ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೋರ್ಟ್ ಕೇಸ್​ಗಳಲ್ಲಿ ಜಯ

Nitya Bhavisya Vijayavani
Published on

ಮೇಷ: ಸ್ಥಿರಾಸ್ತಿ ಮಾರಾಟದಿಂದ ಲಾಭವಾಗುವುದು. ಸರ್ಕಾರಿ ವಕೀಲರಿಗೆ ಬಡ್ತಿ. ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ವೇತನ ಹೆಚ್ಚಳ ಸಾಧ್ಯತೆ. ಶುಭಸಂಖ್ಯೆ: 9

ವೃಷಭ: ನಿಮ್ಮ ಪರಿಶ್ರಮಕ್ಕೆ ತಕ್ಕ ಗೌರವ. ಮಹಿಳೆಯರಿಗೆ ಉದ್ಯೋಗದಲ್ಲಿ ಬದಲಾವಣೆ. ಮನಸ್ಸಿನ ಆತಂಕ- ಗಾಬರಿಯಿಂದ ಹೊರಬನ್ನಿ. ಶುಭಸಂಖ್ಯೆ: 9

ಮಿಥುನ: ಸಹೋದರನಿಂದ ಅನುಕೂಲ. ಧನಾಗಮನ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಸಿಗಲಿದೆ. ಕೋರ್ಟ್ ಕೇಸ್​ಗಳಲ್ಲಿ ಜಯ. ಶುಭಸಂಖ್ಯೆ: 6

ಕಟಕ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪ್ರಗತಿ. ತೆರಿಗೆ ಅಧಿಕಾರಿಗಳಿಗೆ ದೂರ ಪ್ರಯಾಣ. ನ್ಯಾಯಾಲಯದ ಕಾರ್ಯಗಳಲ್ಲಿ ಆಸಕ್ತಿ. ಶುಭಸಂಖ್ಯೆ:3

ಸಿಂಹ: ಅಲಂಕಾರಿಕ ವಸ್ತು ಖರೀದಿಸುವಿರಿ. ಆಹಾರ-ನೀರು ವ್ಯತ್ಯಾಸದಿಂದ ಸ್ವಲ್ಪ ಅನಾರೋಗ್ಯ ಕಾಡೀತು. ದಾಂಪತ್ಯದಲ್ಲಿ ಸಂತೋಷ. ಶುಭಸಂಖ್ಯೆ: 4

ಕನ್ಯಾ: ಮಿತ್ರರಿಂದ ಬಡ್ಡಿಗೆ ಸಾಲ ಸಿಗಲಿದೆ. ಸಂಗಾತಿಗೆ ಉದ್ಯೋಗ ಬದಲಾವಣೆ. ಖಾಸಗಿ ನರ್ಸಿಂಗ್ ಹೋಮ್ ಸ್ಥಾಪನೆಗೆ ಯೋಜನೆ. ಶುಭಸಂಖ್ಯೆ: 9

ತುಲಾ: ಸರ್ಕಾರಿ ಉದ್ಯೋಗದಲ್ಲಿ ಬಡ್ತಿ. ಬಹಳ ದಿನಗಳ ಕನಸು ಸಾಕಾರವಾಗಲಿದೆ. ಫ್ಯಾನ್ಸಿ ಸ್ಟೋರ್ ಮಾಲೀಕರಿಗೆ ಲಾಭ ಬರುವುದು. ಶುಭಸಂಖ್ಯೆ:3

ವೃಶ್ಚಿಕ: ನೂತನ ಗೃಹ ಆರಂಭಕ್ಕೆ ಸಿದ್ಧತೆ. ಮಿತ್ರರು-ಸಹೋದರ ನಿಂದ ಸಾಲ ತೀರಿಸಲು ಸಹಾಯ. ಚೀಟಿ ವ್ಯವಹಾರಸ್ಥರಿಗೆ ಲಾಭ. ಶುಭಸಂಖ್ಯೆ: 4

ಧನುಸ್ಸು: ಉದ್ಯೋಗ ಸ್ಥಳದಲ್ಲಿ ಸ್ನೇಹಿತರಿಂದ ಸಹಾಯ. ಸಾರ್ವಜನಿಕ ರಂಗದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಶುಭಸಂಖ್ಯೆ:5

ಮಕರ: ಕುಟುಂಬದಲ್ಲಿ ಆಹ್ಲಾದಕರ ಕ್ಷಣ. ರಾಜಕೀಯದಲ್ಲಿ ಅನಗತ್ಯ ಮಾತುಗಳಿಂದ ವಿವಾದ. ಪಾಲುದಾರಿಕೆ ಯಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ:9

ಕುಂಭ: ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ದಾಂಪತ್ಯದಲ್ಲಿ ಕಲಹಕ್ಕೆ ಪರಿಹಾರ ಸಿಗಲಿದೆ. ಉದ್ಯೋಗ ಬದಲಾಯಿಸುವ ಆಲೋಚನೆ. ಶುಭಸಂಖ್ಯೆ: 6

ಮೀನ: ಮಕ್ಕಳಿಗಾಗಿ ಅಧಿಕ ಪ್ರಮಾಣದಲ್ಲಿ ಹಣ ಖರ್ಚಾಗಬಹುದು. ಬ್ಯಾಂಕ್ ಉದ್ಯೋಗಿಗಳಿಗೆ ಶುಭದಿನ. ಸಂತೋಷದ ವಾತಾವರಣ ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net