ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪ್ರೀತಿ ಪ್ರೇಮದ ವಿಷಯದಲ್ಲಿ ಜಯ

Nitya Bhavisya Vijayavani
Published on

ಮೇಷ:ಮಕ್ಕಳಿಂದ ಅನುಕೂಲ. ಅಣ್ಣನ ಆರೋಗ್ಯದಲ್ಲಿ ಏರುಪೇರು. ಕಾನೂನುಬಾಹಿರ ಚಟುವಟಿಕೆ ಉತ್ತೇಜಿಸುವ ವಾತಾವರಣ ಸೃಷ್ಟಿ. ಶುಭಸಂಖ್ಯೆ: 2

ವೃಷಭ:ಸಂಗಾತಿಯಿಂದ ನಿರಾಸೆ. ಹಳೇ ಘಟನೆ ಮರುಕಳಿಸುವುದು. ಹಣ್ಣಿನ ವ್ಯವಹಾರದಲ್ಲಿ ನಷ್ಟ. ಯಂತ್ರೋಪಕರಣಗಳಿಂದ ಪೆಟ್ಟು. ಶುಭಸಂಖ್ಯೆ:5

ಮಿಥುನ:ಉದ್ಯೋಗಸ್ಥ ಸ್ನೇಹಿತರಿಂದ ಸಂಕಷ್ಟ ಬಂದೊದಗೀತು. ಪಾಲುದಾರಿಕೆಯಲ್ಲಿ ನಷ್ಟ. ಲೋಹಗಳ ವ್ಯಾಪಾರಿಗಳಿಗೆ ಲಾಭವಾಗುವುದು.ಶುಭಸಂಖ್ಯೆ: 3

ಕಟಕ:ಆಹಾರ ಪದಾರ್ಥ ವ್ಯಾಪಾರಿಗಳಿಗೆ ಆರ್ಥಿಕ ನಷ್ಟ. ಅವಕಾಶಗಳು ತಪ್ಪುವುದು. ಅಧಿಕಾರಿಗಳಿಂದ ಕಿರಿಕಿರಿ. ಕೆಲಸಗಾರರ ಸಮಸ್ಯೆ. ಶುಭಸಂಖ್ಯೆ: 4

ಸಿಂಹ:ಕಾರ್ಯಗಳಲ್ಲಿ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಭೂ ವ್ಯವಹಾರಗಳಿಂದ ಧನಾಗಮನ. ಶುಭಸಂಖ್ಯೆ:1

ಕನ್ಯಾ:ಖರೀದಿಯಲ್ಲಿ ಮೋಸ. ಆಕಸ್ಮಿಕ ಅಪಘಾತದಿಂದ ಪಾರಾಗುವಿರಿ. ಬಂಧು ಬಾಂಧವರಿಂದ ನಷ್ಟ. ಪಿತ್ರಾರ್ಜಿತ ಆಸ್ತಿ ಸಮಸ್ಯೆ. ಶುಭಸಂಖ್ಯೆ:8

ತುಲಾ:ಮಕ್ಕಳಿಂದ ನೋವು, ಸಂಕಟ ಅನುಭವಿಸುವಿರಿ. ಪಾಲುದಾರಿಕೆಯಲ್ಲಿ ಲಾಭದ ಪ್ರಮಾಣ ಅಧಿಕ. ಕಾರ್ಯ ನಿಮಿತ್ತ ಪ್ರಯಾಣ. ಶುಭಸಂಖ್ಯೆ:9

ವೃಶ್ಚಿಕ: ಸ್ತ್ರೀಯರಿಗೆ ವಸ್ತ್ರ ಲಾಭವಿದೆ. ಹೊಸ ಉದ್ಯೋಗದಿಂದ ಧನಾಗಮನ. ಅಧಿಕಾರಿಗಳಿಂದ ಪ್ರಶಂಸೆ. ವ್ಯವಹಾರದಲ್ಲಿ ಅಡಚಣೆ. ಶುಭಸಂಖ್ಯೆ:4

ಧನುಸ್ಸು:ಪ್ರೀತಿ ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಗರ್ಭಿಣಿಯರಿಗೆ ಶುಭ ಸುದ್ದಿ. ಧರ್ಮ ಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ: 6

ಮಕರ:ಸಂಸಾರದ ವಿಷಯಕ್ಕೆ ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ತೊಂದರೆ. ಅಧಿಕಾರಿಯಿಂದ ಸಮಸ್ಯೆ. ಶುಭಸಂಖ್ಯೆ: 3

ಕುಂಭ:ನೂತನ ನಿವೇಶನ ದೊರೆತು ಸಂತಸ. ಪಾಲುದಾರಿಕೆ ಯಲ್ಲಿ ಮನಸ್ತಾಪ. ಉದ್ಯೋಗ ಲಾಭವಾಗುವುದು. ಆಸ್ತಿ ವಿಷಯದಲ್ಲಿ ಚರ್ಚೆ. ಶುಭಸಂಖ್ಯೆ: 5

ಮೀನ:ಮಕ್ಕಳಿಂದ ಧನಾಗಮನ. ವಿದೇಶ ಪ್ರಯಾಣದಲ್ಲಿ ಅಡೆತಡೆ. ಆರೋಗ್ಯದಲ್ಲಿ ವ್ಯತ್ಯಾಸ. ಮನೆಯ ವಾತಾವರಣದಲ್ಲಿ ಆತಂಕ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net