

ಮೇಷ: ಆರ್ಥಿಕ ಕೊರತೆಗೆ ಪರಿಹಾರ ಸಿಗಲಿದೆ. ಮಾರುಕಟ್ಟೆಯಲ್ಲಿ ಖರೀದಿಸುವಾಗ ಹಣಕಾಸಿನಲ್ಲಿ ಹಿಡಿತವಿರಲಿ. ಭೂಲಾಭವಿದೆ. ಶುಭಸಂಖ್ಯೆ: 9
ವೃಷಭ: ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಶತ್ರುಗಳ ಮೇಲೆ ಜಯ. ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ:1
ಮಿಥುನ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಧಾರ್ವಿುಕ ವೃತ್ತಿಯವರಿಗೆ ಮಾನಸಿಕವಾಗಿ ಬಳಲಿಕೆ. ಪಾಲುದಾರಿಕೆಯಲ್ಲಿ ಅಧಿಕ ಲಾಭ. ಶುಭಸಂಖ್ಯೆ: 9
ಕಟಕ: ಸಂತಾನಾಕಾಂಕ್ಷಿಗಳಿಗೆ ಶುಭದಿನವಲ್ಲ. ಪಾಲುದಾರಿಕೆಯಲ್ಲಿ ಆದಾಯ ಬರುವುದು. ಹಿರಿಯ ಅಧಿಕಾರಿಗಳಿಗೆ ಸಮಸ್ಯೆ. ಶುಭಸಂಖ್ಯೆ:3
ಸಿಂಹ: ಬೇಕರಿ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಅನಿರೀಕ್ಷಿತವಾಗಿ ವಿದೇಶ ಪ್ರಯಾಣ ಸಾಧ್ಯತೆ. ಕುಟುಂಬದಲ್ಲಿ ಮನಸ್ತಾಪ. ಶುಭಸಂಖ್ಯೆ:1
ಕನ್ಯಾ: ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಬದಲಾವಣೆ. ವಾಹನ ಮಾಲೀಕರಿಗೆ ಖರ್ಚು. ಮಾವು, ಹಲಸಿನಿಂದ ಉತ್ತಮ ಆದಾಯ. ಶುಭಸಂಖ್ಯೆ:9
ತುಲಾ: ಅವಿವಾಹಿತರಿಗೆ ಶೀಘ್ರದಲ್ಲಿ ವಿವಾಹ ಯೋಗ. ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರದಲ್ಲಿ ಲಾಭ. ಕುಟುಂಬದೊಂದಿಗೆ ವಿಹಾರ. ಶುಭಸಂಖ್ಯೆ: 6
ವೃಶ್ಚಿಕ: ಇಲಾಖೆಯ ಪರೀಕ್ಷೆಗಳಲ್ಲಿ ತೇರ್ಗಡೆ. ದಿನಸಿ ಪದಾರ್ಥಗಳ ವ್ಯಾಪಾರದಲ್ಲಿ ಆದಾಯ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:8
ಧನುಸ್ಸು: ಔತಣ ಕೂಟಕ್ಕೆ ಅಂದಾಜಿಗಿಂತ ಅಧಿಕ ಖರ್ಚು. ರಾಜಕೀಯ ಪ್ರವೇಶಿಸಲು ಉತ್ತಮ ಕಾಲ. ಆತ್ಮವಿಶ್ವಾಸದ ಕೊರತೆ ನೀಗಿಸಿಕೊಳ್ಳಿ. ಶುಭಸಂಖ್ಯೆ:8
ಮಕರ: ಅನಿರೀಕ್ಷಿತ ಧನ ಲಾಭವಿದೆ. ಬರಹಗಾರರಿಗೆ ವಿಶೇಷ ಗೌರವ ದೊರಕಲಿದೆ. ಕಮಿಷನ್ ವ್ಯವಹಾರದಲ್ಲಿ ಉತ್ತಮ ಆದಾಯ. ಶುಭಸಂಖ್ಯೆ:5
ಕುಂಭ: ಆಸ್ತಿ ಪತ್ರಗಳ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ. ಹೈನುಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 2
ಮೀನ: ಸಣ್ಣ ವ್ಯವಹಾರದಲ್ಲಿ ಗಮನಾರ್ಹ ಲಾಭ. ಮಹಿಳಾ ರಾಜಕಾರಣಿಗಳಿಗೆ ಶುಭದಾಯಕವಲ್ಲ. ಹೃದಯ ಸಂಬಂಧಿ ತೊಂದರೆ. ಶುಭಸಂಖ್ಯೆ: 8