

ಮೇಷ:ಉದ್ಯೋಗದಲ್ಲಿ ಅಸ್ಥಿರತೆ. ಕಾಫಿ ಬೆಳೆಗಾರರಿಗೆ ನಷ್ಟ ಸಂಭವ. ಐಟಿ ಉದ್ಯೋಗದ ಮಹಿಳೆಯರಿಗೆ ಕೆಲಸ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ:5
ವೃಷಭ:ಹಣ್ಣಿನ ವ್ಯಾಪಾರದಲ್ಲಿ ಅಧಿಕ ಧನಲಾಭ. ನಾಲ್ಕು ಚಕ್ರದ ವಾಹನ ಖರೀದಿಗೆ ನಿರ್ಧಾರ. ನೂತನ ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 9
ಮಿಥುನ: ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯಲಿದೆ. ಸಾರ್ವಜನಿಕವಾಗಿ ವರ್ತಿಸುವಾಗ ತಾಳ್ಮೆಯಿಂದಿರಿ. ಆತ್ಮೀಯ ಮಿತ್ರರೊಂದಿಗೆ ಕಲಹ. ಶುಭಸಂಖ್ಯೆ: 5
ಕಟಕ:ಟ್ರಾವೆಲ್ಸ್ ಮಾಲೀಕರಿಗೆ ನಷ್ಟ. ಮಕ್ಕಳ ಪರೀಕ್ಷೆಯ ಪ್ರಯತ್ನದಲ್ಲಿ ಆತಂಕ. ದಿನಸಿ ವ್ಯಾಪಾರದಲ್ಲಿ ಮೋಸ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 8
ಸಿಂಹ:ಸ್ನೇಹಿತರೊಂದಿಗೆ ಮನಸ್ತಾಪ. ಸ್ವಂತ ಉದ್ಯೋಗದಲ್ಲಿ ಯಶಸ್ಸು. ಹೊಸ ಹೂಡಿಕೆದಾರರಿಂದ ಉದ್ಯಮದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 4
ಕನ್ಯಾ:ಶಿಕ್ಷಕ ವೃತ್ತಿಯವರಿಗೆ ಅಭಿವೃದ್ಧಿಯಾಗಲಿದೆ. ಚಲನಚಿತ್ರ ನಿರ್ವಪಕರಿಗೆ ಅದೃಷ್ಟದ ದಿನ. ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ: 9
ತುಲಾ:ಆಪತ್ತಿನಲ್ಲಿ ಸ್ನೇಹಿತರಿಂದ ಸಹಕಾರ. ಉದ್ಯಮಸ್ಥ ಮಹಿಳೆಯರಿಗೆ ಒತ್ತಡ. ಸಾಲಗಾರರಿಂದ ಕಿರಿಕಿರಿ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 6
ವೃಶ್ಚಿಕ:ವಿದೇಶ ವ್ಯಾಪಾರದಿಂದ ಲಾಭ. ಮಹಿಳೆಯರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ. ಜೇನು ಕೃಷಿಕರಿಗೆ ವಿಶೇಷ ಲಾಭ. ಶುಭಸಂಖ್ಯೆ:2
ಧನುಸ್ಸು:ಸಾಮಾಜಿಕ ಹೋರಾಟದಲ್ಲಿ ಭಾಗಿ. ಭತ್ತ,ಅಡಿಕೆ ಬೆಳೆಗಾರರಿಗೆ ಲಾಭ. ಯಕ್ಷಗಾನ ಕಲಾವಿದರಿಗೆ ಸನ್ಮಾನ. ಅನಿರೀಕ್ಷಿತ ತಿರುವು. ಶುಭಸಂಖ್ಯೆ:2
ಮಕರ:ತಾಂತ್ರಿಕ ವಿದ್ಯಾರ್ಥಿಗಳಿಗೆ ಹೆಚ್ಚಿದ ಒತ್ತಡ. ನಾಟ್ಯ ಕಲಾವಿದರಿಗೆ ಬೇಡಿಕೆ. ವೀಸಾ ಸಮಸ್ಯೆಯಿಂದ ವಿದೇಶ ಪ್ರಯಾಣ ರದ್ದು. ಶುಭಸಂಖ್ಯೆ: 3
ಕುಂಭ:ಗೃಹ ನಿರ್ವಣಕ್ಕೆ ಚಾಲನೆ ನೀಡುವಿರಿ. ಪಿತ್ರಾರ್ಜಿತ ಆಸ್ತಿಯಿಂದ ಮನಸ್ತಾಪ. ಛಾಯಾಗ್ರಾಹಕರಿಗೆ ಹೆಚ್ಚಿದ ಧನ ಲಾಭ. ಶುಭಸಂಖ್ಯೆ: 1
ಮೀನ:ಅವಿವಾಹಿತರಿಗೆ ವಿವಾಹ ಸಿದ್ದಿ. ಮನೆಯಲ್ಲಿ ಶುಭ ಸಮಾರಂಭದ ಸಂಭ್ರಮ. ಪೋಷಕರು ಆಸ್ಪತ್ರೆಗೆ ದಾಖಲಾಗುವ ಸಂದರ್ಭ. ಶುಭಸಂಖ್ಯೆ: 1