆ ಎದುರಿಸಬೇಕಾದೀತು. ಸಾಲಕೊಡುವ ವ್ಯವಹಾರಗಳಿಂದ ಸಂಕಷ್ಟ. ಆರ್ಥಿಕ ನಷ್ಟವಾದೀತು. ಶುಭಸಂಖ್ಯೆ: 9
ಮಿಥುನ: ಗೃಹ ನಿರ್ಮಾಣ ಆರಂಭಕ್ಕೆ ಅನುಕೂಲಕರ ದಿವಸ. ಹಣ ಹೊಂದಿಸುವ ಯೋಚನೆ. ಉದರ ಸಂಬಂಧಿ ರೋಗ ಕಾಡಲಿದೆ. ಶುಭಸಂಖ್ಯೆ: 9
ಕಟಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಸ್ವಂತ ವ್ಯಾಪಾರಕ್ಕೆ ಸಿದ್ಧತೆ. ಮಕ್ಕಳು ವಿದೇಶ ಪ್ರಯಾಣ ಮಾಡುವ ಸಂದರ್ಭ. ಶುಭಸಂಖ್ಯೆ:9
ಸಿಂಹ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಅತಿಆಹಾರ ಸೇವನೆಯಿಂದ ತೊಂದರೆ. ಕಾನೂನು ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ. ಶುಭಸಂಖ್ಯೆ:1
ಕನ್ಯಾ: ಉದ್ಯೋಗ ನಿಮಿತ್ತ ನೆರೆರಾಜ್ಯಕ್ಕೆ ಪ್ರಯಾಣ. ನಟನಾ ಕ್ಷೇತ್ರದಲ್ಲಿ ವಾಗ್ವಾದ, ಕಲಹ. ನಿಮ್ಮ ಸ್ಥಾನಮಾನ ಬೇರೆಯವರ ಪಾಲು. ಶುಭಸಂಖ್ಯೆ:2
ತುಲಾ: ಉದ್ಯೋಗ ಒತ್ತಡ ಕಡಿಮೆಯಾಗುತ್ತದೆ. ಅನಿರೀಕ್ಷಿತ ಘಟನೆಯ ಸಾಧ್ಯತೆಯಿದೆ. ಮಾತಿನಿಂದ ಸಂಗಾತಿಯೊಂದಿಗೆ ಸಮಸ್ಯೆ. ಶುಭಸಂಖ್ಯೆ:3
ವೃಶ್ಚಿಕ: ನ್ಯಾಯಾಲಯದ ವ್ಯವಹಾರದಲ್ಲಿ ಕಾರ್ಯಸಿದ್ಧಿ. ತಂದೆಗೆ ಆರೋಗ್ಯ ಸಮಸ್ಯೆ. ಹಿರಿಯ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ. ಶುಭಸಂಖ್ಯೆ: 1
ಧನುಸ್ಸು: ಅವಿವಾಹಿತ ಯುವತಿಯರಿಗೆ ಮಾಂಗಲ್ಯಯೋಗ. ಉದ್ಯೋಗ ಸ್ಥಳದಲ್ಲಿ ಗೌರವ. ಮಹಿಳಾ ಕೃಷಿಕರಿಗೆ ಗೌರವ ಮನ್ನಣೆ ಸಿಗಲಿದೆ. ಶುಭಸಂಖ್ಯೆ:5
ಮಕರ: ಸ್ನೇಹಿತನ ಸಹಾಯದಿಂದ ಕ್ಲಿಷ್ಟ ಪರಿಸ್ಥಿತಿಯಿಂದ ಹೊರ ಬರುತ್ತೀರಿ. ಪಾಲುದಾರಿಕೆಯಲ್ಲಿ ಲಾಭ. ಸಾಲಗಾರರಿಂದ ಅತಿಕಿರಿಕಿರಿ. ಶುಭಸಂಖ್ಯೆ: 4
ಕುಂಭ: ನಿವೇಶನ ಖರೀದಿಗೆ ಅನುಕೂಲಕರ ದಿವಸ. ಷೇರು ವ್ಯವಹಾರದಲ್ಲಿ ಲಾಭವಾಗಲಿದೆ. ಸಾಂಪ್ರದಾಯಿಕ ವೈದ್ಯರಿಗೆ ಸವಾಲಿನ ದಿನ. ಶುಭಸಂಖ್ಯೆ:9
ಮೀನ: ಪ್ರೀತಿಸಿದವರಿಂದಲೇ ವಂಚನೆ. ಸ್ಥಿರಾಸ್ತಿ ಖರೀದಿಗೆ ನಿರ್ಧಾರ. ಕಲಾವಿದರಿಗೆ ಧನ ಸಹಾಯ ದೊರೆಯಲಿದೆ. ವಾದಕರಿಗೆ ಸನ್ಮಾನ. ಶುಭಸಂಖ್ಯೆ:5