ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿವಾಹ ಯೋಗ

Nitya Bhavisya Vijayavani
Published on

ಮೇಷ:ಕ್ರೀಡಾಪಟುಗಳಿಗೆ ಸೌಲಭ್ಯಗಳು ದೊರೆಯುವವು. ಕೃಷಿಕರಿಗೆ ಆದಾಯವಿದೆ. ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 9

ವೃಷಭ:ಸಾಲ ಮರುಪಾವತಿಯಿಂದ ನೆಮ್ಮದಿ. ಗುರಿ ತಲುಪಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಹಣ ಹೂಡಿಕೆಯಲ್ಲಿ ಎಚ್ಚರ ಇರಲಿ. ಶುಭಸಂಖ್ಯೆ:1

ಮಿಥುನ: ಬೆಂಕಿಯಿಂದ ಎಚ್ಚರ ವಹಿಸಿ. ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ನಿರೀಕ್ಷಿತ ಲಾಭ. ಗೃಹ ನಿರ್ವಣದಲ್ಲಿ ಆತುರ ಬೇಡ. ಶುಭಸಂಖ್ಯೆ:5

ಕಟಕ:ಕೃಷಿ ವರ್ಗದವರಿಗೆ ಸಹಾಯಧನ ಲಭ್ಯವಾಗುವುದು. ಮಕ್ಕಳ ವಿಷಯದಲ್ಲಿ ಸಂಯಮದಿಂದಿರಿ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 9

ಸಿಂಹ:ರಂಗಕರ್ವಿುಗಳಿಗೆ ಶುಭದಾಯಕ ದಿನ. ಉದ್ಯೋಗ ಸ್ಥಳದಲ್ಲಿ ಆಂತರಿಕ ಕಲಹ ಉಂಟಾಗಬಹುದು. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:1

ಕನ್ಯಾ: ರಾಸಾಯನಿಕ ವಸ್ತುಗಳ ತಯಾರಿಕರಿಗೆ ಬೇಡಿಕೆ. ಪ್ರಿಯ ಜನರ ಭೇಟಿ. ವ್ಯವಹಾರದಲ್ಲಿ ದೃಷ್ಟಿ ದೋಷ ಅಡ್ಡಿ ಉಂಟು ಮಾಡೀತು. ಶುಭಸಂಖ್ಯೆ: 8

ತುಲಾ: ಪುಣ್ಯ ಕ್ಷೇತ್ರ ದರ್ಶನ ಮಾಡುವಿರಿ. ಅತಿ ಬುದ್ಧಿವಂತಿಕೆ ಪ್ರದರ್ಶನ. ಅಮೂಲ್ಯ ವಸ್ತು ಕಳವು. ಕಲಾವಿದರಿಗೆ ಸನ್ಮಾನದಿಂದ ಸಂತಸ. ಶುಭಸಂಖ್ಯೆ:2

ವೃಶ್ಚಿಕ:ವಾಹನ ಖರೀದಿ ಮಾಡುವ ಸಂಭವವಿದೆ. ಸ್ಥಿರಾಸ್ತಿ ಪ್ರಾಪ್ತಿ. ಕುಟುಂಬದವರೊಂದಿಗೆ ತೀರ್ಥಯಾತ್ರೆಗೆ ಹೋಗುವ ಸಾಧ್ಯತೆ. ಶುಭಸಂಖ್ಯೆ: 6

ಧನುಸ್ಸು: ಹಣಕಾಸಿನ ವಿಚಾರದಲ್ಲಿ ಪರಿಸ್ಥಿತಿ ಉತ್ತಮ. ಪ್ರತಿಷ್ಠಿತ ಜನರ ಪರಿಚಯ. ಬಾಕಿ ವಸೂಲಿ ಆಗುವುದು. ಅಪರಿಚಿತದಿಂದ ಮೋಸ. ಶುಭಸಂಖ್ಯೆ:3

ಮಕರ: ವಿವಾಹ ಯೋಗ. ಪ್ರವಾಸೋದ್ಯಮ ಸಂಸ್ಥೆಯವರಿಗೆ ಶುಭ. ಐಷಾರಾಮಿ ಜೀವನದ ಬಗ್ಗೆ ಜಿಗುಪ್ಸೆ. ಆರೋಗ್ಯದಲ್ಲಿ ತೊಂರೆ. ಶುಭಸಂಖ್ಯೆ:8

ಕುಂಭ:ತಾಂತ್ರಿಕ ತಜ್ಞರಿಗೆ ಶುಭ. ವಿದ್ಯಾರ್ಥಿಗಳಿಗೆ ಪ್ರಗತಿ. ನಿರೀಕ್ಷಿಸಿದ ಕೆಲಸ ಕಾರ್ಯ ಆಗುವುದು. ರಾಜಕೀಯದವರಿಗೆ ಪದವಿ ಪ್ರಾಪ್ತಿ. ಶುಭಸಂಖ್ಯೆ:4

ಮೀನ:ವಿದೇಶಿ ವಸ್ತುಗಳ ವ್ಯವಹಾರದಲ್ಲಿ ಇರುವವರಿಗೆ ತುಸು ಹಿನ್ನಡೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಶುಭ. ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net